ನಾನು ಅಂತರಾಷ್ತ್ರೀಯ ಮಟ್ಟದಲ್ಲಿ ಗುರುರ್ತಿಸಿಕೊಂಡಿರುವ ಯುವ ವಿಜ್ಞಾನಿ ಎಂದು ಕರ್ನಾಟಕದ ದೊಡ್ಡ ದೊಡ್ಡ ವೇದಿಕೆಗಳಲ್ಲಿ, ಟಿವಿ ಷೋಗಳಲ್ಲಿ ಸನ್ಮಾನ ಮಾಡಿಸಿಕೊಳ್ಳುತ್ತಾ ಮೈನವಿರೇಳಿಸುವಂತೆ ಸ್ಪೀಚ್ ಕೊಡುತ್ತಾ ಬಂದಿದ್ದ ಡ್ರೋಣ್ ಪ್ರತಾಪ್ ಅವರ ಅಸಲಿ ಸತ್ಯ ಈಗ ರಾಜ್ಯದ ಜನರ ಮುಂದೆ ಬಯಲಾಗಿದೆ. ಇನ್ನು ಇವನ ಭಾಷಣ ಹಾಗೂ ಸಾಧನೆಯನ್ನ ಕೇಳಿದ ಎಷ್ಟೋ ಜನ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಬೈದಿದ್ದು ಉಂಟು..ಪ್ರತಾಪ್ ನನ್ನ ನೋಡಿ ಕಲಿಯಿರಿ ಅಂತ..ನೋವು ಅನುಭವಿಸಿದ್ದು ಉಂಟು ಪ್ರತಾಪ್ ನಂತಹ ಮಕ್ಕಳು ನಮಗೆ ಹುಟ್ಟಲಿಲ್ಲ ಎಂದು.
ಆದರೆ ಇಷ್ಟೆಲ್ಲಾ ಸುಳ್ಳುಗಳನ್ನ ಹೇಳಿರುವ ಪ್ರತಾಪ್ ಬಿಟಿವಿಯ ಲೈವ್ ಕಾರ್ಯಕ್ರಮದಲ್ಲಿ ಕುಳಿತು ತೋರಿಸಿದ ಡ್ರೋನ್ ಫೋಟೋ ಕೂಡ ಯಾರದ್ದೋ..ಇದನ್ನ ಸ್ವತಃ BTV ನಿರೂಪಕ ಕಿರಿಕ್ ಕೀರ್ತಿಯವರೇ ತಮ್ಮ ಫೇಸ್ಬುಕ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಕೇಳಿದ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಕೊಡದೆ I CANT DISCLOSE IT ಅಂತ ಹೇಳಿ ಮತ್ತೊಮ್ಮೆ ಕಾಗೆ ಆರಿಸಿದ್ದಾನೆ.

ತಾನು ಯುವ ವಿಜ್ನ್ಯಾನಿ ಎಂದು 82 ದೇಶಗಳನ್ನ ಸುತ್ತಿ ಬೇರೆ ಬೇರೆ ದೇಶಗಳ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಲಚ್ಚರ್ ಕೊಟ್ಟಿರುವುದಾಗಿ ಹೇಳಿಕೊಂಡು ನಟ ಜಗ್ಗೇಶ್ ಸೇರಿದಂತೆ ಮಠಾಧೀಶರುಗಳು ಧರ್ಮಸ್ಥಳ ಧರ್ಮಾಧಿಕಾರಿಗಳು ನಟ ಉಪೇಂದ್ರ, ರಾಜಕಾರಣಿಗಳು ಸೇರಿದಂತೆ ಇನ್ನು ಅನೇಕ ದೊಡ್ಡ ದೊಡ್ಡವರ ಜೊತೆ ಸುಳ್ಳು ಹೇಳಿಕೊಂಡು ತಿರುಗಾಡಿದ್ದಾನೆ. ಇನ್ನು ಈಗ ಡ್ರೋನ್ ಪ್ರತಾಪ್ ಮೇಲೆ ಕೇಸ್ ದಾಖಾಲಾಗಿದೆ. ಹೌದು ನಾನು ಡ್ರೋನ್ ಕಂಡುಹಿಡಿದಿದ್ದೇನೆ ಎಂದು ಹೇಳಿಕೊಂಡು ಅನೇಕರನ್ನ ವಂಚಿಸಿದ್ದಾನೆ ಎಂದು ಸಾಮಾಜಿಕ ಕಾರ್ಯಕರ್ತ ಜೇಕಬ್ ಜಾರ್ಜ್ಎಂಬುವವರು ಪೊಲೀಸ್ ಕಮೀಷನರ್ ಗೆ ದೂರು ನೀಡಿದ್ದಾರೆ.

ಜೇಕಬ್ ಜಾರ್ಜ್ ತಮ್ಮ ದೂರಿನಲ್ಲಿ ಹೇಳಿರುವುದು ಹೀಗೆ: ಡ್ರೋನ್ ಕಂಡುಹಿಡಿದಿದ್ದು ಅದರಲ್ಲಿ ಸಾಧನೆ ಮಾಡಿದ್ದೇನೆ ಎಂದು ಡ್ರೋನ್ ಪ್ರತಾಪ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕೋಟ್ಯಂತರ ರೂಪಾಯಿಗಳನ್ನ ಪಡೆಯುವುದಿದ್ದು ಈ ಮೂಲಕ ಜನರ ಹಣವನ್ನ ವಂಚಿಸಿದ್ದಾನೆ..ಇಷ್ಟೇ ಅಲ್ಲದೆ ರಾಜ್ಯ ಸೇರಿದಂತೆ ಇಡೀ ದೇಶಕ್ಕೆ ನಾನೊಬ್ಬ ಯುವ ವಿಜ್ನ್ಯಾನಿ ಅಂತ ಹೇಳಿಕೊಂಡು ಸುಳ್ಳು ಹೇಳಿ ಮೋಸ ಮಾಡಿದ್ದಾನೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಆಯುಕ್ತರಾಗಿರುವ ಭಾಸ್ಕರ್ ರಾವ್ ಅವರಿಗೆ ಮನವಿ ಮಾಡಿದ್ದಾರೆ.

ಇನ್ನು ಪ್ರತಾಪ್ ಹೇಳುವ ಹಾಗೆ ವಿದೇಶಗಳಲ್ಲಿ ಗೋಲ್ಡ್ ಮೇಡಲ್ಸ್ ಪಡೆದಿರುವುದಾಗಿ ಹೇಳಿದ್ದು ಅದೆಲ್ಲಾ ಸುಳ್ಳು..ಇದಲ್ಲದೆ ಹಲವಾರು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪೀಚ್ ಕೊಟ್ಟಿದ್ದು ತಪ್ಪು ಸಂದೇಶ ರವಾನೆ ಮಾಡಿದಂತಾಗಿದೆ ಎಂದು ಪ್ರತಾಪ್ ವಿರುದ್ಧ ಪ್ರಕರಣ ದಾಖಲಿಸಿ ಸತ್ಯವನ್ನ ಹೊರಗೆಳೆಯಬೇಕು..ಅವನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹಣವನ್ನ..ರಾಜ್ಯದಲ್ಲಿ ಹಗಲಿರುಳು ಶ್ರಮಿಸುತ್ತಿರುವ ವಿಜ್ನ್ಯಾನಿಗಳು ಅನೇಕರಿದ್ದು ಅವರಿಗೆ ಆ ಹಣವನ್ನ ಕೊಡಿಸಬೇಕೆಂದು ಜೇಕಬ್ ಜಾರ್ಜ್ ದೂರಿನಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.