ಅತೀ ರೋಚಕವಾಗಿದೆ ಗುರು ದ್ರೋಣರ ಜನ್ಮ ರಹಸ್ಯ ! ಇದು ಜಗತ್ತಿನಲ್ಲಿ ಮೊದಲು ?

Adhyatma

ಮಹಾಭಾರತದಲ್ಲಿ ಕುರು ವಂಶದ ಕೌರವ ಪಾಂಡವರ ಗುರುಗಳಾಗಿದ್ದವರು ದ್ರೋಣಾಚಾರ್ಯರು. ಆಗಿನ ಕಾಲಕ್ಕೆ ಇಡೀ ಆರ್ಯಾವರ್ತದಲ್ಲೇ ಇವರಂತಹ ಮಹಾನ್ ಗುರುಗಳು ಮತ್ತೊಬ್ಬರು ಇರಲಿಲ್ಲ ಎಂದು ಹೇಳಲಾಗಿದೆ. ಇನ್ನು ಗುರು ದ್ರೋಣರ ಜನನದ ಬಗ್ಗೆ ಕುತೂಹಲಕಾರಿಯಾದ ಕತೆಯೊಂದಿದೆ. ಭಾರದ್ವಾಜ ರಿಷಿ ಹಾಗೂ ಕೃತರಜಿ ಅವರ ಪುತ್ರನೇ ದ್ರೋಣಾಚಾರ್ಯರು. ಜಗತ್ತಿನ ಮೊದಲ ಟೆಸ್ಟ್ ಟ್ಯೂಬ್ ಬೇಬಿ ಗುರು ದ್ರೋಣರು ಎಂದರೆ ತಪ್ಪಾಗೋದಿಲ್ಲ..ಇದ್ಕಕೆ ಕಾರಣವೂ ಇದೆ. ಒಂದು ದಿನ ಭರದ್ವಾಜ ಋಷಿಯು ಎಂದಿನಂತೆ ಸಂಧ್ಯಾವಂದನೆ ಮಾಡುವ ಸಲುವಾಗಿ ಗಂಗಾ ನದಿಯ ತಟಕ್ಕೆ ಹೋಗುತ್ತಾರೆ. ಆಗ ಅಲ್ಲಿ ಅಪ್ಸರೆಯೊಬ್ಬಳು ನದಿಯಲ್ಲಿ ಸ್ನಾನ ಮಾಡುತ್ತಿದ್ದದನ್ನ ನೋಡಿ ಆಕೆಯ ಸೌಂದರ್ಯಕ್ಕೆ ಮಾರುಹೋಗುತ್ತಾರೆ.

ಇನ್ನು ಅಪ್ಸರೆಯನ್ನ ನೋಡಿ ವಿಚಲಿತರಾಗುವ ಭಾರದ್ವಾಜರು ತಮ್ಮ ವೀ’ರ್ಯವನ್ನ ಹೊರಸೂಸುತ್ತಾರೆ. ಇನ್ನು ಭಾರದ್ವಾಜ ಋಷಿಗಳು ಈ ವೀ’ರ್ಯವನ್ನ ದ್ರೋಣ ಎಂಬ ದೊನ್ನೆಯಲ್ಲಿ ಸಂಗ್ರಹಿಸಿಡುತ್ತಾರೆ. ( ಸಂಸ್ಕೃದಲ್ಲಿ ದ್ರೋಣ ಎಂದರೆ ದೊನ್ನೆ ಎಂದರ್ಥ) ಬಳಿಕ ಅದನ್ನ ಮಡಿಕೆಯಲ್ಲಿ ಇಡುತ್ತಾರೆ. ಇದೆ ಮಡಿಕೆಯಲ್ಲಿ ಗುರು ದ್ರೋಣರು ಹುಟ್ಟಿದರು ಎಂದು ಹೇಳಲಾಗುತ್ತೆ. ಇನ್ನು ತುಂಬಾ ಬಡವರಾಗಿದ್ದ ದ್ರೋಣರು ಆಗ ಯುವರಾಜನಾಗಿದ್ದ ದ್ರುಪದನ ಜೊತೆ ಮಿತೃತ್ವ ಹೊಂದಿರುತ್ತಾರೆ. ಇನ್ನು ಇದೆ ವೇಳೆ ತಾನು ಮುಂದೆ ರಾಜನಾದರೆ ನಿಂಗೆ ಅರ್ಧ ರಾಜ್ಯ ಕೊಡುವೆ ಎಂದು ದ್ರೋಣರಿಗೆ ದ್ರುಪದ ಭಾಷೆ ಕೊಟ್ಟಿರುತ್ತಾನೆ.

ಇನ್ನು ಹಸ್ತಿನಾವತಿಯಲ್ಲಿ ಗುರುಗಳಾಗಿದ್ದ ಕೃಪಾಚಾರ್ಯರ ತಂಗಿ ಕೃಪಿಯ ಜೊತೆ ದ್ರೋಣರ ಮದುವೆಯಾಗುತ್ತೆ. ಇವರಿಗೆ ಜನಿಸುವ ಮಗುವೇ ಚಿರಂಜೀವಿ ಅಶ್ವತ್ಥಾಮ. ದ್ರೋಣರಿಗೆ ಎಷ್ಟು ಬಡತನ ಇತ್ತೆಂದರೆ ತನ್ನ ಮಗನಿಗೆ ಹಾಲಿನ ಬದಲು ಅಕ್ಕಿ ಹಿಟ್ಟನ್ನೇ ನೀರಿನಲ್ಲಿ ಕಲಸಿ ಹಾಲೆಂದು ಕೊಡುತ್ತಿದ್ದರು. ಇನ್ನು ಈ ಕಡುಬಡತನದಿಂದ ಹೇಗಾದರೂ ಪರಾಗಲೇಬೇಕೆಂದು ಯೋಚಿಸಿದ ದ್ರೋಣರಿಗೆ ಮಿತ್ರ ದ್ರುಪದ ಕೊಟ್ಟಿದ್ದ ಮಾತು ನೆನಪಾಗುತ್ತೆ. ಆಗ ದ್ರುಪದ ರಾಜನಾಗಿರುತ್ತಾನೆ. ಆಗ ದ್ರುಪದನ ಮುಂದೆ ಹೋದ ಗುರು ದ್ರೋಣರು ಈ ಹಿಂದೆ ನಿರುವ ವಚನದ ಕುರಿತು ನೆನಪು ಮಾಡುತ್ತಾರೆ. ಆದರೆ ಅಧಿಕಾರದ ಮದದಿಂದ ಅಹಂಕಾರಿಯಾಗಿದ್ದ ದ್ರುಪದ ರಾಜ ಸ್ನೇಹಿತ ಎಂಬುದನ್ನು ಕೂಡ ಮರೆತು ದ್ರೋಣರನನ್ ಅವಮಾನ ಮಾಡುತ್ತಾನೆ. ಆಗ ಕೋಪೋದ್ರಿಕ್ತನಾದ ದ್ರೋಣರು ಮುಂದೊಂದು ದಿನ ನಿನ್ನ ತಲೆ ನನ್ನ ಕಾಲಿನ ಬಳಿ ಬೀಳುವಂತೆ ಮಾಡುತ್ತೇನೆ ಎಂದು ಶಪಥ ಮಾಡುತ್ತಾನೆ.

ಮುಂದೆ ಕೌರವ ಪಾಂಡವರ ಗುರುಗಳಾಗುವ ದ್ರೋಣರು ಮಧ್ಯ ಪಾಂಡವ ಹಾಗೂ ತನ್ನ ಪ್ರಿಯ ಶಿಷ್ಯನೂ ಆಗಿರುವ ಗಾಂಡೀವಿ ಅರ್ಜುನನಿಂದ ತನ್ನ ಶಪಥವನ್ನ ಪೂರೈಸಿಕೊಂಡು ದ್ರುಪದನನ್ನ ಸೆರೆ ಹಿಡಿಯುತ್ತಾನೆ. ಬಳಿಕ ಗುರು ದ್ರೋಣರೇ ಅರ್ಧ ರಾಜ್ಯವನ್ನ ದ್ರುಪದನಿಗೆ ಕೊಟ್ಟು ಉಳಿದ ಅರ್ಧ ರಾಜ್ಯಕ್ಕೆ ತನ್ನ ಮಗನಾದ ಅಶ್ವತ್ಥಾಮನನ್ನ ರಾಜನನ್ನಾಗಿ ಮಾಡುತ್ತಾನೆ. ಸ್ನೇಹಿತರೆ ಗುರು ದ್ರೋಣರ ಜನ್ಮ ವೃತ್ತಾಂತದ ಕತೆಯ ಬಗ್ಗೆ ನಿಮ್ಮದೇನಾದರೂ ಬೇರೆ ಅಭಿಪಾಯಗಳಿದ್ದಲ್ಲಿ ಕಾಮೆಂಟ್ ಮಾಡಿ ತಿಳಿಸಿ..