ರಾಣಾ ಬಲ್ಲಾಳದೇವನ ಮನೆಯಲ್ಲಿ ಮದುವೆ ಸಂಭ್ರಮ: ಇಲ್ಲಿದೆ ನೋಡಿ ಅರಿಶಿನ ಶಾಸ್ತ್ರದ ಫೋಟೋಗಳು

Cinema
Advertisements

ಬಾಹುಬಲಿ ಚಿತ್ರದ ಬಲ್ಲಾಳದೇವ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಮದುವೆ ಆಗಸ್ಟ್ ೮ರಂದು ಹೈದರಾಬಾದ್ ನಲ್ಲಿ ನಡೆಯಲಿದೆ. ಇನ್ನು ಈಗಾಗಲೇ ರಾಣಾ ಮತ್ತು ಮಿಹಿಕಾ ಬಜಾಜ್ ಅವರ ಅರಿಶಿನ ಶಾಸ್ತ್ರ ಹಾಗೂ ಮೆಹಂದಿ ಶಾಸ್ತ್ರಗಳ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ನವ ಜೋಡಿಗೆ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ. ಇನ್ನು ಆಗಸ್ಟ್ ಆರರಂದು ನಡೆದ ಅರಿಶಿನ ಶಾಸ್ತ್ರದ ಸಮಾರಂಭದಲ್ಲಿ ಮಿಹಿಕಾ ಬಜಾಜ್ ಹಳದಿ ಬಣ್ಣದ ಲೆಹಂಗಾ ಧರಿಸಿದ್ದರೆ, ವರ ರಾಣಾ ಬಿಳಿ ಪಂಚೆ ಜೊತೆ ಬಿಳಿ ಶರ್ಟ್ ಧರಿಸಿ ಮಿಂಚಿದ್ದಾರೆ.

Advertisements

ಇನ್ನು ನಟ ರಾಣಾ ಮತ್ತು ಮಿಹಿಕಾ ಬಜಾಜ್ ಪರಸ್ಪರ ನೋಡುತ್ತಿರುವ ಚಿತ್ರಗಳಂತೂ ವೈರಲ್ ಆಗಿದ್ದು ಅಭಿಮಾನಿಗಳು ಈ ಫೋಟೋಗಳನ್ನ ನೋಡಿ ಫಿದಾ ಆಗಿದ್ದಾರೆ. ಇನ್ನು ಮಾರ್ಚ್ ತಿಂಗಳಿನಲ್ಲಿ ಎಂಗೇಜ್ ಆಗಿದ್ದ ಈ ಜೋಡಿ ಆಗಸ್ಟ್ ೫ ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.ಇನ್ನು ಮದುವೆ ರಾಣಾ ದಗ್ಗುಬಾಟಿ ಅವರ ಒಡೆತನದ ರಾಮಾನಾಯ್ಡು ಸ್ಟುಡಿಯೋದಲ್ಲಿ ತೆಲಗು ಮತ್ತು ಮಾರ್ವಾಡಿ ಸಂಪ್ರದಾಯದಂತೆ ವಿವಾಹ ನೆರವೇರಲಿದೆ ಎಂದು ಹೇಳಲಾಗಿದೆ.

ಮಿಹಿಕಾ ಬಜಾಜ್ ನನಗೆ ಒಳ್ಳಯ ಫೇರ್ ಆಗಿದ್ದು ಮಿಹಿಕಾಳನ್ನ ಮದುವೆಯಾಗುವುದು ನನ್ನ ಜೀವನದ ಅತ್ತ್ಯತ್ತಮ ಸಮಯ ಎಂದು ರಾಣಾ ಹೇಳಿದ್ದಾರೆ. ಇನ್ನು ಮಿಹಿಕಾ ಬಜಾಜ್ ಡ್ಯೂ ಡ್ರಾಪ್ ಡಿಸೈನ್ ಸ್ಟುಡಿಯೋ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಸ್ಥಾಪಕಿಯಾಗಿದ್ದಾರೆ. ಇನ್ನು ಸೋಂಕು ಇರುವ ಕರಣ ಸೀಮಿತ ಅತಿಥಿಗಳಿಗೆ ಮಾತ್ರ ವಿವಾಹ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗಿದೆ.