ಗುಡ್ ನ್ಯೂಸ್: ರೈತರು ಕೆಲಸಕ್ಕೆ ಬೇಕಾಗಿದ್ದಾರೆ ! ಉತ್ತಮ ಸಂಬಳದ ಜೊತೆಗೆ ಊಟದ ಜೊತೆಗೆ ವಸತಿ ಕೂಡ ಸಿಗಲಿದೆ

News
Advertisements

ಸಾಮಾನ್ಯವಾಗಿ ನಾವು ಟಿವಿಯಲ್ಲೋ ನ್ಯೂಸ್ ಪೇಪರ್ ಗಳಲ್ಲೋ ಬೇರೆ ಹೊರಗಡೆ ಎಲ್ಲಾದರೂ ಕೆಲಸಕ್ಕೆ ಬೇಕಾಗಿದ್ದಾರೆ ಎನ್ನುವ ಜಾಹಿರಾತನ್ನು ನೋಡಿರುತ್ತೇವೆ. ಆದರೆ ರೈತರು ಕೆಲಸಕ್ಕೆ ಬೇಕಾಗಿದ್ದಾರೆ ಎನ್ನುವ ಜಾಹಿರಾತನ್ನು ನೀವು ನೋಡಿದ್ದೀರಾ?ನೋಡಿರಲೂ ಸಾಧ್ಯವಿಲ್ಲ ಅಲ್ಲವೇ..ಆದರೆ ಇಲ್ಲೊಂದು ಕಂಪನಿ ರೈತರನ್ನ ಕೆಲಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದು ಉತ್ತಮ ಸಂಬಳದ ಜೊತೆಗೆ ಊಟ ವಸತಿಯನ್ನೂ ಕೊಡುವ ಆಫರ್ ನೀಡಿದ್ದು ಇದರ ಬಗ್ಗೆ ತನ್ನ ವೆಬ್ ಸೈಟ್ ನಲ್ಲಿ ಜಾಹಿರಾತು ನೀಡಿದೆ.

ಕೊರೋನಾ ಬಂದು ಎಲ್ಲವನ್ನು ಬದಲು ಮಾಡುತ್ತಿದೆ ಏನೋ ಗೊತ್ತಿಲ್ಲ..ಶ್ರೀರಂಗಪಟ್ಟಣದ ನೆಲಮನೆ ಎಂಬ ಗ್ರಾಮದಲ್ಲಿ ಯುವಕರ ತಂಡವೊಂದು ರೈತರಿಗೆ ಈ ಆಫರ್ ನೀಡಿದೆ. ಹೌದು ಸಾಫ್ಟ್ ವೆರ್ ಇಂಜಿನಿಯರಿಗ್ ಮಾಡಿರುವ ಯುವಕರ ತಂಡವೊಂದು ಗ್ರಾಸ್ ರೂಟ್ ಆರ್ಗ್ಯಾನಿಕ್ ಎಂಬ ಆರ್ಗ್ಯಾನಿಕ್ ಹೆಸರಿನಲ್ಲಿ ಎತ್ತಿನ ಗಾಣದಿಂದ ಎಣ್ಣೆ ತೆಗೆಯುವ ಘಟಕವನ್ನ ಓಪನ್ ಮಾಡಿದ್ದಾರೆ. ಸ್ಥಳೀಯವರೇ ಆಗಿರುವ ಕಮಲೇಶ್ ಎನ್ನುವ ಸಾಫ್ಟ್​ವೇರ್ ಉದ್ಯೋಗಿ ತನ್ನ ಜೊತೆ ಐದು ಜನರ ತಂಡ ಕಟ್ಟಿಕೊಂಡಿದ್ದು ಈ ಬ್ಯುಸಿನೆಸ್ ಶುರು ಮಾಡಿದ್ದಾರೆ.

Advertisements

ಇನ್ನು ಇದೆ ಅಲ್ಲದೆ ಇದರ ಜೊತೆಗೆ ಸಾವಯವ ಬೆಲ್ಲ ಸೇರಿದಂತೆ ಬೇರೆ ಬೇರೆ ಉತ್ಪನ್ನಗಳನ್ನ ತಯಾರಿಸುವ ಯೋಜನೆ ಹಾಕಿಕೊಂಡಿರುವ ಈ ತಂಡ 30ಕ್ಕೂ ಹೆಚ್ಚು ರೈತರನ್ನ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಕೆಲಸಕ್ಕೆ ಸೇರುವ ರೈತರಿಗೆ ತರಭೇತಿ ಕೊಡಲಿದ್ದು ಉತ್ತಮ ಸಂಬಳದ ಜೊತೆಗೆ ಊಟ ವಸತಿ ಕೊಡುತ್ತೇವೆ ಎಂದು ಈ ತಂಡ ಹೇಳಿದೆ. ಇನ್ನು ಯಂತ್ರದ ಸಹಾಯವಿಲ್ಲದೆ ಎತ್ತಿನ ಗಾಣದಿಂದ ಮಾತ್ರ ಎಣ್ಣೆ ತೆಗೆಯಲು ಮುಂದಾಗಿದ್ದು ಕೊಬರಿ, ಕಡಲೆಕಾಯಿ ಸೇರಿದಂತೆ ಉಚ್ಚುಳ್ಳು ಹೀಗೆ ವಿಭಿನ್ನ ಬಗೆಯ ಕಾಲುಗಳಿಂದ ಎಣ್ಣೆಯನ್ನ ತೆಗೆಯಲಾಗುವುದು ಎಂದು ಹೇಳಿದ್ದಾರೆ.

ಇನ್ನು ಏನೂ ಓದಿಲ್ಲದ ರೈತರು ಸೇರಿದಂತೆ ಕೃಷಿ ಬಗ್ಗೆ ಗೊತ್ತಿರುವ ರೈತರು ಓದಿರುವ ರೈತರಿಗೂ ಸಹ ಕೆಲಸ ಸಿಗಲಿದ್ದು ಈಗಾಗಲೇ ಜಾಹಿರಾತು ನೋಡಿರುವ ರೈತರು ಬಂದಿದ್ದು ಈಗಾಗಲೇ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಕೊರೋನಾ ಲಾಕ್ ಡೌನ್ ನಂತಹ ಸಂಕಷ್ಟದ ಕಾಲದಲ್ಲಿ ಈ ಯುವ ಸಾಫ್ಟ್ ವೆರ್ ಉದ್ಯೋಗಿಗಳ ತಂಡ ಮಾಡಿರುವ ಈ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಗಳು ಕೇಳಿಬರುತ್ತಿವೆ. ಒಟ್ಟಿನಲ್ಲಿ ರೈತರನ್ನ ಕಡೆಗಣಿಸುತ್ತಿದ್ದ ಈ ಕಾಲದಲ್ಲಿ ರೈತರ ಕೆಲಸಕ್ಕೂ ಒಂದು ಬೆಲೆ ತಂದು ಕೊಟ್ಟಿದೆ ಈ ತಂಡ ಹಾಗೂ ವ್ಯವಸಾಯವನ್ನ ಕಡೆಗಣಿಸುತ್ತಿರುವ ಎಷ್ಟೋ ಜನರಿಗೆ ಸಾಫ್ಟ್‌ವೇರ್ ಉದ್ಯಮಿಗಳ ಈ ಕೆಲಸ ರೈತರಿಗೆ ವ್ಯವಸಾಯದಲ್ಲಿ ಹೊಸ ಭರವಸೆಯೊಂದನ್ನ ಹುಟ್ಟುಹಾಕಿದೆ.