ಎಷ್ಟೇ ಭಯಂಕರವಾದ ಹಲ್ಲು ನೋವಾದ್ರೂ ನಿಮಿಷದಲ್ಲಿ ಪರಿಹಾರ !

Health
Advertisements

ದೇವರೇ ಏನು ಕಷ್ಟವಾದರೂ ಕೊಡು ಆದರೆ ಈ ಹಲ್ಲು ನೋವಿನ ಭಾದೆ ಮಾತ್ರ ಬೇಡ ಎಂದು ದೇವರನ್ನು ಪ್ರಾರ್ಥಿಸುತ್ತಾರೆ ಹಲ್ಲು ನೋವಿನಿಂದ ಬಳಲುವವರು. ಹಲ್ಲು ನೋವು ಅಂತಿಂತ ಸಂಕಟ ಕೊಡುವುದಿಲ್ಲ, ಪ್ರಾ’ಣವೇ ಹೋದಂತೆ ಆಗುತ್ತದೆ. ಹಲ್ಲಿನಲ್ಲಿ ಯಾರೋ ಇ’ರಿದಂತೆ ಅನಿಸುತ್ತದೆ. ಅಷ್ಟು ಭಯಾನಕ ಹಲ್ಲುನೋವು. ಹಲ್ಲು ಅಷ್ಟು ಭಾದಿಸಲು ಕಾರಣ ಹಲ್ಲಿನ ಹುಳುಕು. ಹುಳಿತ ಅದ ಹಲ್ಲಿನಲ್ಲಿ ಯಾವುದೇ ಹುಳು ಇರುವುದಿಲ್ಲ.

Advertisements

ಬದಲಿಗೆ ಒಂದು ರೀತಿಯ ಬಾಕ್ಟೀರಿಯ ಸೋಂಕಿನಿಂದ ಹಲ್ಲು ಹುಳುಕು ಹಿಡಿಯುತ್ತದೆ ಮತ್ತು ಭಾರೀ ನೋವನ್ನು ಉಂಟುಮಾಡುತ್ತದೆ. ಹಲ್ಲಿನ ಅರ್ಧ ಭಾಗದ ನರಗಳು ಹಾನಿಗೆ ಒಳಗಾಗಿ ಸಂವೇದನಾಶೀಲವಾಗುತ್ತವೆ. ಹಲ್ಲು ನೋವು ಅಷ್ಟು ಸುಲಭಕ್ಕೆ ಹೋಗುವುದಿಲ್ಲ. ಮಾತ್ರೆ ಔಷದಿ ಗಳು ತಾತ್ಕಾಲಿಕ ಉಪಶನ ಕೊಡುತ್ತವೆ. ಕೆಲವರಿಗೆ ಮಾತ್ರೆಗಳು ಕೆಲಸ ಮಾಡುವುದಿಲ್ಲ. ಇನ್ನು ನಿಮ್ಮ ಮನೆಯಲ್ಲೇ ಇರುವ ಕೆಲವು ಮದ್ದುಗಳು ನಿಮ್ಮ ಹಲ್ಲು ನೋವನ್ನು ಕಡಿಮೆ ಮಾಡುತ್ತವೆ. ಹಾಗಾದ್ರೆ ಆ ಮನೆಮದ್ದುಗಳು ಏನೆಂದು ನೋಡೋಣ ಬನ್ನಿ..

* ಬೇವಿನ ಎಲೆಯನ್ನು ನುಣ್ಣಗೆ ಅರೆದು ಹುಳುಕು ಹಲ್ಲಿನ ಮೇಲೆ ಲೇಪಿಸಿ ಕೊಳ್ಳಬೇಕು. ಸ್ವಲ್ಪ ಸಮಯದ ಬಳಿಕ ಬಾಯನ್ನು ತೊಳೆದು ಕೊಳ್ಳಬೇಕು.

*ಲವಂಗವನ್ನು ನೋಯುವ ಹಲ್ಲಿನ ಮೇಲೆ ಕೆಲ ಕಾಲ ಇಟ್ಟುಕೊಳ್ಳಬೇಕು. ಲವಂಗದ ಎಣ್ಣೆ ಯೂ ಕೂಡ ಹಲ್ಲು ನೋವಿಗೆ ರಾಮಬಾಣ.

*ಉಪ್ಪು ನೀರನ್ನ ಪ್ರತೀ ದಿನ ಮೂರು ಬಾರಿ ಅದರಲ್ಲೂ ರಾತ್ರಿ ಮಲಗುವ ಮುನ್ನ ಉಗರು ಬೆಚ್ಚಗಿನ ನೀರಿಗೆ ಉಪ್ಪು ಬೆರಸಿ ಬಾಯಿ ಮುಕ್ಕಳಿಸಿ ಉಗಿಯುವುದರಿಂದ ಹಲ್ಲಿನಲ್ಲಿ ಇರುವ ಬ್ಯಾಕ್ಟೀರಿಯಾಗಳು ಸಾ’ಯುತ್ತವೆ.

*ತುಳಸಿಯ ಒಂದೆರಡು ಎಲೆ ತುಳಸಿ ಸೊಪ್ಪನ್ನು ಜಗಿಯುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.

*ಕೋಲ್ಗೇಟ್ ಪೇಸ್ಟ್ ಅನ್ನು ಹಲ್ಲಿನ ಮೇಲೆ ಕೆಲ ಹೊತ್ತು ಲೇಪನ ಮಾಡಿಕೊಂಡು ನಂತರ ಬಾಯಿ ತೊಳೆದುಕೊಂಡರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ.

*ಬೇವಿನ ಕಡ್ಡಿಯಿಂದ ಮೃದುವಾಗಿ ಹಲ್ಲನ್ನು ಉಜ್ಜುವುದರಿಂದ ತಕ್ಷಣ ನೋವು ಕಡಿಮೆಯಾಗುವುದು

ಆದರೆ ಗಮನಿಸಿ..ಕೆಲವರು ಉಷ್ಣ ಶರೀರದವರಿಗೆ ಮೇಲಿನ ಮನೆ ಮದ್ದುಗಳು ಹಿಡಿಸದೆ ಇರಬಹುದು. ಅಂತಹವರು ಕೇವಲ ಪೇಸ್ಟ್ ಲೇಪನ ಪರಿಹಾರ ಪ್ರಯತ್ನಿಸಬಹುದು.