ಡ್ರೋನ್ ಪ್ರತಾಪ್ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟ ದರ್ಶನ್ ! ಮೇಲ್ ಬಗ್ಗೆ ಹೇಳಿದ್ದೇನು ಗೊತ್ತಾ ?

News

ಇತ್ತೀಚಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಯುವ ವಿಜ್ನ್ಯಾನಿ ಎಂದು ಹೇಳಿಕೊಂಡು ಓಡಾಡುತ್ತಿದ್ದ ಡ್ರೋನ್ ಪ್ರತಾಪ್ ನದ್ದೇ ಸುದ್ದಿ ಚರ್ಚೆಗಳು. ಇನ್ನು ಪ್ರತಾಪ್ ಯಾವುದೇ ಡ್ರೋನ್ ಕಂಡುಹಿಡಿದಿಲ್ಲ, ಆತನಿಗೆ ಸಿಕ್ಕಿರುವ ಸರ್ಟಿಫಿಕೇಟ್ ಗಳಾಗಲಿ ಚಿನ್ನದ ಮೆಡಲ್ ಗಳಾಗಲಿ ಎರಡು ವರ್ಷದಲ್ಲಿ ಬರೋಬ್ಬರಿ 70 ಸಾವಿರ ರಿಸೆರ್ಚ್ ಪೇಪರ್ ಗಳನ್ನ ಓದಿರವುದಾಗಲಿ ಹೀಗೆ ಅನೇಕ ವಿಷಯಗಳಲ್ಲಿ ಪ್ರತಾಪ್ ಸುಳ್ಳು ಹೇಳಿದ್ದಾನೆ ಇದೆಲ್ಲಾ ಫೇಕ್ ಎಂಬ ಸುದ್ದಿಗಳು ವಾಯುವೇಗದಲ್ಲಿ ಹರಿದಾಡುತ್ತಿವೆ.

ಇನ್ನು ಇದರ ಬಗ್ಗೆ ಕುರಿತಂತೆ ನಾನು ಮಾಡಿರುವ ಸಾಧನೆ ನಿಜ ಫ್ರೂಫ್ ಸಮೇತ ರಾಜ್ಯದ ಜನರ ಮುಂದೆ ತೋರಿಸುತ್ತೇನೆ ಎಂದು ಖಾಸಗಿ ವಾಹಿನಿ BTVಲೈವ್ ಗೆ ಬಂದಿದ್ದಡ್ರೋನ್ ಪ್ರತಾಪ್. ಆದರೆ ಬಹುತೇಕ ಪ್ರಶ್ನೆಗಳಿಗೆ ಉತ್ತರ ಕೊಡಲಾರದೆ i can’t disclose it ಎಂದು ಹೇಳಿದ್ದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಇದೆ ವೇಳೆ ದರ್ಶನ್ ಎನ್ನುವವರು ಜಪಾನ್ ನ ಟೋಕಿಯೋದಿಂದ ಲೈವ್ ಬಂದಿದ್ದು ಡ್ರೋನ್ ಟೆಕ್ನಲಾಜಿ ಕುರಿತಂತೆ ದರ್ಶನ್ ಕೇಳಿದ ಸಾಮಾನ್ಯ ಪ್ರಶ್ನೆಗಳಿಗೂ ಸಹ ಉತ್ತರ ಕೊಡಲಾಗದೆ ಪ್ರತಾಪ್ ಮತ್ತೆ i can’t disclose it ಈಗ ಹೇಳೋ ಸಮಯ ಅಲ್ಲ ಎಂದು ಮತ್ತೆ ಕಾಗೆ ಹಾರಿಸಿದ್ರು..ಜೊತೆಗೆ ನಾನು ಎಲ್ಲಾ ಉತ್ತರಗಳನ್ನ ಮೇಲ್ ಮಾಡುತ್ತೇನೆಂದು ಹೇಳಿ ಜಾಣತನದಿಂದ ಜಾರಿಕೊಂಡರು.

ಇದಾದ ಬಳಿಕ ಎಲ್ಲರೂ ದರ್ಶನ್ ರಾವರಿಗೆ ಮೆಸೇಜ್ ಮಾಡಿದ್ದೆ ಮಾಡಿದ್ದು..ಪ್ರತಾಪ್ ನಿಂದ ಮೇಲ್ ಬಂತಾ..ಇಲ್ಲವಾ ಎಂಬ ಪ್ರಶ್ನೆಗಳು ದರ್ಶನ್ ಗೆ ಸಾಗೋರೋಪಾದಿಯಲ್ಲಿ ಕೇಳಿಬಂದವು. ಈಗ ಇದಕ್ಕೆಲ್ಲಾ ಉತ್ತರ ನೀಡುವ ಸಲುವಾಗಿ ದರ್ಶನ್ ಲೈವ್ ಗೆ ಬಂದಿದ್ದು ಎಲ್ಲವನ್ನು ಬಹಿರಂಗಮಾಡುವುದರ ಜೊತೆಗೆ ದೊಡ್ಡತನವನ್ನೇ ಮೆರೆದಿದ್ದಾರೆ. ಹಾಗಾದ್ರೆ ದರ್ಶನ್ ಪ್ರತಾಪ್ ಬಗ್ಗೆ ಹೇಳಿದ್ದೇನು ತಿಳಿಯಲು ಕೆಳಗಡೆ ಇರುವ ಈ ವಿಡಿಯೋ ನೋಡಿ..