ಹಿಂದಿ ಬರೋದಿಲ್ಲ ಎಂದಿದ್ದಕ್ಕೆ ನೀವು ಭಾರತೀಯರಾ ಎಂದು ಸಂಸದೆಗೆ ಪ್ರಶ್ನೆ ಮಾಡಿದ ಭದ್ರತಾ ಅಧಿಕಾರಿ !

News
Advertisements

ನಮಸ್ತೇ ಸ್ನೇಹಿತರೆ, ಹಿಂದಿ ಭಾರತದ ರಾಷ್ಟೀಯ ಭಾಷೆಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ..ಇನ್ನು ವಿಮಾನ ನಿಲ್ದಾಣದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಅಧಿಕಾರಿಯೊಬ್ಬರು ಚೆಕಿಂಗ್ ವೇಳೆ ನನಗೆ ಹಿಂದಿ ಮಾತನಾಡಲು ಬರೋದಿಲ್ಲ ಎಂದು ಹೇಳಿದ ಮಹಿಳಾ ಸಂಸದೆಗೆ ‘ನೀವು ಭಾರತೀಯರಾ’ ಎಂದು ಪ್ರಶ್ನೆ ಮಾಡಿದ್ದು ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಇನ್ನು ಈ ಘಟನೆ ನಡೆದಿರುವುದು ತಮಿಳುನಾಡಿನ ಚೆನ್ನೈನ ವಿಮಾನ ನಿಲ್ದಾಣದಲ್ಲಿ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿಯವರ ಪುತ್ರಿ ಹಾಗೂ ಡಿಎಂಕೆ ಪಕ್ಷದ ಸಂಸದೆ ಕೂಡ ಆಗಿರುವ ಕನಿಮೋಳಿ ಅವರಿಗೆ ಹಿಂದಿ ಮಾತನಾಡಲು ಬಾರದೆ ಇರದಿದ್ದಕ್ಕೆ ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ (CISF) ಪಡೆಯಿಂದ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿದ್ದ ಅಧಿಕಾರಿಯೊಬ್ಬರು ನೀವು ಭಾರತೀಯರೇ ಎಂದು ಪ್ರಶ್ನೆ ಮಾಡಿದ್ದಾರೆ. ಸಂಸದೆ ಕನಿಮೋಳಿ ಅವರು ದೆಹಲಿಗೆ ತೆರಳುವ ಸಲುವಾಗಿ ಚೆನ್ನೈನ ವಿಮಾನ ನಿಲ್ದಾಣಕ್ಕೆ ಬಂದಾಗ ವಿಮಾನ ನಿಲ್ದಾಣದ ಭದ್ರತೆಗೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಆಗ ಕನಿಮೋಳಿ ನನಗೆ ಹಿಂದಿ ಬರೋದಿಲ್ಲ..ತಮಿಳು ಅಥ್ವಾ ಇಂಗ್ಲಿಷ್ ನಲ್ಲಿ ಮಾತನಾಡುವಂತೆ ಕೇಳಿದ್ದಾರೆ.

Advertisements

ಇದೆ ವೇಳೆ ಅಧಿಕಾರಿ ನೀವು ಭಾರತೀಯರಾ ಎಂಬ ಪ್ರಶ್ನೆ ಮಾಡಿದ್ದು, ಇದರಿಂದ ಆಕ್ರೋಶಗೊಂಡ ಕನಿಮೋಳಿ ಇದು ಹಿಂದಿ ಹೇರಿಕೆ ಎಂದು ಟ್ವೀಟ್ ಮಾಡಿದ್ದಾರೆ.ಇನ್ನು ಇದೆ ವೇಳೆ ಆ ಅಧಿಕಾರಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ CISF ಅಧಿಕಾರಿಗಳು ಹೇಳಿದ್ದಾರೆ. ಸ್ನೇಹಿತರೆ ಹಿಂದಿ ಬಾರದೇ ಇರುವುದು ಸಂಸದೆ ಕನಿಮೊಳಿ ಅವರ ತಪ್ಪಾ? ಹಿಂದಿ ಬಾರದೆ ಇದ್ದಿದ್ದಕ್ಕೆ ನೀವು ಭಾರತೀಯರಾ ಎಂದು ಪ್ರಶ್ನೆ ಮಾಡಿದ ಅಧಿಕಾರಿಯ ತಪ್ಪಾ? ನೀವೇ ಹೇಳಿ.. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr.ದುರ್ಗಾ ಪ್ರಸಾದ್ ಗುರೂಜಿ 9663034244