ನೆರೆ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡಿದ ಸಿಎಂ: ಯಾರಿಗೆ ಎಷ್ಟು ಪರಿಹಾರ ಸಿಗಲಿದೆ ನೋಡಿ ?

News

ನಮಸ್ತೆ ಸ್ನೇಹಿತರೆ, ಕಳೆದ ಎರಡು ಮೂರೂ ದಿನಗಳಿಂದ ರಾಜ್ಯಾದ್ಯಂತ ಬಾರೀ ಮಳೆಯಾಗಿದ್ದು ನದಿಗಳು ತುಂಬಿ ಹರಿಯುತ್ತಿವೆ. ಪ್ರವಾಹ ಪರಿಸ್ಥಿತಿ ಎದುರಾಗಿದ್ದು ಜನರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇದರ ನಡುವೆಯೇ ಕೊ’ರೋನಾ ದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಯಡಿಯೂಪ್ಪನವರು ಅಲ್ಲಿಂದಲೇ ಮುಂಜಾಗ್ರತಾ ಕ್ರಮಗಳನ್ನ ವಹಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿರುವ ಬಿಎಸ್ ವೈ ಸಂತ್ರಸ್ತರಿಗಾಗಿ ಪರಿಹಾರದ ಘೋಷಣೆ ಕೂಡ ಮಾಡಿದ್ದಾರೆ. ಇನ್ನು ತಕ್ಷಣದ ಪರಿಹಾರವಾಗಿ ಸಂತ್ರಸ್ತರಿಗೆ ಹತ್ತು ಸಾವಿರ ರೂಪಾಯಿಗಳನ್ನ ನೀಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿಯವರು ಆದೇಶ ನೀಡಿದ್ದಾರೆ.

ಇನ್ನು ಯಾರ್ಯಾರಿಗೆ ಎಷ್ಟೆಷ್ಟು ಪರಿಹಾರ ಅಂತ ನೋಡುವುದಾದರೆ, ಮಳೆಯಿಂದಾಗಿ ಹಾನಿಯಾಗಿರುವ ಕುಟುಂಬಗಳಿಗೆ ನೆರವಿನ ರೂಪದಲ್ಲಿ ತಕ್ಷಣದ ಪರಿಹಾರವಾಗಿ ಹತ್ತು ಸಾವಿರ, ಮಳೆಯಿಂದಾಗಿ ಸಂಪೂರ್ಣ ಮನೆ ಹಾಳಾಗಿದ್ದರೆ ಅಂತಹ ಕುಟುಂಬಗಳಿಗೆ ೫ ಲಕ್ಷ, ಒಂದು ವೇಳೆ ಸ್ವಲ್ಪ ಭಾಗ ಮನೆಯ ಹಾನಿಯಾಗಿದ್ದರೆ ಅದಕ್ಕೆ ಅನುಗುಣವಾಗಿ ಸಂತ್ರಸ್ತರಿಗೆ ಪರಿಹಾರ ವಿತರಿಸಬೇಕೆಂದು ಯಡಿಯೂರಪ್ಪನವರು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಗ್ರಾಮಗಳಲ್ಲಿರುವ ಶಾಲಾ ಕಾಲೇಜುಗಳನ್ನೇ ನಿರಾಶ್ರಿತ ಕೇಂದ್ರಗಳನ್ನಾಗಿ ಮಾಡಿ ಸಂತ್ರಸ್ತರಾದವರಿಗೆ ಅಗತ್ಯ ಸೌಲಭ್ಯಗಳನ್ನ ಒದಗಿಸುವುದರ ಜೊತೆಗೆ ಮಳೆಯಿಂದಾದ ಬೆಳೆ ಹಾನಿ ಸೇರಿದಂತೆ ಪ್ರತೀ ದಿನ ಏನೆಲ್ಲಾ ಹಾನಿ ಸಂಭವಿಸುತ್ತಿದೆಯೋ ಅದರ ಸಮೀಕ್ಷೆ ನಡೆಸಿ ವರದಿ ನೀಡಬೇಕೆಂದು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎಂದು ಹೇಳಲಾಗಿದೆ.