ಲಕ್ಷಾಂತರ ಮಹಿಳೆಯರಿಗೆ ಸ್ಪೂರ್ತಿಯಾಗಿರುವ ಈ ಮಹಿಳೆ ಯಾರು? ಮಾಡುತ್ತಿರುವ ಕೆಲಸ ಏನ್ ಗೊತ್ತಾ?

Inspire
Advertisements

ಮನುಷ್ಯನ ದೈಹಿಕವಾಗಿ ಚೆನ್ನಾಗಿದ್ದರೂ ಕೂಡ ಆಡಿಕೊಳ್ಳುವ ಜನರು ಹೆಚ್ಚಾಗಿರುವ ಈ ಕಾಲದಲ್ಲಿ ದೇಹದಲ್ಲಿ ಏನಾದರೂ ನ್ಯೂನತೆ ಇದ್ದರಂತೂ ಹೇಳುವ ಹಾಗೆಯೇ ಇಲ್ಲ ಬಿಡಿ. ಆದರೆ ಇಲ್ಲೊಬ್ಬರು ಸಾಧಕಿ ಇದನ್ನೆಲ್ಲಾ ಮೆಟ್ಟಿ ನಿಂತು ಅತೀ ಎತ್ತರಕ್ಕೆ ಬೆಳೆದಿದ್ದಾರೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯಂತೆ ಕೇವಲ ಮೂರು ಅಡಿ ಎರಡು ಇಂಚು ಇರುವ ಈ ಮಹಿಳೆ IAS ಅಧಿಕಾರಿಯಾಗುವ ಮೂಲಕ ತನ್ನ ಕುಬ್ಜತನಕ್ಕೆ ಸವಾಲ್ ಎಸೆದಿದ್ದಾರೆ. ಹೌದು, ಆರತಿ ಡೋಗ್ರಾ ಎಂಬ ಈ ಮಹಿಳೆ 2006ರ ಬ್ಯಾಚ್ ನ ಐಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ರಾಜಸ್ಥಾನದ ಅಜ್ಮೀರ್ ನ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿಕೊಂಡರು. ಆದರೆ ಈ ಸಾಧನೆ ಅವರಿಗೆ ಸುಲಭವಾಗಿ ಒಲಿದಿದ್ದೇನಲ್ಲ..ಇದರ ಹಿಂದೆ ಅಪಾರ ಪರಿಶ್ರಮವಿದೆ..ನೋವಿದೆ..

Advertisements

1979ರಲ್ಲಿ ಜನಿಸಿದ ಆರತಿ ಡೋಗ್ರಾ ಹುಟ್ಟಿದಾಗ ಎಲ್ಲಾ ಮಕ್ಕಳಂತೆ ಸಹಜವಾಗಿ ಆರೋಗ್ಯವಾಗಿ ಜನಿಸಿದ್ದರೂ ದಿನಕಳೆದಂತೆ ತಮ್ಮ ಮಗು ಕುಬ್ಜೆ ಎಂಬ ವಿಚಾರ ಆಕೆಯ ತಂದೆ ತಾಯಿಗಳ ಗಮನಕ್ಕೆ ಬರುತ್ತೆ. ಇನ್ನು ಇಂತಹ ಸಮಯದಲ್ಲಿ ಸಂಬಂಧಿಕರು ಆಡಿಕೊಳ್ಳುವುದು ಇದ್ದದ್ದೇ ತಾನೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಪೋಷಕರು ಆರತಿ ಕಡೆ ಹೆಚ್ಚಿನ ಗಮನ ಹರಿಸಿ ಆಕೆಯನ್ನ ಬೇರೆಯವರ ಮಕ್ಕಳ ಜೊತೆಗೆ ಸರಿಸಮಾನವಾಗಿ ಶಾಲೆಗೆ ಸೇರಿಸುತ್ತಾರೆ.

ಇನ್ನು ಓದಿನಲ್ಲಿ ಚುರುಕಾಗಿದ್ದ ಆರತಿ ಡೋಗ್ರಾ ಪದವಿ ಪೂರ್ವ ಶಿಕ್ಷಣದ ಬಳಿಕ ಡೆಲ್ಲಿಗೆ ಹೋಗಿ ಪ್ರತಿಷ್ಠಿತ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿಯನ್ನ ಪಡೆಯುತ್ತಾರೆ. ಇನ್ನು ಸ್ನಾತಕೋತ್ತರ ಪದವಿ ಮಾಡುವ ಸಲುವಾಗಿ ಡೆಹ್ರಾಡೂನ್ ಗೆ ಹೋದಾಗ ಅಲ್ಲಿ ಭೇಟಿಯಾದ IAS ಅಧಿಕಾರಿ ಮನೀಷಾ ಪನ್ವಾರ್ ಅವರಿಂದ ಐಎಸ್ ಪರೀಕ್ಷೆ ತೆಗೆದುಕೊಳ್ಳಲು ಪ್ರೇರೇಪಣೆ ಪಡೆದು 2006ರಲ್ಲಿ ಐಎಸ್ ಪರೀಕ್ಷೆ ಬರೆದ ಆರತಿ ಡೋಗ್ರಾ ತಮ್ಮ ಮೊದಲ ಪ್ರಯತ್ನದಲ್ಲೇ IAS ಅಧಿಕಾರಿಯಾಗಿ ಹೊರಹೊಮ್ಮಿದ್ದಲ್ಲದೆ ರಾಜಸ್ಥಾನದ ಅಜ್ಮೀರ್ ನ ಜಿಲ್ಲಾಧಿಕಾರಿಯಾಗಿ ನೇಮಕಗೊಳ್ಳುತ್ತಾರೆ. ತಾನು ಬೆಳೆದು ನಿಂತಾಗ ತನ್ನನ್ನ ನೋಡಿ ಅಪಹಾಸ್ಯ ಮಾಡಿ ನಕ್ಕವರೆಲ್ಲಾ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಹಮಹಾನ್ ಸಾಧನೆ ಮಾಡಿದ ಆರತಿ ಡೋಗ್ರಾ ತನ್ನ ತಂದೆತಾಯಿಗಳು ತನ್ನ ಮೇಲೆ ಇಟ್ಟಿದ್ದ ನಂಬಿಕೆಗೆ ತಕ್ಕ ಪ್ರತಿಫಲವನ್ನೇ ಕೊಟ್ಟ ದಿಟ್ಟ ಹೆಣ್ಣುಮಗಳು.

ಇನ್ನು ಆರತಿ ಡೋಗ್ರಾ ಅಜ್ಮೀರ್‌ನ  ಜಿಲ್ಲಾಧಿಕಾರಿಯಾಗಿ ನೇಮಕವಾದಾಗಿನಿಂದಲೂ ಉತ್ತಮ ಕಾರ್ಯಗಳನ್ನ ಜಾರಿಗೆ ತರುವುದರ ಮೂಲಕ ತನ್ನ ಕೈನಲ್ಲಿ ಏನೂ ಆಗುವುದಿಲ್ಲ ಎಂದು ಕೂರುವ ಎಷ್ಟೋ ಹೆಣ್ಣುಮಕ್ಕಳಿಗೆ ಮಾದರಿಯಾಗಿದ್ದಾರೆ. ಇನ್ನು ಅಜ್ಮಿರ್ ನ ಪ್ರತೀ ಗ್ರಾಮಗಳಲ್ಲಿಯೂ ಕಾಂಕ್ರೀಟ್ ಶೌಚಾಲಯವನ್ನು ಕಟ್ಟಿಸಿಕೊಟ್ಟಿದ್ದಲ್ಲದೆ ತಾವೇ ಖುದ್ದಾಗಿ ಗ್ರಾಮಗಳಿಗೆ ತೆರಳಿ ಬಯಲಿನಲ್ಲಿ ಮಲವಿಸರ್ಜನೆ ಮಾಡದಂತೆ ಮನವಿ ಕೂಡ ಮಾಡಿಕೊಂಡಿರುವುದು ಇವರ ಉತ್ತಮ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.

ಇನ್ನು ಕಾರ್ಯ ವೈಖರಿಯನ್ನ ಕಂಡ ಪ್ರಧಾನಿ ನರೇಂದ್ರ ಮೋದಿಯವರು ಆರತಿ ಡೋಗ್ರಾರವರನ್ನ ಮನಃಪೂರ್ವಕವಾಗಿ ಹೊಗಳಿದ್ದಾರೆ. ಆರತಿ ಡೋಗ್ರಾ ಅವರು ತಮಗಿದ್ದ ದೈಹಿಕ ನ್ಯೂನತೆಗಳನ್ನ ಮೆಟ್ಟಿ ನಿಂತು ಲಕ್ಷಾಂತರ ಅಂಗವಿಕಲರಿಗೆ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ ಎಂದರೆ ತಪ್ಪಾಗೊದಿಲ್ಲ.