ಮದುವೆಯಾಗುವ ಹುಡುಗ ಹುಡುಗಿಯರು ನೋಡಲೇಬೇಕಾದ ಬಹುಮುಖ್ಯ ಮಾಹಿತಿ..

Kannada News
Advertisements

ನಮಸ್ಕಾರ ಸ್ನೇಹಿತರೆ, ಮದುವೆಯ ಬಂಧ ಜನುಮ ಜನ್ಮದ ಅನುಬಂಧ..ಮದುವೆ ಎನ್ನುವುದು ಸ್ವರ್ಗದಲ್ಲೇ ನಿಚ್ಚಯವಾಗಿರುತ್ತೆ ಎಂದು ಹಿರಿಯರು ಹೇಳುತ್ತಾರೆ. ಈ ಸಂಭ್ರಮ ಒಂದು ಬಾರಿ ಮಾತ್ರ ಒಬ್ಬ ಹುಡುಗ ಹುಡುಗಿಯ ಜೀವನದಲ್ಲಿ ಬರುತ್ತದೆ. ಆದರೆ ಆಯ್ಕೆ ಮಾಡುವಾಗ ಎಚ್ಚರ ಇರಬೇಕಾದದ್ದು ಅವಶ್ಯಕ. ಇಲ್ಲದಿದ್ದರೆ ಜೀವನವೆಲ್ಲಾ ಗೋಳು ಕಟ್ಟಿಟ್ಟಬುತ್ತಿ. ಅದು ಹುಡುಗಿಗಾಗಲಿ ಹುಡುಗನಿಗಾಗಲಿ. ಹಾಗಾಗಿ ಮದುವೆಯಾಗುತ್ತಿರುವ ಯುವಕ ಯುವತಿಯರಿಗೆ ಒಂದಿಷ್ಟು ಕಿವಿ ಮಾತುಗಳು ಇಲ್ಲಿವೆ ನೋಡಿ..

* ಯಾವುದೇ ಕಾರಣಕ್ಕೂ ನಿಮಗೆ ನಿಮಗೆ ಹುಡುಗ ಅಥ್ವಾ ಹುಡುಗಿ ಇಷ್ಟವಿಲ್ಲದಿದ್ದಲ್ಲಿ ಯಾರದ್ದೋ ಬಲವಂತಕ್ಕೆ ಮದುವೆಯಾಗಲು ಹೋಗಬೇಡಿ. ಇದರಿಂದ ಸಾಯೋವರಿಗೂ ಗೋಳು ಅನುಭವಿಸುವುದು ನೀವೇನೇ.

*ಎರಡೂ ಕುಟುಂಬಗಳ ಆರ್ಥಿಕವಾಗಲಿ ಸಂಸ್ಕೃತಿಕವಾಗಲಿ ಸ್ಥಾನಮಾನಗಳು ತೀರಾ ಭಿನ್ನವಾಗಿದ್ದರೆ ತುಂಬಾ ಕಷ್ಟ..

Advertisements

*ಇನ್ನು ಮದುವೆಯಾಗುವ ವೇಳೆ ತೀರಾ ಜಿದ್ದಿಗೆ ಬಿದ್ದಂತೆ ವರದಕ್ಷಿಣೆ ಕೇಳಬೇಡಿ..ಇನ್ನು ಹುಡುಗಿಯವರು ಕಡಿಮೆಯವರೂ ಕೂಡ ತಾವೇನೂ ಕಡಿಮೆ ಇಲ್ಲ ಅನ್ನುವಂತೆ ಸಾಲ ಮಾಡಬೇಡಿ. (ಕೆಲವರು ಪ್ರೆಸ್ಟಿಜಿನ ವಿಷಯಕ್ಕೆ ಸಾಲ ಮಾಡಿ ಮಗಳ ಮದುವೆಯನ್ನ ತುಂಬಾ ಗ್ರ್ಯಾಂಡ್ ಆಗಿ ಮಾಡುವುದನ್ನ ನೋಡಿದ್ದೇವೆ)

*ಇನ್ನು ಮದುವೆಯಾಗಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿಡುವ ಗಂಡು ಹೆಣ್ಣಿನ ವ್ಯಕ್ತಿತ್ವ ಹಾಗೂ ಅಭಿರುಚಿಗಳು ಆದಷ್ಟೂ ಒಂದಾಗಿದ್ದಾರೆ ಬಾಳು ಸುಖಮಯವಾಗಿರುತ್ತೆ.

*ಇನ್ನು ಹಿರಿಯರು ಹೇಳುವ ಹಾಗೆ, ಗಂಡಸರು ಚಟ ಬಿಟ್ಟರೆ ಚೆಂದ..ಹೆಂಗಸರು ಹಠ ಬಿಟ್ಟರೆ ಚೆಂದ..ಇದರಿಂದ ಅವರ ಬಾಳು ಸಂತೋಷದಾಯಕವಾಗಿರುತ್ತೆ.

*ಹೆಣ್ಣಿಗೆ ಸ್ವಾತಂತ್ರ್ಯ ಕೊಡಬೇಕು..ಆದರೆ ಅತೀ ಸ್ವಾತಂತ್ರ್ಯ ಒಳ್ಳೆಯದಲ್ಲ..ಇನ್ನು ಗಂಡಸಿಗೆ ಅತೀ ಅನುಮಾನವಂತೂ ಇರಲೇಬಾರದು. ಇದರಿಂದ ಜೀವನವಿಡೀ ನೋವು ಅನುಭವಿಸುವುದು ಪಕ್ಕಾ.

*ಇನ್ನು ಮದುವೆಯಾದ ಹುಡುಗ ಹುಡುಗಿಯರಿಗೆ ಹೇಳಲೇಬೇಕಾದ ಬಹುಮುಖ್ಯವಾದ ಅಂಶ ಎಂದರೆ ನಿಮ್ಮ ಹಳೆಯ ಲವ್ ಹುಡುಗನೇ ಆಗಲಿ ಹುಡುಗಿಯೇ ಆಗಲಿ ಕೇಳಬೇಡಿ..ಇದರಿಂದ ಇಬ್ಬರ ಜೀವನದ ನೆಮ್ಮದಿಯೂ ಹಾಳಾಗುವುದು ಖಂಡಿತ.

*ಮೊದಲು ಸಂಪೂರ್ಣವಾಗಿ ಗಂಡ ಹೆಂಡತಿ ಆದ್ರೆ ಮಾತ್ರ ಬಳಿಕ ಅಳಿಯ ಸೊಸೆ ಆಗಲು ಸಾಧ್ಯ. ಉದ್ಯೋಗ ಕೆಲಸ ದುಡಿಮೆ ಹಣದ ಮೋಹ ಬಿಡಿ… ಹಾಸಿಗೆಯ ಮೇಲೆ ಹಣ ಹಾಕಿ ರೋಮ್ಯಾನ್ಸ್ ಮಾಡಲಾಗದು ಎಂಬ ವಿವೇಕ ಇರಲಿ..

*ಇನ್ನು ತನ್ನ ಗಂಡನ ಸಣ್ಣ ಸಂಪಾದನೆಯನ್ನೂ ಕೂಡ ಹೆಣ್ಣು ಅಣುಕಿಸುವಂತಾಗಬಾರದು..ಜೊತೆಗೆ ತನ್ನ ಹೆಂಡತಿ ಸಾಧಾರಣ ಸುಂದರಿಯಾಗಿದ್ದರೆ ಗಂಡನಾದವನು ಬೇರೆ ಹೆಂಗಸರೊಂದಿಗೆ ಹೋಲಿಕೆ ಮಾಡುವುದು ಯಾವುದೇ ಕಾರಣಕ್ಕೂ ಸರಿಯಲ್ಲ.

* ಮಗು ಮಕ್ಕಳು ನಿಮ್ಮ ಸ್ವಂತ ಹಾಗೂ ವೈಯುಕ್ತಿಕ ವಿಷಯ..ಆ ವಿಷಯವನ್ನು ನಾಲ್ಕು ಗೋಡೆಗಳ ಮಧ್ಯೆಯೇ ಇಡಿ..ಬೆಡ್ರೂಮಿನ ಗೋಡೆಯವರೆಗೂ ವಿಷಯ ಬಾರದಿರುವುದೇ ಉತ್ತಮ. ಇದನ್ನೆಲ್ಲಾ ಆದಷ್ಟೂ ಅರ್ಥ ಮಾಡಿಕೊಂಡು ಕಾರ್ಯ ರೂಪಕ್ಕೆ ತಂದಲ್ಲಿ ನಿಮ್ಮ ಇಡೀ ಜೀವನವೆಲ್ಲಾ ನಂದನಮಯವಾಗಿರುತ್ತೆ.