1 ಅಂಕಕ್ಕಾಗಿ ಮರು ಮೌಲ್ಯಮಾಪನ ಮಾಡಿಸುವೆ ಎಂದ ವಿದ್ಯಾರ್ಥಿನಿ ! ಹಾಗಾದ್ರೆ ಸುರಭಿ ಪಡೆದ ಒಟ್ಟು ಅಂಕಗಳೆಷ್ಟು ಗೊತ್ತಾ ?

Inspire
Advertisements

ನಮಸ್ತೇ ಸ್ನೇಹಿತರೇ, ಪ್ರಸಕ್ತ ವರ್ಷದ ಹತ್ತನೇ ತರಗತಿಯ ಪರೀಕ್ಷೆ ನಡೆಯುತ್ತದೆ ಎಂಬುದೇ ಅನುಮಾನವಾಗಿತ್ತು. ಇದರ ನಡುವೆಯೇ ಸರ್ಕಾರದ ಮುನ್ನೆಚ್ಚರಿಕೆಯ ಕ್ರಮಗಳ ನಡುವೆ ಸುಸೂತ್ರವಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆದಿದ್ದು ಈಗ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಯಾವ ಜಿಲ್ಲೆಯ ವಿದ್ಯಾರ್ಥಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ, ಪಡೆದ ಅಂಕಗಳೆಷ್ಟು ಎಂಬುದರ ಬಗ್ಗೆ ಸುದ್ದಿಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆಗಳ ಮಹಾಪೂರವೇ ಹರಿದು ಬರುತ್ತಿದೆ. ಸ್ನೇಹಿತರೆ, ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರದ ಸಾಂದೀಪನಿ ಶಾಲೆಯ ವಿದ್ಯಾರ್ಥಿನಿ 625 ಕ್ಕೆ 624 ಅಂಕಗಳನ್ನ ಪಡೆದಿದ್ದು ಒಂದು ಮಾರ್ಕ್ಸ್ ಗಾಗಿ ಮರುಮೌಲ್ಯ ಮಾಪನ ಅರ್ಜಿ ಹಾಕುವೆ ಎಂದಿದ್ದಾರೆ.

ಹೌದು, ಆಂಗ್ಲಮಾಧ್ಯಮದಲ್ಲಿ ಓದುತ್ತಿರುವ ಸುರಭಿ ಶೆಟ್ಟಿ ಒಂದು ಅಂಕ ಬರಲಿಲ್ಲವೆಂದು ಮರುಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿನಿ. ನನಗೆ 625 ಕ್ಕೆ 625 ಅಂಕಗಳು ಬರುವ ನಂಬಿಕೆ ಇತ್ತು. ಆದರೆ 624 ಅಂಕಗಳು ಬರುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಸಮಾಜ ವಿಜ್ಞಾನ ವಿಷಯದಲ್ಲಿ ಒಂದು ಅಂಕ ಕಳೆದುಕೊಂಡಿರುವ ನನಗೆ ಪೂರ್ತಿ ಅಂಕಗಳು ಬರುವ ನಂಬಿಕೆ ಇದೆ ಹಾಗಾಗಿ ಮರು ಮರುಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸುತ್ತೇನೆ ಎಂದಿದ್ದಾರೆ ರಾಜ್ಯಕ್ಕೆ ಎರಡನೆಯ ಸ್ಥಾನ ಗಳಿಸಿಕೊಂಡಿರುವ ಸುರಭಿ.

Advertisements

ಈ ನನ್ನ ಸಾಧನೆಗೆ ಪೋಷಕರು ಮುಖ್ಯ ಕಾರಣಕರ್ತರಾಗಿದ್ದಾರೆ. ನನ್ನ ಶಿಕ್ಷರಿಗೆ ನನ್ನ ಮೇಲೆ ನಿರೀಕ್ಷೆ ಇತ್ತು. ಆದರೆ ನನಗೆ ಇರಲಿಲ್ಲ. ನನ್ನ ಈ ಸಾಧನೆಗೆ ಕಾರಣರಾದ ನನ್ನ ಎಲ್ಲಾ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವೆ ಎಂದು ವಿದ್ಯಾರ್ಥಿನಿ ಸುರಭಿ ಶೆಟ್ಟಿ ಹೇಳಿದ್ದಾರೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr.ದುರ್ಗಾ ಪ್ರಸಾದ್ ಗುರೂಜಿ 9663034244