ಶ್ರೀರಾಮನ ಭವ್ಯ ಮಂದಿರ ಹೇಗಿರಲಿದೆ ಗೊತ್ತಾ? ಇಲ್ಲಿದೆ ನೋಡಿ ಲೇಟೆಸ್ಟ್ ಫೋಟೋಗಳು ಕಣ್ತುಂಬಿಕೊಳ್ಳಿ

Kannada News

ಇಡೀ ದೇಶ ಹಾಗೂ ಜಗತ್ತಿನ ಹಿಂದೂಗಳ ಕಣ್ಣು ಈಗ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯತ್ತ ನೆಟ್ಟಿದೆ. ನಾಳೆ ಆಗಸ್ಟ್ ೫ ರಂದು ಭಗವಾನ್ ರಾಮ ಮಂದಿರದ ಭೂಮಿ ಪೂಜೆ ಕಾರ್ಯ ನೆರವೇರಲಿದೆ. ಪ್ರಧಾನಿ ಮೋದಿಯವರು ಭೂಮಿ ಪೂಜೆಯ ಕಾರ್ಯವನ್ನ ನೆರವೇರಿಸಲಿದ್ದಾರೆ. ಇನ್ನು ಅಯೋಧ್ಯೆಯಂತೂ ನವ ವಧುವಿನಂತೆ ಸಿಂಗಾರಗೊಂಡಿದ್ದು ಎಲ್ಲಿ ನೋಡಿದರೂ ರಾಮ ಜಪವೇ ಶುರುವಾಗಿದೆ. ಅಯೋಧ್ಯೆಯ ಮನೆಗಳ ಗೋಡೆಗಳ ಮೇಲೆ ರಾಮಾಯಣದ ದೃಶ್ಯಗಳನ್ನ ಚಿತ್ರಿಸಲಾಗಿದೆ. ಇನ್ನು ಅಯೋಧ್ಯೆಗೆ ಬೇರೆ ಬೇರೆ ಕಡೆಗಳಿಂದ ಸಾಧು ಸಂತರೂ ಅತಿಥಿಗಳ ಆಗಮನವಾಗಿದೆ. ಗಣ್ಯರು ಸೇರಿದಂತೆ ಮಠಾಧೀಶರು ಸಾಧು ಸಂತರೂ ರಾಮ ಮಂದಿರದ ಭೂಮಿ ಪೂಜೆಯನ್ನ ಕಣ್ಣಾರೆ ನೋಡುವುದೇ ನಮಗೆ ದೊಡ್ಡ ಭಾಗ್ಯ ಎಂದು ಸಂತಸಪಡುತ್ತಿದ್ದಾರೆ. ನಿರ್ಮಾಣವಾಗಲಿರುವ ಭಗವಾನ್ ಶ್ರೀರಾಮನ ಮಂದಿರ ಹೀಗಿರಲಿದೆ ಕೆಳಗಿನ ಚಿತ್ರ ನೋಡಿ..

ಇನ್ನು ದೇಶದ ಏಕತೆಯನ್ನ ಸಾರುವ ರಾಮ ಮಂದಿರದ ಭ್ಯವ್ಯತೆಗೇ ಫೋಟೋಗಳೇ ಸಾಕ್ಷಿ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬಬ್ಬರೂ ಒಂದೊಂದು ರೀತಿ ಪ್ರತಿಕ್ರಿಯೆಗಳನ್ನ ನೀಡುತ್ತಿದ್ದಾರೆ. ಅದರಲ್ಲಿ ಒಬ್ಬರಂತೂ ರಾಮ ಮಂದಿರದ ಫೋಟೋಗಳನ್ನ ನೋಡಿಯೇ ನನ್ನ ಜೀವನ ಧನ್ಯವಾಯಿತು ಎಂದು ಬರೆದುಕೊಂಡಿದ್ದಾರೆ. (ಭಗವಾನ್ ಶ್ರೀರಾಮ ಚಂದ್ರನ ಮಂದಿರದ ಹಿಂಬದಿಯ ನೋಟ ಕೆಳಗಿರುವ ಚಿತ್ರದಂತೆ ಹೀಗಿರಲಿದೆ ನೋಡಿ)

ಇನ್ನು ರಾಜಸ್ಥಾನದ ರಾಜ್ಯಪಾಲರಾಗಿರುವ ಕಲರಾಜ್ ಮಿಶ್ರಾ ರಾಮ ಮಂದಿರದ ನಿರ್ಮಿಸುವ ಕನಸು ನನಸಾಗಿಟ್ಟುದ್ದು ಇದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಭ ಕೋರುವುದರ ಜೊತೆಗೆ ಧನ್ಯವಾದ ತಿಳಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. (ರಾಮನ ಮಂದಿರದ ಮತ್ತೊಂದು ಭಾಗದ ಭವ್ಯ ನೋಟ ಕೆಳಗಿನ ಚಿತ್ರದಲ್ಲಿ ಕಣ್ತುಂಬಿಕೊಳ್ಳಿ)

ನನ್ನ ಕಣ್ಣೆದುರಿಗೆ ರಾಮ ಮಂದಿರದ ಭೂಮಿ ಪೂಜೆ ನಡೆಯುತ್ತಿದ್ದು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ನನ್ನ ಭಾಗ್ಯ ಎಂದು ಪಂತಂಜಲಿಯ ಬಾಬಾ ರಾಮ್ ದೇವ್ ಹೇಳಿದ್ದಾರೆ. ಇನ್ನು ಭೂಮಿ ಪೂಜೆ ನಡೆಸಲಿರುವ ನರೇಂದ್ರ ಮೋದಿಯವರು ಮೊದಲು ಅಯೋಧ್ಯಯ ಹನುಮಾನ್ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದು ಬಳಿಕವಷ್ಟೇ ರಾಮ ಮಂದಿರದ ಶಿಲಾನ್ಯಾಸ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

ಶ್ರೀ ಅಂಬಲಪಾಡಿ ಮಹಾಕಾಳಿ ಮತ್ತು ಕೋಲ್ಕತ್ತಾ ಕಾಳಿ, ಸ್ಮಶಾನ ಕಾಳಿ ದೇವಿಯ ತಂತ್ರ ಮಂತ್ರಗಳ ದೈವ ಶಕ್ತಿಯಿಂದ ನಿಮ್ಮ ಯಾವುದೇ ಇರಲಿ ಎಷ್ಟೇ ಕಠಿಣ ಮತ್ತು ಗುಪ್ತ ಸಮಷ್ಯಗಳಿಗೆ ಕೇವಲ 3 ದಿನಗಳಲ್ಲಿ ಶಸ್ವಾತ ಪರಿಹಾರ ಮಾಡಿಕೊಡಿತ್ತಾರೆ. ದೂರವಾಣಿ ಸಂಖ್ಯೆ: 944 888 6845 ನಿಮ್ಮ ಸಮಸ್ಯೆಗಳಾದ: ಗಂಡ ಹೆಂಡತಿಯ ಸಮಸ್ಯೆ, ಕೋರ್ಟ್ ಕೇಸ, ಡೈವೋರ್ಸ್, ಮದುವೆ ವಿಳಂಬ, ಸ್ತ್ರೀ-ಪುರುಷ ಇಷ್ಟಪಟ್ಟವರು ನಿಮ್ಮಂತೆ ಆಗಲು, ಬಿಸಿನೆಸ್ ನಲ್ಲಿ ಲಾಭ–ನಷ್ಟ , ಅತ್ತೆ ಸೊಸೆ ರಾಜಕೀಯ, ಉದ್ಯೋಗ, ಜನವಶ, ಸಾಲದಬಾಧೆ, ಶತ್ರು ಪೀಡೆ, ಮನೆಯಲ್ಲಿ ಅಶಾಂತಿ, ಕೊರತೆ, ಜೀವನದಲ್ಲಿ ಅಭಿವೃದ್ಧಿ ಮತ್ತು ಏಳಿಗೆಯಾಗದೇ ನೊಂದಿದ್ದರೆ ಶ್ರೀ ಬ್ರಹ್ಮಾನಂದ್ ಗುರುಜಿಯವರನ್ನು ಸಂಪರ್ಕಿಸಿ 9448886845.