ಕನ್ನಡದ ಖ್ಯಾತ ರಿಯಾಲಿಟಿ ಷೋ ಬಿಗ್ ಬಾಸ್ ಸಂಚಿಕೆ 8ರ ಮೊದಲ ಸ್ಪರ್ಧಿ ಇವರೇ ಅಂತೆ !

Entertainment
Advertisements

ಕನ್ನಡದ ಕಿರುತೆರೆಯ ಖ್ಯಾತ ರಿಯಾಲಿಟಿ ಷೋಗಳಲ್ಲಿ ಅತ್ಯಂತ ಪ್ರಸಿದ್ಧವಾಗಿರುವುದು ಬಿಗ್ ಬಾಸ್ ರಿಯಾಲಿಟಿ ಷೋ ಕಾರ್ಯಕ್ರಮ. ಇನ್ನೇನು ಬಿಗ್ ಬಾಸ್ ಸೀಸನ್ 8 ಪ್ರಾರಂಭವಾಗಲಿ ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು ಈಗಾಗಲೇ ಸಿದ್ದತೆಗಳು ಪ್ರಾರಂಭವಾಗಿವೆ ಎಂದು ಹೇಳಲಾಗಿದೆ. ಇನ್ನು ಬಿಗ್ ಬಸ್ ಸಂಚಿಕೆ ೮ರ ಮೊದಲ ಸ್ಪರ್ಧಿ ಈಗಾಗಲೇ ಸಿಕ್ಕಿದ್ದಾರೆ ಎಂದು ಹೇಳಲಾಗಿದ್ದು ಆಯ್ಕೆ ಕೂಡ ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಹಾಗಾದ್ರೆ ಯಾರು ಆ ಸ್ಪರ್ಧಿ ಎಂದು ನೋಡೋಣ ಬನ್ನಿ..

ಇನ್ನು ಪ್ರತೀ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಶುರುವಾಗುತ್ತಿದ್ದ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮ ಅಕ್ಟೋಬರ್ ತಿಂಗಳಿನಲ್ಲೆ ಶುರುವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ವಿಶೇಷ ಏನೆಂದರೆ ಈಗಾಗಲೇ ಮೊದಲ ಸ್ಪರ್ಧಿ ಸಿಕ್ಕಿದ್ದಾರೆ ಎನ್ನುವುದು ಕುತೂಹಲದ ವಿಚಾರವಾಗಿದೆ. ಹೌದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಅತೀ ಹೆಚ್ಚು ಚರ್ಚೆಗೆ ಒಳಗಾಗಿರುವ ಡ್ರೋನ್ ಪ್ರತಾಪ್ ಅವರೇ ಈ ವರ್ಷದ ಬಿಗ್ ಬಾಸ್ ೮ರ ಸಂಭಾವ್ಯ ಸ್ಪರ್ಧಿ ಎಂದು ಹೇಳಲಾಗುತ್ತಿದೆ.

Advertisements

ಇನ್ನು ನಾವು ನೋಡಿರುವಂತೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸಾಮಾನ್ಯವಾಗಿ ವಿವಾದಾತ್ಮಕ ವ್ಯಕ್ತಿಗಳು ಪ್ರವೇಶ ಪಡೆಯುತ್ತಾರೆ. ಇನ್ನು ಈಗಾಗಲೇ ಅತೀ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿರುವ ಡ್ರೋನ್ ಪ್ರತಾಪ್ ಈ ಸಲದ ಮೊದಲ ಸ್ಪರ್ಧಿ ಎಂದು ಹೇಳಲಾಗುತ್ತಿದೆ. ಇನ್ನು ಇದು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಆಗಿಯೇ ಚರ್ಚೆ ಆಗುತ್ತಿರುವ ವಿಷಯ. ಆದರೆ ಬಿಗ್ ಬಾಸ್ ಗೆ ಡ್ರೋನ್ ಪ್ರತಾಪ್ ಎಂಟ್ರಿ ಕೇವಲ ಸೋಷಿಯಲ್ ಮೀಡಿಯಾಗಳಿಗಷ್ಟೇ ಸೀಮಿತಾಗುತ್ತಾ ಎಂಬ ಅನುಮಾನಗಳು ಕೂಡ ಕಾಡುತ್ತಿವೆ. ಕಾರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ಸೋಂಕಿನ ಕಾರಣದಿಂದಾಗಿ ಬಿಗ್ ಬಾಸ್ ನಡೆಸಲು ಅನುಮತಿ ಸಿಗುತ್ತಾ ಎಂಬುದೇ ಅತೀ ದೊಡ್ಡ ಪ್ರಶ್ನೆಯಾಗಿದೆ. ಎಲ್ಲದಕ್ಕೂ ಸಮಯವೇ ಉತ್ತರ ಕೊಡಲಿದೆ..ಕಾದು ನೋಡಬೇಕಾಗಿದೆ ಅಷ್ಟೇ..