ನಿದ್ದೆ ಮಾಡುತ್ತಿದ್ದ ವೇಳೆ ಯುವಕನ ಪ್ಯಾಂಟ್ ಒಳಗಡೆ ಹೋದ ಹಾವು ! ಆಮೇಲೆ ಏನಾಯ್ತು ಗೊತ್ತಾ ?

Kannada News

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋಗಳು ಕುತೂಹಲ ಹುಟ್ಟಿಸುವುದರ ಜೊತೆಗೆ ಭ’ಯವನ್ನ ಹುಟ್ಟಿಸುವಂತಿರುತ್ತವೆ. ಲಕ್ನೋ ದಲ್ಲಿ ನಡೆದಿರುವ ಘಟನೆಯೊಂದು ಇದಕ್ಕೆ ಸಾಕ್ಷಿಯಾಗಿದೆ. ಹಾವು ಎಂದರೆ ಸಾಕು ಕನಸಿನಲ್ಲಿಯೂ ಕೂಡ ಭಯ ಪಡುವಂತೆ ಮಾಡುತ್ತದೆ. ಅಂತಹದರಲ್ಲಿ ಮಲಗಿದ್ದ ಕಾರ್ಮಿಕನೊಬ್ಬನ ಪ್ಯಾಂಟಿನ ಒಳಕ್ಕೆ ಹೋದ ಹಾವನ್ನ ಏಳು ಗಂಟೆಗಳ ಬಳಿಕ ಹೊರಗೆ ತೆಗೆಯಲಾಗಿದೆ. ಇನ್ನು ಅಷ್ಟು ಸಮಯ ಆತನ ಪರಿಸ್ಥಿತಿ ಹೇಗಾಗಿರಬೇಡ ಎಂದು ನೀವೇ ಊಹಿಸಿ..ಇನ್ನು ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿರುವ ಸಿಕಂದರ್ ಪುರ ಎಂಬಲ್ಲಿ ನಡೆದಿದ್ದು ಇಲ್ಲಿ ವಿದ್ಯತ್ ಇಲಾಖೆಯವರು ಕಂಬ ಹಾಕುವ ಕೆಲಸ ಮಾಡಿಸುತ್ತಿದ್ದರು.

ಇನ್ನು ಈ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕರಲ್ಲಿ ಒಬ್ಬನಾದ ಲವಕೇಶ್ ಕುಮಾರ್ ಎಂಬ ಯುವಕ ಎಂದಿನಂತೆ ಕೆಲಸ ಮುಗಿಸಿ ಅವರಿಗೆ ಮಲಗಲು ವ್ಯವಸ್ಥೆ ಕಲ್ಪಿಸಿದ್ದ ಅದೇ ಊರಿನ ಅಂಗನವಾಡಿಯಲ್ಲಿ ಮಲಗಿದ್ದಾನೆ. ಇನ್ನು ಈ ಸಮಯದಲ್ಲಿ ಎಲ್ಲಿಂದಲೋ ಬಂದ ನಗರಹಾವೊಂದು ಆತನಿಗೆ ತಿಳಿಯದೆ ಆತನ ಪ್ಯಾಂಟಿನ ಒಳಗೆ ಹೋಗಿ ಮಲಗಿದೆ. ಆಗ ಪ್ಯಾಂಟಿನ ಒಳಗೆ ಏನೋ ಉಸಿರು ಬಿಟ್ಟಂತೆ ಮಧ್ಯರಾತ್ರಿಯ ಸಮಯದಲ್ಲಿ ಆತನಿಗೆ ಭಾಸವಾಗಿದ್ದು ಎದ್ದು ನೋಡಿದಾಗ ಪ್ಯಾಂಟಿನ ಒಳಗಡೆ ಹಾವು ಮಲಗಿರುವುದು ಗೊತ್ತಾಗಿದೆ. ಆಗ ಆತ ತನ್ನ ಜೀವ ಉಳಿಸಿಕೊಳ್ಳುವ ಸಲುವಾಗಿ ಸ್ವಲ್ಪವೂ ಅಲುಗಾಡದೆ ಅಲ್ಲೇ ಕಂಬವೊಂದನ್ನ ಹಿಡಿದು ನಿಂತು ಸ್ವಲ್ಪವೂ ಅಲುಗಾಡದೆ 7 ಗಂಟೆಗಳ ಕಾಲ ನಿಂತಿದ್ದಾನೆ.

ಇನ್ನು ಆತನ ಜೊತೆಗಿದ್ದ ಕಾರ್ಮಿಕರು ತಕ್ಷಣವೇ ಹಾವು ಹಿಡಿಯುವರನ್ನ ಹುಡುಕಿ ಕರೆದುಕೊಂಡು ಬಂದಿದ್ದಾರೆ. ಇನ್ನು ಅಲ್ಲಿಗೆ ಬಂದ ಆ ವ್ಯಕ್ತಿ ಆ ಯುವಕ ಸ್ವಲ್ಪವೂ ಅಲುಗಾಡದಂತೆ ಹಾವಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದಾನೆ. ಬಳಿಕ ಅಲ್ಲಿಗೆ ಬಂದ ಉರಗ ತಜ್ಞರೊಬ್ಬರು ಲವಕೇಶ್ ನ ಪ್ಯಾಂಟನ್ನ ಕಟ್ ಮಾಡಿ ಆ ಹಾವನ್ನ ನಿಧಾನವಾಗಿ ಹೊರತೆಗೆದಿದ್ದಾರೆ. ಇನ್ನು ಇದರ ಬಗ್ಗೆ ಮಾತಾನಾಡಿದ ಅವರು ಆತ ಕಂಬ ಹಿಡಿದು ಅಲುಗಾಡದೆ ಏಳು ಗಂಟೆಗಳ ನಿಂತ ಕಾರಣ ಪ್ಯಾಂಟ್ ನಲ್ಲಿ ಮಲಗಿದ್ದ ಹಾವು ಅತನಿಗೆ ಕಚ್ಚಲಿಲ್ಲ. ಆತನ ಅದೃಷ್ಟ ಚೆನ್ನಾಗಿದೆ. ಆತ ಅಲುಗಾಡದೆ ಕಂಬ ಹಿಡಿದು ನಿಂತ ಕಾರಣ ಹಾವಿಗೆ ತಾನು ಮನುಷ್ಯನೊಬ್ಬನ ಪ್ಯಾಂಟ್ ನಲ್ಲಿದ್ದೇನೆ ಎಂದು ಗೊತ್ತಾಗಿಲ್ಲ. ಹಾಗಾಗಿಯೇ ಆತನ ಜೀವ ಉಳಿದಿದೆ. ಇನ್ನು ಈ ವೀಡಿಯೋವಂತೂ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು ಕೆಲವರು ಆ ಯುವಕನ ಧೈರ್ಯ ಮೆಚ್ಚಬೇಕು ಎಂದು ಕಾಮೆಂಟ್ ಮಾಡಿದ್ದಾರೆ ಅನೇಕರು ತಮಾಷೆ ಕೂಡ ಮಾಡಿದ್ದಾರೆ.