ನೆನಸಿಟ್ಟ ಬಾದಾಮಿಯನ್ನ ತಿನ್ನೋದ್ರಿಂದ ಎಷ್ಟೆಲ್ಲಾ ಅದ್ಭುತ ಪ್ರಯೋಜನಗಳಿವೆ ಗೊತ್ತಾ ?

Health
Advertisements

ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಬೇಕಾದ ಎಂಜೈಮ್ಸ್ ಬಿಡುಗಡೆ ಮಾಡುತ್ತದೆ. ಮುಖ್ಯವಾಗಿ ಲೈಫೇಸ್ ಅನ್ನುವ ಎಂಜೈಮ್ಸ್ ಅನ್ನು ಬಿಡುಗಡೆ ಮಾಡುವುದರಿಂದ, ಜೀರ್ಣಕ್ರಿಯೆ ಚೆನ್ನಾಗಿ ಹಾಗಿ ಗ್ಯಾಸ್ಟ್ರಿಕ್ ಮತ್ತು ಮಲಬದ್ಧತೆಯಂತಹ ಸಮಸ್ಯೆಯನ್ನು ಬಾರದಂತೆ ನೋಡಿಕೊಳ್ಳುತ್ತದೆ.

ದೇಹದ ಅಧಿಕ ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಪ್ರತಿದಿನ ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ಇದರಲ್ಲಿರುವ ಮೊನೊ ಅನ್ಸ್ಯಾ ಫ್ಯಾಟಿ ಆಸಿಡ್ಸ್. ಹಸಿವನ್ನು ಕಡಿಮೆ ಮಾಡಿ ಹೊಟ್ಟೆ ತುಂಬಿರುವ ಹಾಗೆ ಅನಿಸುವಂತೆ ಮಾಡುತ್ತದೆ. ಇದರಿಂದ ತೂಕ ನಿಯಂತ್ರಣ ಮಾಡುವುದಕ್ಕೆ ಸಹಾಯ ಮಾಡುತ್ತದೆ.

Advertisements

ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ಹೃದಯವನ್ನು ಆರೋಗ್ಯಕರವಾಗಿ ಇರುವಂತೆ ಯಾವಾಗಲೂ ಕಾಪಾಡುತ್ತದೆ. ಹೃದಯ ಆರೋಗ್ಯಾವಾಗಿದ್ದರೆ ಹೃದಯಾಘಾತದಿಂದ ಆಗುವುದು ತಪ್ಪುತ್ತದೆ. ಬಾದಾಮಿಯಲ್ಲಿರುವ ಮಿಟಮಿನ್ E, ಫ್ರೀ ರಡಿಕಲ್ಸ್ ನ ಜೊತೆ ಹೋರಾಡಿ, ಚರ್ಮಕ್ಕೆ ಸಹಜವಾಗಿ ಕಾಂತಿಯನ್ನು ಕೊಡುತ್ತದೆ. ಇದು ಚರ್ಮ ಕಣಗಳನ್ನು ರಕ್ಷಿಸುವುದರಿಂದ ವೃದ್ಯಾಪ ಲಕ್ಷಣಗಳನ್ನು ಬೇಗ ಬಾರದಂತೆ ನೋಡಿಕೊಳ್ಳುತ್ತದೆ. ಜೊತೆಗೆ ಯಾವಾಗಲು ಯವ್ವನದಲ್ಲಿರುವಂತೆ ಕಾಣುತ್ತೀರಿ.

ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ, ಗರ್ಭಿಣಿ ಮಹಿಳೆಯರಿಗೆ ಬೇಕಾದ ಪೋಲಿಕ್ ಆಸಿಡ್, ಪ್ರೋಟೀನ್ ಪೌಷ್ಟಿಕಾಂಶಗಳು ಹೆಚ್ಚಾಗಿದೆ. ಇದನ್ನು ತೆಗೆದುಕೊಳ್ಳುವುದರಿಂದ ಶಿಶುವಿನ ಬೆಳವಣಿಗೆಗೆ ಇದು ಸಹಾಯ ಮಾಡುತ್ತದೆ. ಅಲ್ಲದೆ ಚಿಕ್ಕ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ. ಈ ಉಪಯೋಗ ಮಾತ್ರವಲ್ಲದೆ ಹಲ್ಲಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ, ಮೂಳೆಯನ್ನು ಗಟ್ಟಿಯಾಗಿ ಮಾಡುತ್ತದೆ, ಕೂದಲು ಉದರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಂತಹ ಅನೇಕ ಉಪಯೋಗಗಳನ್ನು ರಾತ್ರಿಯಲ್ಲಿ ನೆನೆಸಿಟ್ಟ ಬಾದಾಮಿಯನ್ನು ಬೆಳಗಿನ ಜಾವ ತಿನ್ನುವುದರಿಂದ ಸಿಗುತ್ತದೆ.