ಸರ್ಪ ಗರುಡಗಳು ಹುಟ್ಟಿದ್ದು ಹೇಗೆ ?ತಾಯಿಯೇ ಸರ್ಪಗಳಿಗೆ ಶಾಪ ಕೊಟ್ಟಿದ್ದೇಕೆ ! ಬಹಳ ರೋಚಕವಾಗಿದೆ ಈ ಸ್ಟೋರಿ

Adhyatma

ನಮಸ್ತೇ ಸ್ನೇಹಿತರೆ, ಪಿತಾಮಹನಾದ ಪ್ರಜಾಪತಿಗೆ ಬ್ರಹ್ಮ, ದಕ್ಷ ಅಂತಲೂ ಕರೆಯುತ್ತಾರೆ. ಇನ್ನು ಈ ಪ್ರಜಾಪತಿ ದಕ್ಷನಿಗೆ ಅದಿತಿ, ದಿತಿ, ದನು, ವಿನತೆ, ಕದ್ರು, ಸೇರಿದಂತೆ ಅನೇಕ ಹೆಣ್ಣುಮಕ್ಕಳಿದ್ದರು. ದಕ್ಷನು ವಿನತೆ ಕದ್ರು ಸೇರಿದಂತೆ ತನ್ನ ಕೆಲ ಹೆಣ್ಣುಮಕ್ಕಳನ್ನ ಕಶ್ಯಪರೆಂಬ ತಪಸ್ವಿಗೆ ಮದುವೆ ಮಾಡಿಕೊಡುತ್ತಾನೆ. ಕಾಲಕ್ರಮೇಣ ಕದ್ರುವಿಗೆ ಮಕ್ಕಳಾಗಿ ಅನೇಕ ಸರ್ಪಗಳು ಹುಟ್ಟುತ್ತವೆ. ಭಗವಾನ್ ನಾರಾಯಣನ ಶಯನವಾದ ಆದಿಶೇಷನೇ ಸರ್ಪಗಳೆಲ್ಲಾ ದೊಡ್ಡವನು. ಈ ಭೂಮಿಯನ್ನ ಹೊತ್ತವನು. ಇನ್ನು ವಿನತೆಗೆ ಗರುಡ ಮತ್ತು ಅರುಣ ಎಂಬ ಇಬ್ಬರು ಮಕ್ಕಳಾಗುತ್ತಾರೆ. ಇನ್ನು ವಿನತೆಯ ಮಗನಾದ ಗರುಡನಿಗೆ ವೈನತೇಯ ಎಂತಲೂ ಕರೆಯುತ್ತಾರೆ. ಇನ್ನು ಅರುಣನು ಸೂರ್ಯದೇವನ ಸಾರಥಿಯಾದರೆ ಗರುಡನು ತುಂಬಾ ಶಕ್ತಿಶಾಲಿಯಾಗಿ ಬೆಳೆಯುತ್ತಾನೆ. ಕಾಲಕ್ರಮಾಂತರದಲ್ಲಿ ಅಮೃತವನ್ನ ಪಡೆಯಲು ದೇವತೆಗಳು ರಾಕ್ಷಸರು ಮಂದಾರ ಪರ್ವತವನ್ನ ಕಡಗೋಲನ್ನಾಗಿ ಮಾಡಿಕೊಂಡು ನಾಗ ವಾಸುಕಿಯನ್ನ ಹಗ್ಗವನ್ನಾಗಿ ಮಾಡಿಕೊಂಡು ಸಾಗರ ಮಂಥನ ಮಾಡಲು ಪ್ರಾರಂಭ ಮಾಡುತ್ತಾರೆ.

ಇನ್ನು ಅಮೃತಕ್ಕೂ ಮೊದಲು ಉಚ್ಚೈಶ್ರವ ಎಂಬ ಕುದುರೆ ಸೇರಿದಂತೆ ಹಲವಾರು ವಸ್ತುಗಳು ಉದ್ಭವಾಗುತ್ತವೆ. ಇನ್ನು ಉಚ್ಚೈಶ್ರವ ಕುದುರೆ ನೋಡಲು ತುಂಬಾ ಅತ್ಯಾಕರ್ಷಕವಾಗಿದ್ದು ಹಾಲಿನ ಕೆನೆಯಂತೆ ಬೆಳ್ಳೆಗೆ ಒಳೆಯುತಿತ್ತು. ಇನ್ನು ಈ ಅಪರೂಪದ ಕುದುರೆಯನ್ನ ನೋಡುವ ಆಸೆ ಉಂಟಾಗಿ ಅದು ಹೇಗಿರಬಹುದೆಂಬ ಬಗ್ಗೆ ಅವರಿಬ್ಬರಲ್ಲೂ ಚರ್ಚೆ ನಡೆಯಿತು. ವಿನತೆಯು ಕುದುರೆ ಸಂಪೂರ್ಣವಾಗಿ ಬೆಳ್ಳಗೆ ಇದ್ದು ಒಂದೇ ಒಂದು ಕಪ್ಪು ಚುಕ್ಕೆ ಕೂಡ ಇಲ್ಲ ಎಂದರೆ..ಕದ್ರುವು ಕಪ್ಪಗೆ ಇಲ್ಲದಿರಲು ಹೇಗೆ ಸಾಧ್ಯ..ಬಾಲವಾದರೂ ಕಪ್ಪಗೆ ಇರಬೇಕಲ್ಲವೇ..ಎಂದಳು. ಆದ್ರೆ ವಿನತೆ ಕುದುರೆ ಸಂಪೂರ್ಣವಾಗಿ ಬೆಳ್ಳಗೆ ಇದೆ ಎನ್ನುತ್ತಾಳೆ. ಹೀಗೆ ಅವರಿಬ್ಬರ ನಡುವೆ ವಾದ ಏರ್ಪಟ್ಟು ಕದ್ರು ಪಂದ್ಯ ಕಟ್ಟೋಣ ಎನ್ನುತ್ತಾಳೆ. ಇನ್ನು ಕದ್ರುವು ಒಂದು ವೇಳೆ ಕುದುರೆ ಪೂರ್ತಿಯಾಗಿ ಬೆಳ್ಳಗಿದ್ದರೆ ನಾನು ಜೀವನ ಪೂರ್ತಿ ನಿನ್ನ ಸೇವಕಿಯಾಗುವೆ, ಒಂದು ವೇಳೆ ಕುದುರೆಯ ಬಾಲ ಕಪ್ಪಾಗಿದ್ದರೆ ನೀನು ನನ್ನ ಸೇವಕಿಯಾಗಿರಬೇಕು ಎಂದು ಕದ್ರು ವಿನತೆಯ ಬಳಿ ಪಂದ್ಯ ಕಟ್ಟಿ ಕುದುರೆಯನ್ನ ನೋಡಿ ಬರಲು ಇಬ್ಬರೂ ನಿರ್ಧಾರ ಮಾಡುತ್ತಾರೆ.

ಆದರೆ ಕದ್ರುವಿಗೆ ತನ್ನ ಮಾತಿನ ಮೇಲೆಯೇ ನಂಬಿಕೆ ಇರೋದಿಲ್ಲ. ಎಲ್ಲರೂ ಕುದುರೆಯ ಪೂರ್ತಿ ಬೆಳ್ಳಗೆ ಇದೆ ಎಂದು ಹೇಳುತ್ತಿದ್ದು ಕುದುರೆಯ ಬಾಲ ಕಪ್ಪಾಗಿದೆ ಎಂಬುದರ ಬಗ್ಗೆ ಸ್ವತಃ ಕದ್ರುವಿಗೂ ಕೂಡ ನಂಬಿಕೆ ಇರಲಿಲ್ಲ. ಆದರೆ ಪಂದ್ಯ ಕಟ್ಟಿಯಾಗಿದೆ. ಹಾಗಾಗಿ ಹೇಗಾದರೂ ಪಂದ್ಯದಲ್ಲಿ ಗೆಲ್ಲಲೇಬೇಕೆಂದು ಕದ್ರು ತನ್ನ ಮಕ್ಕಳಾದ ಆದಿಶೇಷ, ವಾಸುಕಿ, ತಕ್ಷಕ ಸೇರಿದಂತೆ ತನ್ನ ಎಲ್ಲಾ ಸರ್ಪಗಳನ್ನ ಕರೆದರು. ವಿನತೆ ಹಾಗೂ ತನ್ನ ನಡುವೆ ನಡೆದ ಸಂಭಾಷಣೆ ಹಾಗೂ ಪಂದ್ಯದ ಬಗ್ಗೆ ಹೇಳಿ ನೀವೆಲ್ಲಾ ಹೋಗಿ ಕುದುರೆಯ ಬಾಲವನ್ನ ನಿಮ್ಮ ದೇಹದಿಂದ ಮುಚ್ಚಿನಿದಿ..ಆಗ ಕುದುರೆಯ ಬಾಲ ಕಪ್ಪಗೆ ಕಂಡು ನಾನೇ ಪಂದ್ಯದಲ್ಲಿ ಜಯಶಾಲಿಯಾಗುತ್ತೇನೆ ಎಂದು ಹೇಳುತ್ತಾಳೆ.

ಆದರೆ ಎದು ಮೋಸವಲ್ಲವೇ ಎಂದು ಸರ್ಪಗಳು ತಾಯಿಗೆ ಹೇಳಿದಾಗ ಇದರಿಂದ ಕೋಪಗೊಂಡ ಕದ್ರು ನನ್ನ ಮಾತನ್ನ ಮೀರಿ ನಡೆಯುವವರು ಅಗ್ನಿಕುಂಡದಲ್ಲಿ ಬಿದ್ದು ಸಾ’ಯುವಂತಾಗಲಿ ಎಂಬ ಶಾಪವನ್ನ ಕೊಟ್ಟುಬಿಡುತ್ತಾಳೆ. ಆಗ ಭಯಗೊಂಡ ಸರ್ಪಗಳು ಕುದುರೆ ಉಚ್ಚೈಶ್ರವಸ್ಸಿನ ಬಾಲವನ್ನ ತಮ್ಮ ದೇಹದಿಂದ ಮುಚ್ಚುವುದಾಗಿ ಹೇಳಿ ಅದರಂತೆ ಮಾಡುತ್ತಾರೆ. ಇನ್ನು ಕದ್ರು ಮತ್ತು ವಿನತೆ ಬಂದು ಕುದುರೆಯನ್ನ ನೋಡಿದಾಗ ಕುದುರೆಯ ಬಾಲ ಕಪ್ಪಗೆ ಕಾಣುತ್ತದೆ. ಮೋಸವನ್ನರಿಯದೆ ಸೋಲನ್ನೊಪ್ಪಿಕೊಂಡ ವಿನತೆ ಕದ್ರುವಿನ ಸೇವಕಿಯಾಗುತ್ತಾಳೆ. ಇನ್ನು ವಿನತೆ ಕದ್ರುವಿನ ಸೇವಕಿಯಾದ ಕಾರಣ ಗರುಡ ಸಹ ಸರ್ಪಗಳ ಸೇವಕನಾಗಿ ಕೆಲಸ ಮಾಡಬೇಕಾಗುತ್ತದೆ. ಗರುಡನನ್ನ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತೆ. ಇದರಿಂದ ರೋಸಿಹೋದ ಗರುಡನ ಮನಸ್ಸಿಗೆ ತುಂಬಾ ನೋವಾಗುತ್ತದೆ. ಆಗ ಹೇಗಾದರೂ ಮಾಡಿ ತನ್ನ ತಾಯಿಯ ದಾಸ್ಯವನ್ನ ಹೋಗಲಾಡಿಸಬೇಕೆಂದು ಯೋಚನೆ ಮಾಡಿ ಗರುಡ ಸರ್ಪಗಳ ಬಳಿಗೆ ಹೋಗುತ್ತಾನೆ.

ನನ್ನ ತಾಯಿಯ ದಾಸ್ಯವನ್ನ ಮುಕ್ತ ಮಾಡಲು ನಾನು ಏನು ಮಾಡಬೇಕು ಎಂದು ಕೇಳುತ್ತಾನೆ. ಇನ್ನು ಇದೆ ವೇಳೆ ತಮ್ಮ ತಾಯಿಯಿಂದ ತಮಗೆ ಬಂದ ಶಾಪವನ್ನ ನೆನೆದ ಸರ್ಪಗಳು ದೇವಲೋಕದಿಂದ ಅಮೃತ ತಂದುಕೊಟ್ಟಲ್ಲಿ ನಿನ್ನ ತಾಯಿ ದಾಸ್ಯದಿಂದ ಮುಕ್ತಹೊಂದುವಳು ಎಂದು ಸರ್ಪಗಳು ಹೇಳುತ್ತವೆ. ಕೂಡಲೇ ತನ್ನ ವಿಶಾಲವಾದ ತಾನಂ ರೆಕ್ಕೆಗಳನ್ನ ಬಡಿಯುತ್ತಾ ಆಕಾಶಕ್ಕೆ ಚಿಮ್ಮಿದ ಗರುಡ ದೇವಲೋಕದ ಕಡೆ ಹಾರುತ್ತಾನೆ. ಇನ್ನು ಅಮೃತಕ್ಕಾಗಿ ಗರುಡ ಬರುತ್ತಿರುವನೆಂಬ ವಿಷಯ ತಿಳಿದ ದೇವೇಂದ್ರ ತನ್ನ ಸೈನ್ಯ ಸಮೇತ ಗರುಡನ ಮೇಲೆ ಬೀಳುತ್ತಾನೆ. ಇನ್ನು ಒಂದೇ ಕ್ಷಣದಲ್ಲಿ ದೇವತೆಗಳ ಸೈನ್ಯದ ದಾ’ಳಿಯನ್ನ ಎದುರಿಸಿ ಅಮೃತ ಕಳಶವನ್ನ ತೆಗೆದುಕೊಂಡು ಹೋಗಿ ಸರ್ಪಗಳ ಮುಂದಿಡುತ್ತಾನೆ. ಆಗ ಸರ್ಪಗಳು ತಾವು ಕೊಟ್ಟ ಮಾತಿನಂತೆ ಗರುಡನ ತಾಯಿ ವಿನತೆಯನ್ನ ತಮ್ಮ ದಾಸ್ಯದಿಂದ ಮುಕ್ತ ಮಾಡುತ್ತವೆ.

ಇನ್ನು ಗರುಡನು ಅಮೃತ ಕಳಶವನ್ನ ತರುವ ಸಂಧರ್ಭದಲ್ಲಿ ದೇವತೆಗಳನ್ನ ಎದುರಿಸಿದ ರೀತಿ ಹಾಗೂ ವಾಯುವೇಗವನ್ನ ಕಂಡ ಸಾಕ್ಷಾತ್ ನಾರಾಯಣನಿಗೆ ತುಂಬಾ ಸಂತಸವಾಗುತ್ತದೆ. ಗರುಡನ ಬಳಿ ತನ್ನ ವಾಹವಾಗು ಎಂದು ಕೇಳುತ್ತಾನೆ. ಇನ್ನು ಭಗವಂತನ ವಾಹನವಾಗುವುದೆಂದರೆ ಸುಮ್ಮನೇನಾ,..ಗರುಡಾ ತುಂಬಾ ಸಂತೋಷದಿಂದ ಒಪ್ಪಿಕೊಳ್ಳುತ್ತಾನೆ. ಹೀಗೆ ಗರುಡ ವೈಕುಂಠಪತಿಯ ವಾಹನವಾಗುತ್ತಾನೆ.