ತನ್ನ ಜೀವದ ಹಂಗು ತೊರೆದು ಕಾಲು ಸೇತುವೆಯನ್ನ ಕಟ್ಟಿ 2 ಗ್ರಾಮಗಳ ಸಂಪರ್ಕ ಉಳಿಸಿದ ಭೂಪ !

News

ನಮಸ್ತೇ ಸ್ನೇಹಿತರೆ, ಕರ್ನಾಟಕದ ಹಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದ್ದು ನೆರೆ ಪರಿಸ್ಥಿತಿ ಉಂಟಾಗಿದ್ದು ಜನ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇನ್ನು ಮಲೆನಾಡಿನ ಭಾಗಗಳಲ್ಲಂತೂ ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ನದಿಗಳು ಅ’ಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇನ್ನು ಪ್ರವಾಹ ಉಂಟಾಗಿರುವ ಕಾರಣ ಜನ ತಮ್ಮ ಜೀವ ಉಳಿಸಿಕೊಳ್ಳಲು ಹೋರಾಟಮಾಡುವಂತಾಗಿದೆ. ಈಗ ಇದೆ ರೀತಿ ಇಲ್ಲಿನ ಗ್ರಾಮಸ್ಥರೊಬ್ಬರು ತಮ್ಮ ಜೀ’ವದ ಹಂಗು ತೊರೆದು ಕೊಚ್ಚಿ ಹೋಗುತ್ತಿದ್ದ ಸೇತುವೆಯನ್ನ ಮತ್ತೆ ಕಟ್ಟಿ ನಿಲ್ಲಿಸಿ ಸಾಹಸ ಮಾಡಿ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದಾರೆ.

ಇನ್ನು ಈ ಘಟನೆ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಿಡುಪೆಯಲ್ಲಿ. ಇಲ್ಲಿ ಹರಿಯುವ ನದಿಯ ಮೇಲೆ ಜನ ಓಡಾಡಲು ಅನುಕುಲವಾಗಲೆಂದು ಸ್ವತಃ ಜನರೇ ಸೇತುವೆ ನಿರ್ಮಾಣ ಮಾಡಿದ್ದರು. ಇದು ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯಾಗಿತ್ತು. ಅಡಿಕೆ ಮರಗಳಿಂದ ನಿರ್ಮಿಸಲಾಗಿದ್ದ ಈ ಸೇತುವೆ ನೀರಿನ ರಭಸಕ್ಕೆ ನದಿಯಲ್ಲಿ ಕೊ’ಚ್ಚಿಹೋಗುವ ಭೀತಿ ಏರ್ಪಟ್ಟಿತ್ತು.

ಇನ್ನು ಇದನ್ನ ಗಮನಿಸಿದ ಸ್ಥಳೀಯ ಗ್ರಾಮದ ವ್ಯಕ್ತಿಯೊಬ್ಬರು ತನ್ನ ಜೀ’ವದ ಹಂಗು ತೊರೆದು ರಭಸವಾಗಿ ಹರಿಯುತ್ತಿದ್ದ ನೀರಿಗೆ ಇಳಿದು ಕಾಲು ಸೇತುವೆಯನ್ನ ಗಟ್ಟಿಯಾಗಿ ಕಟ್ಟಿ ಕೊಚ್ಚಿಕೊಂಡು ಹೋಗದಂತೆ ಮಾಡಿದ್ದಾರೆ. ಇನ್ನು ತನ್ನ ಪ್ರಾ’ಣದ ಹಂಗನ್ನೇ ತೊರೆದು ಎರಡು ಗ್ರಾಮಗಳ ನಡುವಿನ ಸಂಪರ್ಕ ಸೇತುವೆಯನ್ನ ಉಳಿಸಿದ ಗ್ರಾಮಸ್ಥನ ಧೈರ್ಯಕ್ಕೆ ಮೆಚ್ಚುಗೆಗಳ ಮಹಾ ಪುರಾವೆ ಹರಿದು ಬಂದಿದೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. 9663034244 Dr.ದುರ್ಗಾ ಪ್ರಸಾದ್ ಗುರೂಜಿ