ನಮಸ್ತೇ ಸ್ನೇಹಿತರೆ, ಇಂದು ಹತ್ತನೇ ತರಗತಿಯ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ನೆಮ್ಮದಿಯ ಉಸಿರು ಬಿಡುವಂತಾಗಿದೆ. ಇನ್ನು ಎಂದಿನಂತೆ SSLC ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನ ಪಡೆದ ಉತ್ತಮ ರ್ಯಾಂಕ್ ಗಳಿಸಿಕೊಂಡಿರುವ ವಿದ್ಯಾರ್ಥಿಗಳ ಬಗೆಗಿನ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ..ಹೌದು, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ MKET ಶಾಲೆಯ ಅಭಿಷೇಕ್ ಎನ್ನುವ ವಿದ್ಯಾರ್ಥಿ ಕನ್ನಡ ಮಾಧ್ಯಮದಲ್ಲಿ ಇಡೀ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.
ವೃತ್ತಿಯಲ್ಲಿ ಆಟೋಚಾಲನೆ ಮಾಡಿ ಜೀವನ ನಡೆಸುತ್ತಿರುವ ಗುತ್ತೂರು ಗ್ರಾಮದ ಮಂಜುನಾಥ್ ಎಂಬುವವರ ಮಗನಾದ ಅಭಿಷೇಕ್ ಬಡತನದಲ್ಲಿ ಬೆಳೆದರೂ ಕಷ್ಟಪಟ್ಟು ಓದಿ ಕನ್ನಡ ಮಾಧ್ಯಮದಲ್ಲಿ 625ಕ್ಕೆ 623 ಅಂಕಗಳನ್ನ ಪಡೆಯುವುದರ ಮೂಲಕ ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಪಡೆದುಕೊಂಡಿದ್ದಾನೆ.ಇನ್ನು ಇವರ ತಾಯಿ ಕೂಡ ಕೂಲಿ ಮಾಡಿ ಸಂಸಾರ ನಡೆಸುತ್ತಿದ್ದಾರೆ. ಇನ್ನು ಓದಿನಲ್ಲಿ ಪ್ರತಿಭಾವಂತನಾಗಿದ್ದ ಅಭಿಷೇಕ್ ಆರು ಕಿಮೀ ಅಂತರ ಇದ್ದ ಶಾಲೆಗೆ ಸೈಕಲ್ ನಲ್ಲೆ ಹೋಗುತ್ತಾ ವಿದ್ಯಾಭ್ಯಾಸ ಮಾಡಿದ್ದಾನೆ. ಇನ್ನು ಇವರ ಬಡತನವನ್ನ ನೋಡಿದ್ದ ಅಭಿಷೇಕ್ ಅವರ ಊರಿನ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದ ಗೀತಾ ಎನ್ನುವವರು ಅಭಿಷೇಕ್ ಅವರನಂ ಎಂಕೆಇಟಿ ಪ್ರೌಢಶಾಲೆಗೆ ಸೇರಿಸಿ ಶಾಲೆಯ ಖರ್ಚನ್ನೆಲ್ಲಾ ಅವರೇ ಭರಿಸಿದ್ದರು.

ಇನ್ನು ಅಂಕಗಳ ಬಗ್ಗೆ ಹೇಳುವುದಾದರೆ 625ಕ್ಕೆ 623 ತೆಗೆದಿರುವ ಅಭಿಷೇಕ್ ಕನ್ನಡ 125, ಇಂಗ್ಲಿಷ್ 100, ವಿಜ್ಞಾನ 100, ಗಣಿತ 100, ಹಿಂದಿ 100 ಹಾಗೂ ಸಮಾಜ ವಿಜ್ಞಾನದ ವಿಷಯದಲ್ಲಿ 98 ಮಾರ್ಕ್ಸ್ ನ್ನ ಪಡೆದುಕೊಂಡು ಸಾಧನೆ ಮಾಡಿದ್ದಾರೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr.ದುರ್ಗಾ ಪ್ರಸಾದ್ ಗುರೂಜಿ 9663034244