ಶಾಲೆಯ ಫೀಜ್ ಕಟ್ಟುವ ಸಲುವಾಗಿ ಮೊಬೈಲ್ ಕದ್ದ ವಿದ್ಯಾರ್ಥಿನಿ: ಆದ್ರೆ ಬಾಲಕಿಗೆ ಮಾಲೀಕ ಮಾಡಿದ್ದೇನು ಗೊತ್ತಾ !?

News

ನಮಸ್ತೇ ಸ್ಬೇಹಿತರೇ, ಹಲ್ಲಿದ್ದವನಿಗೆ ಕಡ್ಲೆ ಇಲ್ಲ, ಕಡ್ಲೆ ಇದ್ದವನಿಗೆ ಹಲ್ಲಿಲ್ಲ ಎಂಬ ಗಾದೆ ಮಾತಿದೆ.ಆದರೆ ಎಷ್ಟೋ ವಿದ್ಯಾರ್ಥಿಗಳು ಓದಿನಲ್ಲಿ ಪ್ರತಿಭಾವಂತರಾಗಿದ್ದರೂ ಆರ್ಥಿಕ ಸಮಸ್ಯೆಯ ಕಾರಣದಿಂದಾಗಿ ಓದಲು ಆಗದೆ ಬೇರೆಯದೇ ಕೆಲಸಗಳಿಗೆ ಮುಂದಾಗುತ್ತಾರೆ. ಈಗ ಇದೆ ರೀತಿ ೧೬ ವರ್ಷದ ವಿಧ್ಯಾರ್ಥಿನಿ ಒಬ್ಬಳು ಫೀಜ್ ಕಟ್ಟಲು ಹಣವಿಲ್ಲದೆ ಮೊಬೈಲ್ ಕದ್ದಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಇನ್ನು ಮೊಬೈಲ್ ಕಳೆದುಕೊಂಡಿರುವ ಮಾಲೀಕ ಧೀರಜ್ ಖಾಸಗಿ ಡಿಟೆಕ್ಟಿವ್ ಆಗಿದ್ದು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಿದ್ದಾರೆ. ಹಾಗಾದ್ರೆ ತನ್ನ ಮೊಬೈಲ್ ಕದ್ದ ಆ ಬಾಲಕಿಗೆ ಮಾಲೀಕ ಮಾಡಿದ್ದೇನು ಗೊತ್ತಾ ?

ಮೊಬೈಲ್ ಮಾಲೀಕ ಧೀರಜ್ ಹೇಳುವ ಪ್ರಕಾರ ಆಗಸ್ಟ್ ೨ರಂದು ಅವರ ಬೆಲೆಬಾಳುವ ಮೊಬೈಲ್ ಕಳ್ಳತನವಾಗಿದ್ದು ಇದರ ಕುರಿತು ಪ್ರಕರಣ ಕೂಡ ದಾಖಲು ಮಾಡಿದ್ದಾರೆ. ಆದರೆ ಪೋ’ಲಿಸರಿಂದ ಯಾವುದೇ ಮಾಹಿತಿ ಸಿಗದ ಕರಣ ಸ್ವತಃ ಧೀರಜ್ ಅವರೇ ಮೊಬೈಲ್ ಕದ್ದವರಾರು ಎಂಬುದರ ಬಗ್ಗೆ ಡಿಟೆಕ್ಟಿವ್ ಮಾಡಲು ಶುರು ಮಾಡಿದ್ದಾರೆ. ಇನ್ನು ಮೊಬೈಲ್ ಟ್ರೇಸ್ ಮಡಿದ ಧೀರಜ್ ತನ್ನ ಮೊಬೈಲ್ ಕಳೆದು ಹೋದ ದಿನ ತಾನು ಎಲ್ಲಿದ್ದೆ, ಎಲ್ಲೆಲ್ಲಿ ಹೋಗಿದ್ದೆ, ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಾಗ ತನ್ನ ಮನೆಯಲ್ಲಿಯೇ ಮೊಬೈಲ್ ಕಳ್ಳತನವಾಗಿರುವುದು ಅವರ ಗಮನಕ್ಕೆ ಬಂದಿದೆ.

ಇನ್ನು ಆ ದಿನ ತನ್ನ ಮನೆಗೆ ಯಾರ್ಯಾರು ಬಂದು ಹೋಗಿದ್ದರು ಎಂಬುದರ ಬಗ್ಗೆ ಯೋಚಿಸಿದಾಗ ತಾಯಿ ಮಗಳೊಬ್ಬರ ಮೇಲೆ ಅನುಮಾನ ಬಂದಿದೆ. ಇನ್ನು ಆ ಮಹಿಳೆಯ ಪತಿಗೆ ಅನಾರೋಗ್ಯದ ಕಾರಣ ಮನೆಯಲ್ಲೇ ಹಾಸಿಗೆ ಇಡಿದಿದ್ದು ಆತನ ಚಿಕಿತ್ಸೆಗೆ ಹಣವೆನ್ನಲ್ಲಾ ಖರ್ಚು ಮಾಡಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದು ತಿಳಿದುಬಂದಿದೆ. ಇನ್ನು ಮಹಿಳೆಯ ಮಗಳು ಓದಿನಲ್ಲಿ ತುಂಬಾ ಜಾಣ್ಮೆಯಾಗಿದ್ದು ಚೆನ್ನಾಗಿ ಓದಬೇಕೆಂಬ ಕನಸು ಹೊಂದಿದ್ದಳು. ಇನ್ನು ಇದೆ ಬಾಲಕಿಯೇ ತನ್ನ ಮೊಬೈಲ್ ನ್ನ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇನ್ನು 11ನೇ ಕ್ಲಾಸಿನಲ್ಲಿ ಬಾಲಕಿ ಶೇ 71 ಅಂಕಗಳನ್ನ ಪಡೆದುಕೊಂಡಿದ್ದು 12ನೇ ತರಗತಿ ಓದಲು ಹಣ ಇಲ್ಲದೆ ಆ ಬಾಲಕಿ ಮೊಬೈಲ್ ಕದ್ದಿದ್ದಾಳೆ ಎಂದು ತಿಳಿದುಬಂದಿದೆ. ಮೊಬೈಲ್ ಮಾಲೀಕ ಆ ಬಾಲಕಿಯ ಬಳಿ ಮಾತನಾಡಿದಾಗ ನಡುಗುತ್ತಾ ತಲೆ ಎತ್ತಿ ನೋಡದೆ ಕಣ್ಣೀರು ಸುರಿಸುತ್ತಾ ಮಾತನಾಡುತ್ತಿದ್ದ ಆ ಬಾಲಕಿ ಓದಿನಲ್ಲಿ ಶೇ ೭೧ರಷ್ಟು ಅಂಕಗಳನ್ನ ಪಡೆದಿದ್ದು ಚೆನ್ನಾಗಿ ಓದಬೇಕೆಂಬ ಕನಸು ಹೊಂದಿದ್ದಳು ಎಂದು ಧೀರಜ್ ಗೆ ಗೊತ್ತಾಗಿದೆ.

ಇನ್ನು ಶಾಲೆಯ 2500ರೂಪಾಯಿಗಳ ಫೀಸ್ ಕಟ್ಟುವ ಸಲುವಾಗಿ ತಂದೆ ತಾಯಿಗಳ ಬಳಿ ಹಣ ಇಲ್ಲದ ಕಾರಣ ಮೊಬೈಲ್ ಕದ್ದಿರುವುದಾಗಿ ಆ ಬಾಲಕಿ ಹೇಳಿದ್ದಾಳೆ. ಆದರೆ ಆ ಮೊಬೈಲ್ ಮಾರದ ಆ ಬಾಲಕಿ ಓದು ಬಳಿಕ ವಾಪಸ್ಸು ಕೊಡಲು ಯೋಚಿಸಿದ್ದಳು ಎಂದು ತಿಳಿದುಬಂದಿದೆ. ಇನ್ನು ಇದೆಲ್ಲಾ ಗೊತ್ತಾದ ಬಳಿಕ ಮಾನವೀಯತೆ ಮೆರೆದ ಧೀರಜ್ 2500ರೂ ಗಳನ್ನ ಆ ಬಾಲಕಿಗೆ ಕೊಟ್ಟು ತನ್ನ ಮೊಬೈಲ್ ನ್ನ ಮರಳಿ ಪಡೆದಿದ್ದಲ್ಲದೆ ಆ ಬಾಲಕಿಯ ಉಳಿದ ಸ್ಕೂಲ್ ಫೀಸ್ ನ್ನೂ ಕೂಡ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. 9663034244 Dr.ದುರ್ಗಾ ಪ್ರಸಾದ್ ಗುರೂಜಿ