2 ಚಮಚ ಎಣ್ಣೆ ಇದ್ರೆ ಸಾಕು ರೆಡಿ ಆಗುತ್ತೆ ಗರಂ ಗರಂ ಈ ಬ್ರೇಕ್ ಫಾಸ್ಟ್

Kannada News

ನಮಸ್ತೆ ಸ್ನೇಹಿತರೆ, ಈಗಂತೂ ತುಂಬಾ ಚಳಿ ಗಾಳಿ. ಏನಾದ್ರು ಬಿಸಿ ಬಿಸಿ ಖಾರದ ಪದಾರ್ಥಗಳನ್ನ ತಿನ್ನಬೇಕೆಂದು ಅನ್ನಿಸದೆ ಇರೋಲ್ಲ. ಅದು ಮನೆಯಲ್ಲೇ ಮಾಡಿಕೊಂಡು ತಿನ್ನುವುದರಿಂದ ಆರೋಗ್ಯ ಕೂಡ ಉತ್ತಮವಾಗಿರುತ್ತೆ. ಹಾಗಾದ್ರೆ ಬಾಯಿಗೆ ತುಂಬಾ ಟೇಸ್ಟಿಯಾಗಿ ರುಚಿಯಾಗಿ ಬಾಯಿಗೆ ಹಿತ ಕೊಡುವ ರೆಸಿಪಿಯನ್ನ ಮಾಡೋದು ಹೇಗೆ ಅಂತ ನೋಡೋಣ ಬನ್ನಿ. ಇದನ್ನ ಬೆಳಗಿನ ಸಮಯದ ತಿಂಡಿಗೆ ಅಥ್ವಾ ಸಾಯಂಕಾಲದ ಸ್ನಾಕ್ಸ್ ಗು ಕೂಡ ಇದನ್ನ ಮಾಡಿಕೊಳ್ಳಬಹುದು. ಹಾಗಾದ್ರೆ ಇದನ್ನ ಮಾಡೋದು ಹೇಗೆ ಏನೆಲ್ಲಾ ಪದಾರ್ಥಗಳು ಬೇಕೆಂದು ನೋಡೋಣ ಬನ್ನಿ..

ಬೇಕಾದ ಪದಾರ್ಥಗಳು : ಒಂದು ಕಪ್ ರವೆ, ಒಂದು ಕಪ್ ಮೊಸರು, ಈರುಳ್ಳಿ 2, ಟೊಮೊಟೊ 4, ಹಸಿಮೆಣಸಿನಕಾಯಿ 4, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಅರ್ಧ ಟೀ ಸ್ಪೂನ್, ಕರಿಬೇವು, ಅಡುಗೆ ಎಣ್ಣೆ, ಶುಂಠಿ 2 ಇಂಚ್, ಬೆಳ್ಳುಳ್ಳು 5 ರಿಂದ 6..ಮಾಡುವ ವಿಧಾನ ಹೇಗೆಂದು ಕೆಳಗಿರುವ ಈ ವಿಡಿಯೋ ನೋಡಿ..

ಅಡುಗೆಯ ವಿಚಾರಕ್ಕೆ ಬಂದಾಗ ವಾರಾನುಗಟ್ಟಲೇ ಸ್ಟೋರ್ ಮಾಡಬಹುದಾದ ಟೇಸ್ಟಿಯಾದ ರೆಸಿಪಿಗಳನ್ನ ಮಾಡುವುದರಿಂದ ಬೇಕಾದಾಗ ಉಪಯೋಗಿಸಿಕೊಂಡು ತಿನ್ನಬಹುದಾಗಿದೆ. ಅದರಲ್ಲಿ ಒಂದು ಈರುಳ್ಳಿ ಕಾರ ಚಟ್ನಿ ಅಂತ. ವೈಟ್ ರೈಸ್ ಗೆ ಹೇಳುಮಾಡಿಸದಂತಿರುವ ಈ ಚಟ್ನಿಯನ್ನ ಒಮ್ಮೆ ಮಾಡಿಕೊಂಡರೆ ವಾರಗಳ ಕಾಲ ಸ್ಟೋರ್ ಮಾಡಿ ಅನ್ನದ ಜೊತೆ ತಿನ್ನಬಹುದಾಗಿದೆ. ಇನ್ನು ಕೇವಲ ಒಂದು ಚಮಚ ಈ ತರಹದ ಚಟ್ನಿ ಇದ್ದರೆ ಸಾಕು ನೀವು ತಟ್ಟೆಯಲ್ಲಿರುವ ಅನ್ನವನ್ನೆಲ್ಲಾ ಖಾಲಿ ಮಾಡುತ್ತೀರಾ..ಹಾಗಾದ್ರೆ ಈ ಈರುಳ್ಳಿ ಖಾರದ ಚಟ್ನಿ ಮಾಡೋದು ಹೇಗೆ ? ಏನೆಲ್ಲಾ ಬೇಕು ಎಂಬುದನ್ನ ನೋಡೋಣ ಬನ್ನಿ..

ಈರುಳ್ಳಿ ಕಾರದ ಚಟ್ನಿ ಮಾಡಲು ಬೇಕಾದ ಪದಾರ್ಥಗಳು : ಈರುಳ್ಳಿ 10, ಬೆಳ್ಳುಳ್ಳಿ 10, ಮೆಂತ್ಯ ಕಾಳು ಅರ್ಧ ಚಮಚ, ಕೊತ್ತಂಬರಿ ಬೀಜ 1 ಚಮಚ, ಸಾಸಿವೆ ಅರ್ಧ ಚಮಚ, ಜೀರಿಗೆ 1 ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಒಣ ಮೆಣಸಿನಕಾಯಿ 10, ಉದ್ದಿನ ಬೇಳೆ ಅರ್ಧ ಚಮಚ, ಕಡ್ಲೆ ಬೇಳೆ ಅರ್ಧ ಚಮಚ, ಕರಿಬೇವು, ಅಡುಗೆ ಎಣ್ಣೆ.