ವಿವಾದಕ್ಕೆ ಕಾರಣವಾಯ್ತು ಚಂದನ್ ಕವಿತಾ ಫೋಟೋ ! ಆಕ್ರೋಶ ಹೊರಹಾಕಿದ ನೆಟ್ಟಿಗರು ?

Cinema

ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಕವಿತಾ ಹಾಗೂ ನಟ ಚಂದನ್ ಇರುವ ಫೋಟೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು ವಿವಾದಕ್ಕೆ ಕಾರಣವಾಗಿದೆ. ಹೌದು ತೀರ್ಥ್ ಕ್ಷೇತ್ರಗಳೆಂದರೆ ಅದರದ್ದೇ ಆದ ಪಾವಿತ್ರತೆ ಇರುತ್ತದೆ. ಅಂತಹ ಸ್ಥಳಗಳಿಗೆ ಯಾರೇ ಹೋದರೂ ಅಲ್ಲಿನ ಪಾವಿತ್ರತೆಯನ್ನ ಕಾಪಾಡಬೇಕಾಗುತ್ತದೆ. ಅದರಲ್ಲೂ ಸೆಲೆಬ್ರೆಟಿಗಳು ಎನಿಸಿಕೊಂಡವರು ಇಂತಹ ಕೆಲಸಗಳಲ್ಲಿ ಮುಂದಾಗಿದ್ದು ಜಾಗೃತಿ ಮೂಡಿಸಬೇಕಾದ ಜವಾಬ್ದಾರಿ ಅಂತಹವರ ಮೇಲಿರುತ್ತದೆ. ಆದರೆ ನಟ ಚಂದನ್ ನಟಿ ಕವಿತಾ ಮಾಡಿರುವ ಕೆಲಸದಿಂದ ಈಗ ವಿವಾದಕ್ಕೆ ಕಾರಣವಾಗಿದೆ.

ಹೌದು, ನೆಲಮಂಗಲ ತಾಲ್ಲೂಕಿನಲ್ಲಿರುವ ಶಿವಗಂಗೆ ಬೆಟ್ಟವನ್ನ ದಕ್ಷಿಣ ಕಾಶಿ ಎಂದೇ ಕರೆಯಲಾಗತ್ತದೆ. ಇನ್ನು ಈ ಪವಿತ್ರ ಬೆಟ್ಟದ ತುತ್ತ ತುದಿಯಲ್ಲಿರುವ ಸ್ಥಳವನ್ನ ಅಪವಿತ್ರ ಮಾಡಿದ್ದಾರೆ ಎನ್ನುವ ಆರೋಪ ಚಂದನ್ ಹಾಗೂ ಕವಿತಾ ಮೇಲೆ ಕೇಳಿಬಂದಿದ್ದು ನೆಟ್ಟಿಗರು ಗರಂ ಆಗಿದ್ದಾರೆ. ಹೌದು ಈ ಕಿರುತೆರೆನಾಟ ನಟಿಯರಿಬ್ಬರೂ ಶೂ ಧರಿಸಿಕೊಂಡು ಶಿವಗಂಗೆ ಬೆಟ್ಟದ ತೀರ್ಥ ಕಂಬದ ಬಳಿ ಪೋಸ್ ಕೊಟ್ಟಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

ಇನ್ನು ಶ್ರೀ ಗಂಗಾಧರೇಶ್ವರ ಸ್ವಾಮಿ ನೆಲೆಸಿರುವ ಪುಣ್ಯ ಕ್ಷೇತ್ರ ಶಿವಗಂಗೆ ಬೆಟ್ಟ ಇದಾಗಿದ್ದು ಪ್ರತೀ ವರ್ಷದ ಮಕರ ಸಂಕ್ರಾಂತಿಯ ದಿವಸ ಈ ತೀರ್ಥ ಕಂಬದಲ್ಲಿ ಉದ್ಭವವಾದ ನೀರಿನಿಂದ ಗಿರಿಜಾ ಕಲ್ಯಾಣವಾಗುತ್ತದೆ ಎಂದು ಹೇಳಲಾಗಿದೆ.

ಇನ್ನು ಈ ಕ್ಷೇತ್ರದಲ್ಲಿ ಪವಾಡ ರೀತಿಯಲ್ಲಿ ಗಂಗೆ ಉದ್ಭವವಾಗುತ್ತದೆ ಎಂದು ಹೇಳಲಾಗಿದ್ದು ತೀರ್ಥೋದ್ಭವವಾಗುವ ಈ ಸ್ಥಳ ಈಗ ಚಂದನ್ ಮತ್ತ್ತು ಕವಿತಾ ಅವರು ಮಡಿದ ಕೆಲಸದಿಂದ ಅಪವಿತ್ರವಾಗಿದೆ ಎಂದು ಹೇಳಲಾಗಿದೆ. ಇನ್ನು ಇಂತಹ ಸ್ಟಳಕ್ಕೆ ಶೂ ಧರಿಸಿ ಹೋಗಿರುವ ಚಂದನ್ ಮತ್ತು ನಟಿ ಕವಿತಾ ಮೇಲೆ ನೆಟ್ಟಿಗರು ಕಿಡಿಕಾರಿದ್ದಾರೆ.