ಬೋಲ್ಡ್ ಅವತಾರದಲ್ಲಿ ಮತ್ತೆ ಬಂದ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್

Entertainment

ಕನ್ನಡದ ನಾಗಿಣಿ ಧಾರಾವಾಹಿಯಲ್ಲಿ ಮಿಂಚಿ ಖ್ಯಾತ ರಿಯಾಲಿಟಿ ಷೋ ಬಿಗ್ ಬಾಸ್ ಸಂಚಿಕೆ 7ರಲ್ಲಿ ಫೇಮಸ್ ಆದ ನಟಿ ದೀಪಿಕಾ ದಾಸ್ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ವಿಭಿನ್ನವಾದ ಬೋಲ್ಡ್ ಡ್ರೆಸ್ ಗಳ ಮೂಲಕ ಕಿರುತೆರೆ ರಸಿಕರ ಮನಗೆದ್ದಿದ್ದ ಚೆಲುವೆ ದೀಪಿಕಾ ಬಿಗ್ ಬಾಸ್ ೭ರ ಸಂಚಿಕೆಯಲ್ಲಿ ಫೈನಲ್ ಹಂತದವರೆಗೂ ಹೋಗಿದ್ದರು.

ಇನ್ನು ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ದೀಪಿಕಾ ದಾಸ್ ರವರ ಸೌಂದರ್ಯ ಹಾಗೂ ಅವರ ಡ್ರೆಸ್ ಸೆನ್ಸ್ ಗೆ ಮರುಳಾಗಿದ್ದ ಆ ಸಂಚಿಕೆಯ ವಿನ್ನರ್ ಶೈನ್ ಶೆಟ್ಟಿ ದೀಪಿಕಾ ಹಿಂದೆ ಬಿದ್ದಿದ್ದು ದೀಪಿಕಾ ಹೇಳಿದಳೆಂದು ಮುಖ ಫುಲ್ ಶೇವ್ ಮಾಡಿಕೊಂಡಿದ್ದರು. ಇನ್ನು ಬಿಗ್ ಬಾಸ್ ಮುಗಿದ ಬಳಿಕ ದೀಪಿಕಾ ದಾಸ್ ಶೈ ಶೆಟ್ಟಿ ಜೊತೆ ಕರಾವಳಿ ತೀರದಲ್ಲಿ ಕಾಣಿಸಿಕೊಂಡಿದ್ದರು.

ಇನ್ನು ಕನ್ನಡದ ದೂದ್ ಸಾಗರ್ ಹಾಗೂ ಈ ಮನಸೇ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ದೀಪಿಕಾ ದಾಸ್ ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇನ್ನು ಒಳ್ಳೆ ಡ್ಯಾನ್ಸರ್ ಆಗಿಯೂ ಹೆಸರು ಮಾಡಿರುವ ದೀಪಿಕಾ ದಾಸ್ ತುಂಬಾ ಫೇಮಸ್ ಆಗಿದ್ದು ಮಾತ್ರ ಬಿಗ್ ಬಾಸ್ ರಿಯಾಲಿಟಿ ಷೋ ಕಾರ್ಯಕ್ರಮದಿಂದ.