ತನ್ನ ಮಗ ಪರೀಕ್ಷೆಯಲ್ಲಿ ತೆಗೆದ ಅಂಕಗಳ ಬಗ್ಗೆ ನಟ ಅನಿರುದ್ಧ ಹೇಳಿದ್ದೇನು ಗೊತ್ತಾ?ಜೇಷ್ಠ ವರ್ಧನ್ ತೆಗೆದ ಮಾರ್ಕ್ಸ್ ಎಷ್ಟು?

Entertainment
Advertisements

ಕನ್ನಡದ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಫೇಮಸ್ ಆದ ನಟ ಅನಿರುದ್ದ್. ಇದಕ್ಕೂ ಮೊದಲು ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರೂ ಅನಿರುದ್ದ್ ರವರಿಗೆ ಹೆಚ್ಚು ಹೆಸರನ್ನ ತಂದು ಕೊಟ್ಟಿದ್ದು ಹೆಚ್ಚು ಅಭಿಮಾನಿಗಳು ಸಿಕ್ಕಿದ್ದು ಇದೆ ಧಾರಾವಾಹಿಯಿಂದಲೇ. ಕೇವಲ ಸಿನಿಮಾ ಸೀರಿಯಲ್ ಮಾತ್ರವಲ್ಲದೆ ಕಿರುಚಿತ್ರ, ಡಾಕ್ಯುಮೆಂಟರಿ ಮೂಲಕ ಮನೆ ಮಾತಾಗಿದ್ದಾರೆ ನಟ ಅನಿರುದ್ದ್.

ಇನ್ನು ಅನಿರುದ್ದ್ ರವರ ಪುತ್ರ ಜೇಷ್ಠವರ್ಧನ್ ಕೂಡ ತನ್ನ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ. ತಮ್ಮ ಓದಿನ ಜೊತೆಗೆ ಕಲೆಯಲ್ಲೂ ತಮ್ಮನ್ನ ತೊಡಗಿಸಿಕೊಂಡಿದ್ದಾರೆ ಜೇಷ್ಠ ವರ್ಧನ್.ಇನ್ನು ಜೇಷ್ಠ ವರ್ಧನ್ ICIC ಸಿಲಿಬಸ್ ನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಬಂದ ಅಂಕಗಳ ಬಗ್ಗೆ ಹೇಳಿಕೊಂಡಿರುವ ಅನಿರುದ್ದ್ ಮಗನ ಸಾಧನೆ ಬಗ್ಗೆ ಕೊಂಡಾಡಿದ್ದಾರೆ. ಇನ್ನು ಜೇಷ್ಠ ವರ್ಧನ್ ICIC 10ನೇ ತರಗತಿಯಲ್ಲಿ ಶೇ 85% ಅಂಕಗಳನ್ನ ಪಡೆದಿದ್ದು ನಿಮ್ಮೆಲ್ಲರ ಆರೈಕೆ ಆಶೀರ್ವಾದದ ಫಲದಿಂದ ನಮ್ಮ ಮಗ ಈ ಸಾಧನೆ ಮಾಡಿದ್ದಾನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Advertisements

ಇನ್ನು ಅನಿರುದ್ದ್ ರವರ ಸ್ನೇಹಿತರೊಬ್ಬರು ಫೋನ್ ಮಾಡಿದ್ದು ನನ್ನ ಮಗಳಿಗೆ ತುಂಬಾ ಕಡಿಮೆ ಅಂಕಗಳು ಬಂದಿವೆ. ಇನ್ನು ಈ ಅಂಕಗಳಿಂದ ಒಳ್ಳೆಯ ಕಾಲೇಜಿನಲ್ಲಿ ಅಡ್ಮಿಷನ್ ಸಿಗೋದಿಲ್ಲ ಏನ್ ಮಾಡೋದು ಅಂತ ಕೇಳಿದ್ದು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಅನಿರುದ್ದ್ ಹೇಳಿದ್ದು ಎದು ಎಲ್ಲಾ ತಂದೆ ತಾಯಿಗಳಿಗೆ ಬರುವ ಸರ್ವೇ ಸಾಮಾನ್ಯವಾದ ಆತಂಕ. ಪ್ರತಿಯೊಬ್ಬ ತಂದೆ ತಾಯಿಗಳಿಗೂ ತಮ್ಮ ಮಕ್ಕಳು ತಮಗಿಂತ ಚೆನ್ನಾಗಿರಲಿ ಎಂಬ ಆಸೆ ಇರುತ್ತೆ ಎಂದು ಹೇಳಿರುವ ಅನಿರುದ್ದ್ ನಿಮ್ಮ ಮಗಳಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂದು ಸ್ನೇಹಿತನಲ್ಲಿ ಕೇಳಿದ್ದಾರೆ. ಅದಕ್ಕೆ ಅವರು ಡ್ಯಾನ್ಸ್ ಮತ್ತು ಚಿತ್ರಕಲೆಯಲ್ಲಿ ನನ್ನ ಮಗಳಿಗೆ ಆಸಕ್ತಿ ಇದೆ ಎಂದು ಹೇಳಲು ಹಾಗಾದ್ರೆ ಅವರನ್ನ ಚಿತ್ರಕಲೆಯಲ್ಲೇ ಮುಂದುವರೆಸಿ..ಇನ್ನು sslc ಬೇಸ್ ಮೇಲೆಯೇ ಚಿತ್ರ ಕಲಾ ಪರಿಷತ್ತಿನಲ್ಲಿ ಅಡ್ಮಿಷನ್ ಸಿಗಲಿದ್ದು ೫ ವರ್ಷದ್ದು ಫೈನ್ ಆರ್ಟ್ಸ್ ಡಿಗ್ರಿ ಇದೆ ಎಂದು ಸಲಹೆ ನೀಡಿದ್ದಾರೆ. ಅಂದರೆ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದರಲ್ಲೇ ಮುಂದುವರೆಸಿ ಎಂಬ ಸಲಹೆಯನ್ನ ಅನಿರುದ್ದ್ ರವರು ನೀಡಿದ್ದಾರೆ.

ಇನ್ನು ನನ್ನ ಮಗ ೮೫ ಅಂಕಗಳನ್ನ ತೆಗೆದಿದ್ದರೂ ಅವನಿಗೆ ಅಭಿನಯಿಸುವ ಮಾಧ್ಯಮದಲ್ಲಿ ತೊಡಗಿಸಿಕೊಳ್ಳುವ ಸಂಗೀತದ ಜೊತೆಗೆ ನೃತ್ಯ ಮಾಡುವ ಆಸಕ್ತಿಯು ಕೂಡ ಇದ್ದು ಇದು ಕೇವಲ ಆಸಕ್ತಿಯಾಗೆ ಉಳಿಯದೆ ಅದರೆಲ್ಲಾದರ ಬಗ್ಗೆ ಸ್ಟಡಿ ಕೂಡ ಮಾಡ್ತಾ ಬಂದಿದ್ದಾರೆ ಎಂದು ಅನಿರುದ್ದ್ ತನ್ನ ಮಗನ ಬಗ್ಗೆ ಹೇಳಿದ್ದಾರೆ. ಶಾಲೆಯಲ್ಲಿ ಕೂಡ ಸಾಕಷ್ಟು ನಾಟಕಗಳಲ್ಲಿ ಸಕ್ರಿಯವಾಗಿ ಅಭಿನಯಿಸಿದ್ದಾನೆ. ಹಾಗಾಗಿ ಅವನ ಆಸಕ್ತಿಗೆ ಅನುಗುಣವಾಗಿ ಅವನು ಪಿಯುಸಿ ಯಲ್ಲಿ ಆರ್ಟ್ಸ್ ತೆಗೆದುಕೊಳ್ಳಲಿದ್ದು ಇತಿಹಾಸದಲ್ಲಿ ಬಿಎ ಪದವಿ ಮಾಡಲಿದ್ದಾನೆ ಎಂದು ತನ್ನ ಮಗನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಅನಿರುದ್ದ್. ಅಂದರೆ ಇದರ ಸಾರಾಂಶ ಇಷ್ಟೇ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದರಲ್ಲೇ ಮುಂದುವರಿಸಿ ಅವರಿಗೆ ಅವರ ಆಯ್ಕೆಯಲ್ಲೇ ಸಾಧನೆ ಮಾಡಲು ಸಹಕರಿಸಿ ಎಂದು..