1 ತಿಂಗಳ ಮಗುವಿಗಾಗಿ 1 ಸಾವಿರ ಕಿಮೀ ನಿಂದ ವಿಮಾನದ ಮೂಲಕ ಪ್ರತೀ ದಿನ ಬರುತ್ತಿದೆ ತಾಯಿಯ ಎದೆ ಹಾಲು !

News Uncategorized
Advertisements

ತಾಯಿಯ ಎದೆ ಹಾಲು ಮಕ್ಕಳಿಗೆ ಬಹು ಮುಖ್ಯವಾದ ಆಹಾರ. ಆದರೆ ಇಲ್ಲಿ ಒಂದು ತಿಂಗಳ ಮಗುವಿಗಾಗಿ ಒಂದು ಸಾವಿರ ಕಿಮೀ ದೂರದಿಂದ ಪ್ರತೀ ದಿನ ವಿಮಾನದ ಮೂಲಕ ಬರುತ್ತಿದೆ ತಾಯಿಯ ಎದೆ ಹಾಲು. ಅಚ್ಚರಿ ಅನ್ನಿಸಿದ್ರೂ ಇದೆ ಸತ್ಯ. ಒಂದು ತಿಂಗಳ ಮಗುವೊಂದು ದೆಹಲಿಯ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಆ ಮಗುವಿಗೆ ಬೇಕಾಗಿರುವ ತಾಯಿಯ ಎದೆ ಹಾಲು ೧ ಸಾವಿರ ಕಿಮೀ ದೂರದಲ್ಲಿರುವ ಲೇಹ್ ನಿಂದ ಬರುತ್ತಿದೆ.

ಹೌದು, ಒಂದು ತಿಂಗಳ ಹಿಂದೆಯಷ್ಟೇ ಸಿಸೇರಿಯನ್ ಮೂಲಕ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು ಮಗುವಿನ ಆರೋಗ್ಯದಲ್ಲಿ ಏರು ಪೇರಾದ ಕಾರಣ ಶಸ್ತ್ರ ಚಿಕಿತ್ಸೆ ಮಾಡುವುದು ಅನಿವಾರ್ಯವಾಗಿತ್ತು. ಇದೆ ಕಾರಣದಿಂದ ಮಗುವನ್ನ ಹೊಸ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಯಿತು. ಆದರೆ ಮಗುವಿನ ತಾಯಿಗೆ ಸಿಸೇರಿಯನ್ ಡೆಲಿವರಿ ಆಗಿದ್ದ ಕಾರಣ ವಿಶ್ರಾಂತಿಯ ಅವಶ್ಯವಿದ್ದು ಲೇಹ್ ನಲ್ಲಿಯೇ ಉಳಿದಿದ್ದರು.

Advertisements

ಇನ್ನು ಮಗುವಿಗೆ ಆಹಾರವಾಗಿ ತಾಯಿಯ ಎದೆ ಹಾಲು ಬೇಕಾದ ಕಾರಣ ಮಗುವಿನ ತಂದೆ ಜಿಕ್‌ವೆುಟ್‌ ವಾಂಗ್ದು ಎಂಬುವವರು ಅವರ ಸ್ನೇಹಿತನ ಮೂಲಕ ಪ್ರತೀ ದಿನ ತಾಯಿಯ ಎದೆ ಹಾಲನ್ನ ತರಿಸಿಕೊಳ್ಳುತ್ತಿದ್ದಾರೆ. ಮಗುವಿನ ತಂದೆ ಸ್ನೇಹಿತ ಪ್ರತೀ ದಿನ ಮಗುವಿನ ಮನೆಗೆ ಹೋಗಿ ಎದೆ ಹಾಲನ್ನ ಬಾಟಲ್ ಮೂಲಕ ಏರ್ಪೋರ್ಟ್ ಗೆ ತಂದು ತಲುಪಿಸುತ್ತಾರೆ.

ಹೀಗೆ ಪ್ರತೀ ದಿನ ಲೇಹ್ ವಿಮಾನ ನಿಲ್ದಾಣದಿಂದ ಹೊಸದಿಲ್ಲಿಗೆ ಹಾಲನ್ನ ತರಲಾಗುತ್ತಿದ್ದು ಮಗುವನ್ನ ಆಸ್ಪತ್ರೆಯಲ್ಲಿ ನೋಡಿಕೊಳ್ಳುತ್ತಿರುವ ತಂದೆ ಪ್ರತೀ ದಿನ ದೆಹಲಿಯ ವಿಮಾನ ನಿಲ್ದಾಣಕ್ಕೆ ಹೋಗಿ ಆ ಹಾಲಿನ ಡಬ್ಬವನ್ನ ಪಡೆದು ಆಸ್ಪತ್ರೆಗೆ ತಂದು ಮಗುವಿಗೆ ಕೊಡುತ್ತಿದ್ದಾರೆ. ನೋಡಿ ತಮ್ಮ ಮಗುವನ್ನ ಉಳಿಸಿಕೊಳ್ಳುವ ಸಲುವಾಗಿ ಒಬ್ಬ ತಂದೆ ತಾಯಿ ಎಷ್ಟೆಲ್ಲಾ ಕಷ್ಟ ಪಡುತ್ತಾರೆ. ಆದರೆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ತಂದೆ ತಾಯಿಗಳನ್ನೇ ಮನೆಯಿಂದ ಆಚೆಗೆ ಹಾಕುವ ಬಹುತೇಕ ನಿದರ್ಶನಗಳನ್ನ ನಾವು ಪ್ರತೀ ದಿನ ನೋಡುತ್ತಿರುತ್ತೇವೆ.