ರಾಮ ಮಂದಿರದ ಭೂಮಿ ಪೂಜೆ ಕುರಿತು ಮಾತನಾಡಿದ ಮೋಹಕ ತಾರೆ ರಮ್ಯಾ ! ಹೇಳಿದ್ದೇನು ಗೊತ್ತಾ?

News
Advertisements

ಸ್ಯಾಂಡಲ್ವುಡ್ ನ ಮೋಹಕ ತಾರೆ ಹಾಗೂ ರಾಜಕಾರಣಿ ರಮ್ಯಾ ಚಿತ್ರರಂಗದಿಂದ ದೂರ ಉಳಿದುಬಿಟ್ಟಿದ್ದಾರೆ. ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ಕೆಲಸ ಮಾಡಿದ್ದ ರಮ್ಯಾ ಇತ್ತೀಚಿಗೆ ರಾಜಕೀಯ ರಂಗದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇನ್ನು ಸೋಷಿಯಲ್ ಮಿಡಿಯಾದಿಂದ ದೂರ ಉಳಿದಿದ್ದ ರಮ್ಯಾ ಈಗ ಕಮ್ ಬ್ಯಾಕ್ ಮಾಡಿದ್ದು ಅಭಿಮಾನಿಗಳ ಜೊತೆ ಕೆಲವೊಂದು ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಇನ್ನು ಅಭಿಮಾನಿಗಳು ಕೂಡ ಸ್ಯಾಂಡಲ್ವುಡ್ ಗೆ ಕಮ್ ಬ್ಯಾಕ್ ಮಾಡುವಂತೆ ಮನವಿ ಕೂಡ ಮಾಡಿಕೊಂಡಿದ್ದಾರೆ.

ಇನ್ನು ಮೊನ್ನೆಯಷ್ಟೇ ವಿಭಿನ್ನ ರೀತಿಯ ಫೋಟೋಗಳನ್ನು ಹಾಗೂ ಹೇರ್ ಸ್ಟೈಲ್ ಮಾಡುತ್ತಿರುವಾ ಫೋಟೋಗಳನ್ನ ಪೋಸ್ಟ್ ಮಾಡಿದ್ದು ರಮ್ಯಾ ಮತ್ತೆ ಸಿನಿಮಾ ಮಾಡಲಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದರು. ಇನ್ನುಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡದ ರಮ್ಯಾ ಈಗ ರಾಮಮಂದಿರದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

Advertisements

ಆಗಸ್ಟ್ ೫ ರಂದು ಅಯೋಧ್ಯಯಲ್ಲಿ ರಾಮಂದಿರದ ಭೂಮಿ ಪೂಜೆ ನೆರವೇರಿದ್ದು ಕೋಟ್ಯಂತರ ಹಿಂದೂಗಳ ಕನಸು ನೆರವೇರಿದ ದಿನವಾಗಿತ್ತು. ಇನ್ನು ಇದರ ಕುರಿತು ಪೋಸ್ಟ್ ಮಾಡಿರುವ ರಮ್ಯಾ ನನಗೆ ಈಗ ಸಂತೋಷವಾಗಿದೆ..ಏಕೆಂದರೆ ಅಯೋಧ್ಯಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವುದರಿಂದ ಹಿಂದೂಗಳು ಖುಷಿಯಾಗಿದ್ದಾರೆ..ಹಾಗಾಗಿ ನಂಗೂ ಖುಷಿಯಾಗಿದೆ..ಹಾಗೆಯೆ ಮಸೀದಿ ಕಟ್ಟಿಸಿದಾಗ ಮುಸ್ಲಿಮರು ಸಂತೋಷಪಡುತ್ತಾರೆ..ಆಗ ಕೂಡ ನನಗೆ ಖುಷಿಯಾಗುತ್ತದೆ..ಆದರೆ ಇದೆಲ್ಲಕ್ಕಿಂತಲೂ ಯಾವಾಗ ಜನರಿಗೆ ಮನವರಿಕೆ ಆಗುತ್ತದೆಯೋ ಆಗ ನನಗೆ ಸಂತೋಷ ಆಗುತ್ತದೆ ಎಂದು ಬರೆದುಕೊಂಡಿದ್ದಾರೆ.

ದೇವರನ್ನ ಕಾಣಲು ಸಂತೋಷವಾಗಿರಲು ಮಂದಿರ ಮಸೀದಿಗಳೇ ಬೇಕಾಗಿಲ್ಲ..ಒಟ್ಟಿಗೆ ಬದುಕುವುದರಲ್ಲೇ ಇದೆ ನಿಜವಾದ ಸಂತೋಷ. ನಮ್ಮೊಳಗೇ ನಿಜವಾದ ದೇವರಿದ್ದಾನೆ ಎಂದು ನಟಿ ರಮ್ಯಾ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.