ನಟ ಸೋನು ಮಾಡಿದ್ದ ಆ ಒಂದೇ ಸಹಾಯಕ್ಕೆ ಈ ಅಭಿಮಾನಿ ಮಾಡಿದ್ದೇನು ಗೊತ್ತಾ ?

Cinema

ಕೊರೋನಾ ಹಿನ್ನಲೆಯಲ್ಲಿ ಲಾಕ್ ಡೌನ್ ಆಗಿದ್ದ ವೇಳೆ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಇನ್ನು ಇದೆ ವೇಳೆ ಸಂಕಷ್ಟದಲ್ಲಿದವರ ನೆರವಿಗೆ ಬಂದಿದ್ದ ಬಾಲಿವುಡ್ ನಟ ಸೋನು ಸೂದ್ ಸಾವಿರಾರು ಕಾರ್ಮಿಕರನ್ನ ಅವರವರ ಊರುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದು ಪ್ರತೀ ದಿನ ಹತ್ತಾರು ಬಸ್ ಗಳು ಮೂಲಕ ಅವರನ್ನೆಲ್ಲಾ ಊರುಗಳಿಗೆ ಕಳುಹಿಸಿಕೊಟ್ಟಿದ್ದರು. ಇದರಲ್ಲಿ ನಮ್ಮ ಕನ್ನಡಿಗರು ಕೂಡ ಇದ್ದರು. ಇನ್ನು ಕೇರಳದಲ್ಲಿ ಸಿಕ್ಕಿಹಾಕಿಕೊಂಡಿದ್ದ ಎಷ್ಟೋ ಮಹಿಳೆಯರನ್ನ ವಿಮಾನದ ಮೂಲಕ ಅವರ ಊರುಗಳಿಗೆ ಕಳುಹಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದರು.

ಇನ್ನು ಸೋನು ಸೂದ್ ರವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದ್ದು ಊರಿಗೆ ಹೋದವರೆಲ್ಲಾ ಜಾಲತಾಣಗಳ ಮೂಲಕ ತಮ್ಮ ಕೃತಜ್ಞತೆಯನ್ನ ತಿಳಿಸಿದ್ದರು. ಈಗ ಬಿಹಾರದಲ್ಲಿರುವ ಸೋನು ಸೂದ್ ಅಭಿಮಾನಿಯೊಬ್ಬ ಕೃತಜ್ಞತೆ ಸಲ್ಲಿಸಿರುವುದು ಬಹಳ ವಿಶೇಷವಾಗಿದೆ. ಕೆಲಸದ ಸಲುವಾಗಿ ಮುಂಬೈ ಮಹಾನಗರಕ್ಕೆ ಬಂದಿದ್ದ ಬಿಹಾರ ಮೂಲದ ವ್ಯಕ್ತಿಯೊಬ್ಬ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿದ್ದು ನಟ ಸೋನು ಸೂದ್ ಮಾಡಿದ ಸಹಾಯದಿಂದ ಮರಳಿ ತಮ್ಮ ಊರಿಗೆ ಹೋಗಿದ್ದರು.

ಆ ವ್ಯಕ್ತಿ ತನ್ನ ಊರಿಗೆ ಹೋದ ಮೇಲೆ ವೆಲ್ಡಿಂಗ್ ಶಾಪ್ ಒಂದನ್ನ ಓಪನ್ ಮಾಡಿದ್ದ. ಇನ್ನು ನಟನ ಸಾಮಾಜಿಕ ಕಾರ್ಯಕ್ಕೆ ಮನಸೋತಿರುವ ಆ ಅಭಿಮಾನಿ ತನ್ನ ಶಾಪ್ ಗೆ ಸೋನು ಸೂದ್ ವೆಲ್ಡಿಂಗ್ ಶಾಪ್ ಎಂದು ಹೆಸರಿಟ್ಟಿದ್ದು ಬೋರ್ಡ್ ನಲ್ಲಿ ಸೋನು ಫೋಟೋ ಕೂಡ ಹಾಕಿಕೊಂಡಿದ್ದಾನೆ. ಇನ್ನು ಸದ್ಯ ಈ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಸೋನು ಸೂದ್ ಅವರ ತನಕ ಈ ಫೋಟೋ ತಲುಪಿದೆ. ಒಳ್ಳೆಯ ಕೆಲಸಕ್ಕೆ ಒಳ್ಳೆಯ ಪ್ರತಿಫಲವೇ ಸಿಗುತ್ತೆ ಎಂಬುದಕ್ಕೆ ಇದು ಒಂದು ನಿದರ್ಶನ ಎಂದರೆ ತಪ್ಪಾಗಲಾರದು ಅಲ್ಲವ ಸ್ನೇಹಿತರೆ..