ಬ್ಲಾಕ್ ಬಸ್ಟರ್ ಚಿತ್ರ ನೀಡಿದ್ದ ನಟ ದ್ಯಾನ್ ಎಲ್ಲಿ ಹೋದ್ರು ? ಈಗ ಏನು ಮಾಡುತ್ತಿದ್ದಾರೆ ಗೊತ್ತಾ ?

Cinema
Advertisements

ಸ್ಯಾಂಡಲ್ವುಡ್ ನಲ್ಲಿ ಹೀಗೆ ಬಂದು ಆಗೇ ಹೋಗುವ ಕೆಲುವು ನಟರು ಮಧ್ಯ ಸದಾ ನೆನಪಿನಲ್ಲಿರುವ ಅದ್ಭುತ ಕಲಾವಿದ ನಟ ಎಂದರೆ ಧ್ಯಾನ್. ಮೋಹಕ ತಾರೆ ನಟಿ ರಮ್ಯಾ ಅಭಿನಯಿಸಿದ್ದ ಅಮೃತಧಾರೆ ಚಿತ್ರದಲ್ಲಿ ನಟಿಸಿದ್ದ ಸ್ಪುರಧ್ರುಪಿ ನಟ ಧ್ಯಾನ್ ಹೆಣ್ಣುಮಕ್ಕಳ ಫೇವರಿಟ್ ಹೀರೋ ಆಗಿದ್ದವರು. ಕನ್ನಡ ಸೇರಿದಂತೆ ಹಿಂದಿ ಚಿತ್ರಗಳಲೂ ನಟಿಸಿರುವ ಧ್ಯಾನ್ ಅವರ ನಿಜವಾದ ಹೆಸರು ಸಮೀರ್ ದತ್ತಾನಿ ಎಂದು. ಮೂಲತಃ ಗುಜರಾತ್ ನಲ್ಲಿ ಹುಟ್ಟಿ ಬೆಳೆದಿರುವ ಧ್ಯಾನ್ ಕನ್ನಡದ ಲವ್ ಯೂ ಅಲಿಯಾ, ಯಶ್ ಅಭಿನಯದ ಮಿಸ್ಟರ್ & ಮಿಸ್‌ಸ್ ರಾಮಾಚಾರಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅತಿತಿ ಪಾತ್ರದಲ್ಲೂ ನಟಿಸಿದ್ದಾರೆ. ಆದರೆ ಏಕೋ ಏನೋ 2015ರ ಬಳಿಕ ಯಾವುದೇ ಚಿತ್ರಗಳಲ್ಲಿ ನಟಿಸಲಿಲ್ಲ ಧ್ಯಾನ್. ಹಾಗಾದ್ರೆ ಈಗೇನು ಮಾಡುತ್ತಿದ್ದಾರೆ ಎಲ್ಲಿದ್ದಾರೆ ಗೊತ್ತಾ ?

Advertisements

ಪ್ರತಿಭಾವಂತ ನಟರಾಗಿರುವ ಧ್ಯಾನ್ ರಾಷ್ಟ್ರಮಟ್ಟದ ರೋಲರ್ ಸ್ಕೇಟರ್ ವಿಜೇತರಾಗಿದ್ದಾರೆ. ಇನ್ನು ಇವರ ಕುಟುಂಬವು ಟೆಕ್ಸ್‌ಟೈಲ್ಸ್ ಉದ್ಯಮವನ್ನ ನಡೆಸುತ್ತಿದೆ. ಇನ್ನು ತಮ್ಮ ಹದಿನೇಳನೇ ವಯಸ್ಸಿಗೆ ಕ್ಯಾಮರಾ ಫೇಸ್ ಮಾಡಿದ್ದ ನಟ ಧ್ಯಾನ್ ನಟಿ ರಮ್ಯಾ ಜೊತೆ ನಟಿಸಿದ್ದ ಅಮೃತಧಾರೆ ಚಿತ್ರ ಸ್ಯಾಂಡಲ್ವುಡ್ ನಲ್ಲಿ ಹಿಟ್ ಆಗಿತ್ತು. ಇನ್ನು ಹಿಂದಿ ಚಿತ್ರರಂಗದಲ್ಲುವು ಖ್ಯಾತ ನಂತರ ಜೊತೆ ಸಿನಿಮಾಗಳನ್ನ ಮಾಡಿರುವ ಧ್ಯಾನ್ ನನ್ನ ಪ್ರೀತಿಯ ಹುಡುಗಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟರು.

ತಮ್ಮ ಬಹುಕಾಲದ ಗೆಳತಿಯಾಗಿದ್ದ ರಿತಿಕಾ ಜೊತೆ ಡೆಹ್ರಾ ಡೂನ್ ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಇನ್ನು ಸ್ವತಃ ಉದ್ಯಮಿಯಾಗಿರುವ ನಟ ಧ್ಯಾನ್ ಘೋಡದ ಚೈನೀಸ್‌ ರೆಸ್ಟೋರೆಂಟ್ ನ ಮಾಲೀಕರಾಗಿದ್ದಾರೆ.