ಪಡ್ಡೆ ಹುಡುಗರ ಫೇವರಿಟ್ ಆಗಿದ್ದ ನಟಿ ಸಿಲ್ಕ್ ಸ್ಮಿತಾ ಅವರ ಲೈಫ್ ಸ್ಟೈಲ್ ಹೇಗಿತ್ತು ಗೊತ್ತಾ !

Cinema

ನಮಸ್ತೆ ಸ್ನೇಹಿತರೆ, ಸಿನಿಮಾ ರಂಗದಲ್ಲಿ ಹಲವು ನಟ ನಟಿಯರು ಬಂದು ಹೋಗುತ್ತಿರುತ್ತಾರೆ. ಆದರೆ ಸಿನಿಮಾದಲ್ಲಿದ್ದು ಹೇಳರು ಹಣ ಎಲ್ಲಾ ಮಾಡಿದ್ದರೂ ಅವರ ವೈಯುಕ್ತಿಕ ಜೀವನ ಮಾತ್ರ ದು’ರಂ’ತಮಯವಾಗಿರುತ್ತೆ. ಅದರಲ್ಲಿ ಒಬ್ಬರು ಸಿಲ್ಕ್ ಸ್ಮಿತಾ. ದಕ್ಷಿಣ ಭಾರತ ಸಿನಿಮಾ ರಂಗದ ಖ್ಯಾತ ನಟಿಯಾಗಿದ್ದವರು. ಕನ್ನಡ, ತೆಲುಗು, ತೆಲುಗು, ಮಲಯಾಳಂ ಸೇರಿದಂತೆ ಹಿಂದಿ ಚಿತ್ರರಂಗದಲ್ಲೂ ತಮ್ಮ ಅಭಿನಯ ತೋರಿದ್ದಾರೆ. ಆಗಿನ ಕಾಲಕ್ಕೆ ಸಿಲ್ಕ್ ಸ್ಮಿತಾ ಎಂದರೆ ಪಡ್ಡೆ ಹುಡುಗರು ನಿದ್ದೆ ಕೆಡುವಂತೆ ಮಾಡಿದ್ದ ನಟಿ ಇವರು. ದು’ರಂ’ತ ಎಂದರೆ ಈ ನಟಿಯ ಸಾ’ವಿನ ವಿಷಯ ಮಾತ್ರ ಇಲ್ಲಿವರೆಗೂ ನಿಗೂಢವಾಗಿಯೇ ಉಳಿದಿದೆ ಎಂಬುದು ಹೇಳಲಾಗಿದೆ.

ಸ್ನೇಹಿತರೆ, 1960ರ ಡಿಸೆಂಬರ್ ಎರಡರಂದು ಆಂಧ್ರಪ್ರದೇಶ ಎಲೂರು ಎಂಬ ಗ್ರಾಮದ ಬಡ ಕುಟುಂಬವೊಂದರಲ್ಲಿ ಜನಿಸಿದ್ರು. ಸಿಲ್ಕ್ ಸ್ಮಿತಾರವರ ಮೊದಲ ನಿಜವಾದ ಹೆಸರು ವಿಜಯಲಕ್ಷ್ಮಿ. ಇನ್ನು 4ನೇ ತರಗತಿಗೆ ತನ್ನ ವಿಧ್ಯಾಭ್ಯಾಸವನ್ನ ಮೊಟಕುಗಳಿಸಿದ ವಿಜಯಲಕ್ಷ್ಮಿ ನಟಿಯಾಗಬೇಕೆಂಬ ಆಸೆಯಿಂದ ಮದ್ರಾಸ್ ಗೆ ತನ್ನ ಚಿಕ್ಕಮ್ಮನ ಜೊತೆ ಹೋದ್ರು. ಇನ್ನು 1979ರಲ್ಲಿ ತಮಿಳು ಚಿತ್ರವೊಂದರ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ವಿಜಯಲಕ್ಷ್ಮಿ ಸಿಲ್ಕ್ ಸ್ಮಿತಾ ಎಂಬ ಹೆಸರನ್ನ ಪಡೆದಳು. ಇನ್ನು ದಕ್ಷಿಣ ಭಾರತದ ಭಾಷೆಗಳು ಹಾಗೂ ಹಿಂದಿ ಸೇರಿ ೪೫೦ಕ್ಕೂ ಹೆಚ್ಚು ಚಿತ್ರಗಲ್ಲಿ ನಟಿಸಿದ್ದಾರೆ. ಇನ್ನು ಆಗಿನ ಕಾಲಕ್ಕೆ ಐಟಂ ಡ್ಯಾನ್ಸ್ ಹಾಡುಗಲ್ಲಿ ಹೆಚ್ಚಾಗಿ ಕುಣಿದ ನಟಿ ಇವರು.

ಇನ್ನು ತನ್ನ ಹದಿನೇಳನೇ ವಯಸ್ಸಿಗೆ ಎತ್ತಿನ ಬಂಡಿ ಚಾಲಕನ್ನ ಮದುವೆಯಾದ ನಟಿ ಸಿಲ್ಕ್ ಸ್ಮಿತಾ ಸಾಂಸಾರಿಕ ಕಾರಣಗಳಿಂದಾಗಿ ಗಂಡನ್ನ ಬಿತ್ತು ಓಡಿಹೋದಳು ಎಂದು ಹೇಳಲಾಗಿದೆ. ಇನ್ನು ಕೇವಲ ೪ನೇ ತರಗತಿ ಓದಿದ್ದರೂ ಇಂಗ್ಲಿಷ್ ಭಾಷೆಯನ್ನ ಬಹಳ ಚೆನ್ನಾಗಿ ಮಾತನಾಡುತ್ತಿದ್ದಳು. ನೇರ ನುಡಿಗೆ ಹೆಸರಾಗಿದ್ದ ಸಿಲ್ಕ್ ಸ್ಮಿತಾ ಅಷ್ಟಾಗಿ ಯಾರ ಜೊತೆಯೂ ಸ್ನೇಹ ಮಾಡದ್ದಿದ್ದರೂ ಮಗುವಿನನಂತಹ ವ್ಯಕ್ತಿತ್ವ ಹೊಂದಿದ್ದರು ಎಂದು ಹೇಳಲಾಗಿದೆ. ಇನ್ನು ಸಿನಿಮಾ ರಂಗಕ್ಕೆ ಪ್ರವೇಶ ಮಾಡುವ ಮುಂಚೆಯೇ ಮೇಕಪ್ ನಲ್ಲಿ ಪರಿಣಿತಿ ಹೊಂದಿದ್ದ ಸಿಲ್ಕ್ ಸ್ಮಿತಾ ಅದನ್ನೇ ಬ್ಯುಸಿನೆಸ್ ಆಗಿ ಮಾಡಿಕೊಂಡ್ಡಿದ್ದರು ಅನ್ನುವ ಮಾತು ಕೂಡ ಇದೆ.

ದು’ರಂತ ಎಂದರೆ 1996 ರ ಸೆಪ್ಟೆಂಬರ್ ೨೩ರಂದು ಚೆನ್ನೈನ ಅಪಾರ್ಟ್ ಮೆಂಟ್ ವೊಂದರಲ್ಲಿ ಶ’ವವಾಗಿ ದೊರೆತ ಸಿಲ್ಕ್ ಸ್ಮಿತಾರವರು ಆ’ತ್ಮಹ’ತ್ಯೆ ಮಾಡಿಕೊಂಡರೆಂದು ಹೇಳಲಾಗಿದೆ. ಸಾ’ವಿನ ಕಾರಣ ಮಾತ್ರ ಇಲ್ಲಿಯವರೆಗೂ ರ’ಹಸ್ಯವಾಗಿಯೇ ಉಳಿದುಕೊಂಡಿದೆ. ಚಿತ್ರರಂಗದಲ್ಲಿ ನಿರ್ಮಾಪಕಿಯಾಗಬೇಕೆಂದು ಪ್ರಯತ್ನಿಸಿದ್ದ ಸಿಲ್ಕ ಸ್ಮಿತಾರವರಿಗೆ ಹಣಕಾಸಿನ ತೊಂದರೆ ಹಾಗೂ ಇನ್ನು ಕೆಲವು ವೈಯುಕ್ತಿಕ ಕಾರಣಗಳಿಂದಾಗಿ ಖಿ’ನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.