ಖ್ಯಾತ ಹಿರಿಯ ನಟ ಬ್ರಹ್ಮಚಾರಿ ದತ್ತಣ್ಣನ ಹಿಸ್ಟರಿ ಕೇಳಿದ್ರೆ ನಿಜಕ್ಕೂ ನೀವು ಬೆರಗಾಗುತ್ತೀರಾ !

Cinema

ನಮಸ್ತೆ ಸ್ನೇಹಿತರೆ, ಕನ್ನಡದ ಖ್ಯಾತ ಹಿರಿಯ ನಟರಲ್ಲಿ ದತ್ತಣ್ಣ ಕೂಡ ಒಬ್ಬರು. ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಪರೂಪದ ವಿಶೇಷ ಕಲಾವಿದ ಇವರು. ಬಹುತೇಕರಿಗೆ ದತ್ತಣ್ಣನ ಬಗ್ಗೆ ಗೊತ್ತಿಲ್ಲದ ವಿಚಾರ ಏನೆಂದರೆ ವಾಯುದಳದಲ್ಲಿ ವಿಂಗ್ ಕಮಾಂಡರ್ ಆಗಿ ೨೦ ವರ್ಷ ಸೇವೆಸಲ್ಲಿಸಿ ನಿವೃತ್ತರಾದ ದತ್ತಣ್ಣ ಚಿತ್ರರಂಗಕ್ಕೆ ಎಂಟ್ರಿ ತುಂಬಾ ತಡವೇ ಆಗಿದ್ದರೂ ತಮ್ಮ ೩೦ ವರ್ಷಗಳ ಈ ಸಿನಿಜರ್ನಿಯಲ್ಲಿ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಮೂಲತಃ ಹರಿಹಾರದವರಾದ ದತ್ತಣ್ಣ ತಮ್ಮ ಹೈಸ್ಕೂಲ್ ಶಿಕ್ಷಣವನ್ನ 1958ರಲ್ಲಿ ಚಿತ್ರದುರ್ಗದಲ್ಲಿ ಪೂರೈಸಿದರು. ಇನ್ನು ಆ ಕಾಲಕ್ಕೆ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿಕೊಂಡಿದ್ದ ವಿದ್ಯಾರ್ಥಿ.

ಇನ್ನು 1959ರಲ್ಲಿ ದ್ವಿತೀಯ ಪಿಯುಸಿಯಲ್ಲಿ ಸೆಂಕೆಂಡ್ ರ್ಯಾಂಕ್ ಕೂಡ ಬಂದ್ರು. ಬಳಿಕ ಮದ್ರಾಸಿನ ಐಐಟಿ ಯಲ್ಲಿ ಇಂಜಿನಿಯರಿಂಗ್ ಸೇರಲು ಹೋದ ದತ್ತಣ್ಣ ಅಲ್ಲಿ ೫ ವರ್ಷ ಕಳೆಯಲು ಆಗದೆ ಬೆಂಗಳೂರಿಗೆ ಹಿಂದಿರುಗಿದ್ರು. ಬೆಂಗಳೂರಿನ UVCE ಕಾಲೇಜಿಗೆ ಸೇರಿ 1964ರಲ್ಲಿ ಇಂಜಿನಿಯರಿಂಗ್ ಪದವಿ ಪೂರ್ತಿ ಮಾಡಿದ್ರು. ಇನ್ನು ಇದೆ ಸಮಯದಲ್ಲಿ ಭಾರತ ಚೀನಾ ಮಧ್ಯ ಯು’ದ್ಧ ನಡೆಯುತ್ತಿದ್ದು ದೇಶದ ನಾನಾ ಕಡೆಗಳಿಂದ ಪದವಿ ಅಂತಿಮ ವರ್ಷದ ವಿಧ್ಯಾರ್ಥಿಗಳನ್ನ ಭಾರತೀಯ ಸೇನೆಗೆ ಸೇರಿಸಿಕೊಳ್ಳಲು ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರುರವರು ಆದೇಶ ಕೊಟ್ಟಾಗ ಆಗ ಭಾರತೀಯ ಸೇನೆಗೆ ದತ್ತಣ್ಣ ಕೂಡ ಸೇರಿಕೊಂಡರು.

ಇನ್ನು ದತ್ತಣ್ಣ ಭಾರತೀಯ ವಾಯುಸೇನ್ಯ ತಾಂತ್ರಿಕ ವಿಭಾಗದಲ್ಲಿ ಕಮಿಷನರ್ ಆಗಿ ಅಂದಿನ ರಾಷ್ಟ್ರಪತಿಯಾಗಿದ್ದ ವಿವಿ ಸಿಂಗ್ ರವರಿಂದಲೇ ಅರ್ಹತಾ ಪತ್ರವನ್ನ ಪಡೆದುಕೊಂಡರು. ಇನ್ನು ಹಿರಿಯ ನಟ ದತ್ತಣ್ಣ ಏನೆಲ್ಲಾ ಸಾಧನೆ ಮಾಡಿದ್ದಾರೆ ಎಂಬುದನ್ನ ನೀವು ತಿಳಿದರೆ ಆಚರಿಪಡುತ್ತೀರಾ..ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ಈ ವೀಡಿಯೋ ನೋಡಿ..