ಸರ್ಜಾ ಕುಟುಂಬದಲ್ಲಿ ಮತ್ತೊಬ್ಬರಿಗೆ ಕೊರೋನಾ ಪಾಸಿಟಿವ್ !

Cinema
Advertisements

ಇತ್ತೀಚಿಗೆ ಸೆಲೆಬ್ರೆಟಿಗಳಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ಈಗಾಗಲೇ ಚಿರು ಸರ್ಜಾ ಅವರನ್ನ ಕಳೆದುಕೊಂಡಿರುವ ಸರ್ಜಾ ಕುಟುಂಬಕ್ಕೆ ದುಃಖ ಇನ್ನು ಆರಿಲ್ಲ. ಇದೆ ವೇಳೆ ಸರ್ಜಾ ಕುಟುಂಬದ ಒಬ್ಬರಾದ ನಂತರ ಮತ್ತೊಬ್ಬರಿಗೆ ಕೊರೋನಾ ಕಡಲು ಶುರು ಮಾಡಿದೆ. ಇತ್ತೀಚೆಗಷ್ಟೇ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾರವರಿಗೂ ಕೊರೋನಾ ಪಾಸಿಟಿವ್ ಬಂದಿದ್ದು ಆಸ್ಪತ್ರೆಗೆ ದಾಖಾಲಾಗಿ ಬಳಿಕ ಬಳಿಕ ಡಿಚಾರ್ಜ್ ಆಗಿದ್ದು ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ.

Advertisements

ಇದರ ನಡುವೆಯೇ ಸರ್ಜಾ ಕುಟುಂಬದ ಮತ್ತೊಬ್ಬರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದೆ. ಹೌದು ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಅವರಿಗೆ ಕೊರೋನಾ ಪಾಸಿಟಿವ್ ಆಗಿರುವುದು ಧೃಡಪಟ್ಟಿದ್ದು ಅವರೇ ಖುದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಐಶ್ವರ್ಯ ಸರ್ಜಾ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಹಾಗೆ ನಾನು ಇತ್ತೀಚೆಗಷ್ಟೇ ಕೊರೋನಾ ಟೆಸ್ಟ್ ಗೆ ಒಳಗಾಗಿದ್ದು ರಿಪೋರ್ಟ್ ನಲ್ಲಿ ಕೊರೋನಾ ಪಾಸಿಟಿವ್ ಇರುವುದು ಧೃಢಪಟ್ಟಿದೆ.

ಹಾಗಾಗಿ ನಾನು ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ಇನ್ನು ನನಗೆ ಕೊರೋನಾ ಸೋಂಕು ಇರುವ ಕಾರಣ ಕೆಲ ದಿನಗಳಿಂದ ಯಾರೆಲ್ಲಾ ನನ್ನ ಸಂಪರ್ಕಕ್ಕೆ ಬಂದಿದ್ದಿರೋ ಅವರೆಲ್ಲಾ ದಯವಿಟ್ಟು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳು ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು ನಾನು ಅತೀ ಶೀಘ್ರವಾಗಿ ಕೊರೋನಾದಿಂದ ಗುಣಮುಖನಾಗುವೆ ಎಡನು ಹೇಳಿರುವ ಐಶ್ವರ್ಯ ದಯವಿಟ್ಟು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಮನೆಯಲ್ಲೇ ಸೇಫ್ ಆಗಿರಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದಾರೆ.