ನಿಮ್ಮ ಶರೀರವನ್ನು ಈಗಲೇ ಪರೀಕ್ಷಿಸಿಕೊಳ್ಳಿ..ಯಾವ ಲಕ್ಷಣ ಯಾವ ವಿಟಮಿನ್ ಕೊರತೆ ಸೂಚಿಸುತ್ತಿದೆ ಎಂದು ತಿಳಿದುಕೊಳ್ಳಿ..

Uncategorized
Advertisements

ನಮ್ಮ ದೇಹಕ್ಕೆ ವಿಟಮಿನ್ ಗಳು, ಮಿನರಲ್, ಕಾರ್ಬೋಹೈಡ್ರೇಟ್ಸ್, ಕೊಬ್ಬಿನ ಅಂಶ ಎಲ್ಲ ಪೋಷಕಾಂಶಗಳೂ ಅತ್ಯಗತ್ಯ. ಯಾವುದೇ ಪೋಷಕಾಂಶಗಳ ಕೊರತೆ ದೇಹದಲ್ಲಿ ನ್ಯೂನ್ಯತೆ ಹಾಗೂ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದ ರೋಗ ಉಲ್ಭಣಗೊಳ್ಳುವ ಮೊದಲು ಶರೀರದಲ್ಲಿ ಕೆಲವು ಸೂಚನೆ ಸಂಕೇತಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ನಾವು ಅನಾರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವ ಮೊದಲು ಈ ಲಕ್ಷಣಗಳನ್ನು ಗುರುತಿಸಿ ಅಗತ್ಯವಿರುವ ಪೋಷಕಾಂಶಗಳನ್ನ ಆಹಾರದಲ್ಲಿ ಸೇವಿಸಬೇಕು. ಹಾಗಾದ್ರೆ, ಯಾವ ಲಕ್ಷಣಗಳೂ ಇದ್ದರೆ ಯಾವ ವಿಟಮಿನ್ ಕೊರತೆ ಎಂದು ತಿಳಿದುಕೊಳ್ಳೋಣ ಮತ್ತು ಅದಕ್ಕೆ ಸೂಕ್ತ ಪರಿಹಾರ ತಿಳಿಯೋಣ..

*ಮೈ ಕೈ ಮುರಿಯುವಾಗ, ಕೂತಾಗ, ನಿಂತಾಗ ಮೊಣಕೈ, ಮೊಣಕಾಲಿನಲ್ಲಿ ಟಕ್ ಎಂಬ ರೀತಿ ಶಬ್ಧ ಬಂದರೆ ಅದು ಕ್ಯಾಲ್ಸಿಯಂ ಕೊರತೆ ಅಂದುಕೊಳ್ಳಬೇಕು. ದೇಹದ ಮೂಳೆ ಮತ್ತು ಹಲ್ಲಿನ ಆರೋಗ್ಯಕ್ಕೆ ಕಾಲ್ಸಿಯಂ ತುಂಬಾ ಮುಖ್ಯ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ನೀಗಿಸಲು ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಮೊಸರು, ಬೆಣ್ಣೆ ತುಪ್ಪ, ಚೀಸ್, ಪನ್ನೀರ್ ಮಾತು ಪಿನುಟ್ ಬಟರ್ ಸೇವಿಸಬೇಕು. ಇಲ್ಲವೇ ಕಾಲು ಚಮಚ ಕ್ಯಾಲ್ಸಿಯಂ ಕಾರ್ಬೊನೇಟ್ ಅನ್ನು ಒಂದು ಕಪ್ ಮೊಸರಿನಲ್ಲಿ ಸೇರಿಸಿ ಪ್ರತೀ ದಿನ ಕಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹೀಗೆ ಮೂರು ತಿಂಗಳು ಸೇವಿಸುವುದರಿಂದ ಕಲ್ಸಿಯಂ ಕೊರತೆ ನಿವಾರಣೆಯಾಗುತ್ತದೆ.

Advertisements

*ಹಲ್ಲು ಉಜ್ಜುವಾಗ ಒಸಡಿನಲ್ಲಿ ರಕ್ತಸ್ರಾವ , ನಾಲಿಗೆಯ ಮೇಲೆ ಅಲ್ಸರ್, ಬಾಯಲ್ಲಿ ಗುಳ್ಳೆಗಳು ಈ ಲಕ್ಷಣ ನಿಮ್ಮಲ್ಲಿ ಇದ್ದರೆ ಇದು ವಿಟಮಿನ್ ಸಿ ಕೊರತೆ. ನೆಲ್ಲಿಕಾಯಿ, ಕಿತ್ತಳೆ, ಮೂಸಂಬಿ, ದಪ್ಪ ಮೆಣಸಿನಕಾಯಿ, ನಿಂಬೆ ಹಣ್ಣು ಹೆಚ್ಚಾಗಿ ನಿಮ್ಮ ಆಹಾರದಲ್ಲಿ ಸೇವಿಸುವುದರಿಂದ ವಿಟಮಿನ್ ಸಿ ನಿಮ್ಮ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ದೊರಕುತ್ತದೆ. ನಿಮ್ಮ ಬೆರಳಿನ ಉಗುರಿನ ಮೇಲೆ ಬಿಳಿಯ ಚುಕ್ಕೆ ಯಂತಹ ಕಲೆಗಳು ಇದ್ದರೆ ಅದು ಝಿಂಕ್ ನ ಕೊರತೆ. ಜಿಂಕ್ ನ ಕೊರತೆಯಿಂದಾಗಿ ದೇಹದಲ್ಲಿ ಹಾರ್ಮೋನ್ ಗಳ ವ್ಯತಾಸ ವಾಗುತ್ತದೆ. ಇದರಿಂದ ಹಲವಾರು ಕಾಯಿಲೆಗಳು ಉಲ್ಭಣಗೊಳ್ಳುತ್ತವೆ. ಬಾದಾಮಿ, ಮೊಳಕೆ ಕಟ್ಟಿದ ಕಾಳುಗಳು, ವಿವಿಧ ಧಾನ್ಯಗಳ ಸೇವನೆಯಿಂದ ಜಿಂಕ್ ನ ಕೊರತೆಯನ್ನು ಸರಿಪಡಿಸಿಕೊಳ್ಳಿ ಬಹುದು.

*ಕಾಲಿನ ಭಾಗ ಬಿರುಕು ಬಿಡುವುದು, ತುಟಿಯ ಮೇಲೆ ಅಲ್ಸರ್ ಗಳು ಕಾಣಿಸಿಕೊಳ್ಳುವುದು, ಕಣ್ಣುಗಳು ಕೆಂಪಾಗಗುವುದು ಮೂಗಿನ ಭಾಗದಲ್ಲಿ ಕೆಂಪಗೆ ಆಗುವುದು ಇದೆಲ್ಲ ವಿಟಮಿನ್ ಬಿ ಕೊರತೆ. ವಿಟಮಿನ್ ಬಿ ಕೊರತೆಯೂ ಕೂದಲು, ಜೀರ್ಣಕ್ರಿಯೆ ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳಿಗೆ ಕಾರಣವಾಗುತ್ತದೆ. ಅತಿಯಾಗಿ ಪಿಜ್ಜಾ ,ಬರ್ಗರ್ , ಡೋನಟ್ ಚಾಕೋಲೇಟ್ ಚಿಪ್ಸ್ ಮೊದಲಾದ ಜಂಕ್ ಫುಡ್ ಗಳ ಸೇವನೆ ಇದಕ್ಕೆ ಕಾರಣ. ಆರೋಗ್ಯಕರ ಮನೆ ಊಟವನ್ನು ಸೇವಿಸುವುದರಿಂದ ವಿಟಮಿನ್ ಬಿ ಕೊರತೆಯನ್ನು ನೀಗಿಸಬಹುದು.

*ಮುಖವೂ ಒಂದು ರೀತಿ ಹಳದಿ ಬಣ್ಣಕ್ಕೆ ಬದಲಾಗುವುದು, ಬಿಳಿ ಬಣ್ಣಕ್ಕೆ ತಿರುಗಿದ ಉಗುರುಗಳು, ಬಣ್ಣ ಗುಂದಿದ ತುಟಿಗಳು ಕಬ್ಬಿಣದ ಅಂಶ(ಐರನ್) ಮತ್ತು ಹಿಮೋಗ್ಲೋಬಿನ್ ಕೊರತೆಯನ್ನು ಸೂಚಿಸುತ್ತವೆ. ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡುವುದು, ಕ್ಯಾರೆಟ್ , ಬೀಟ್ ರೂಟ್, ಸೇಬು, ದಾಳಿಂಬೆ, ಪಾಲಕ್ ಸೊಪ್ಪು, ಜೋಳ ಮೊದಲಾದವುಗಳನ್ನು ಹೆಚ್ಚು ಸೇವಿಸುವುದರಿಂದ ಈ ಸಮಸ್ಯೆ ದೂರವಾಗುತ್ತದೆ. ಅಲ್ಲದೆ ಸರಿಯಾದ ವ್ಯಾಯಾಮ, ದೇಹಕ್ಕೆ ಮಸಾಜ್ ಮಾಡುವುದು ಕೂಡ ಪರಿಹಾರವಾಗಿದೆ. ಉಗುರಿನಲ್ಲಿ ಉದ್ದನೆಯ ಗೆರೆಗಳು, ಕಣ್ಣಿನ ರೆಪ್ಪೆ , ಹುಬ್ಬು ಗಳು ಕಡಿಮೆಯಾಗುವುದು ಇದು ಥೈರಾಯ್ಡ್ ಸಮಸ್ಯೆ. ಸರಿಯಾದ ಆಹಾರ ಕ್ರಮ ಪಾಲಿಸುವುದರಿಂದ ಈ ಸಮಸ್ಯೆ ದೂರವಾಗುತ್ತದೆ. ರಾತ್ರಿಯ ವೇಳೆ ಕಣ್ಣು ಮಂಜಾಗುವುದು ವಿಟಮಿನ್ ಎ ಕೊರತೆ. ಹೆಚ್ಚು ತರಕಾರಿ ಸೇವಿಸಿದರೂ ಈ ಸಮಸ್ಯೆ ಕಾಣಿಸಿದರೆ ಊಟಾದಲ್ಲಿ ಬೆಣ್ಣೆ ತುಪ್ಪವನ್ನು ಹೆಚ್ಚು ಸೇವಿಸಿ. ಇದು ವಿಟಮಿನ್ ಎ ಹೀರಿಕೊಳ್ಳಲು ಸಹಾಯ ಮಾಡುತ್ತದೆ.