ರಸ್ತೆ ಪಕ್ಕದಲ್ಲಿರುವ ಮೈಲಿಗಲ್ಲುಗಳು ಬೇರೆ ಬೇರೆ ಬಣ್ಣದಲ್ಲಿರುವುದೇಕೆ ಗೊತ್ತಾ ?

Kannada News
Advertisements

ನಮಸ್ತೇ ಸ್ನೇಹಿತರೆ, ನಾವು ಪ್ರತೀ ದಿನ ನೋಡುವ, ನಮ್ಮ ಅಕ್ಕ ಪಕ್ಕದಲ್ಲಿರುವ ಅನೇಕ ವಿಷಯಗಳ ಬಗ್ಗೆ ನಮಗೆ ಸರಿಯಾದ ಮಾಹಿತಿ ಗೊತ್ತಿರುವುದಿಲ್ಲ. ಸ್ನೇಹಿತರೆ ನೀವು ರಸ್ತೆಯಲ್ಲಿ ಹೋಗುವಾಗ ಕಿಲೋಮೀಟರ್ ಗಳನ್ನ ಸೂಚಿಸುವ ಕಲ್ಲುಗಳನ್ನ ಹಾಕಿರುವುದನ್ನ ನೋಡಿರುತ್ತೀರಾ..ಊರಿನಿಂದ ಊರಿಗೆ ಹೋಗುವ ದೂರವನ್ನ ಸೂಚಿಸುವ ಕಲ್ಲುಗಳು ಎಂಬುದು ನಮಗೆ ಸಾಮಾನ್ಯವಾಗಿ ಗೊತ್ತಿರುವ ವಿಷಯವೇ..ಆದರೆ ಆ ಕಲ್ಲುಗಳ ಮೇಲೆ ಬೇರೆ ಬೇರೆ ಬಣ್ನವನ್ನ ಯಾಕೆ ಹಾಕಿರುತ್ತಾರೆ ಎಂಬುದರ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಹಸಿರು, ಹಳದಿ, ಕಪ್ಪು ಬಣ್ಣಗಳಿಂದ ಮೈಲಿಗಲ್ಲುಗಳು ಇರುತ್ತವೆ.ಹಾಗಾದರೆ ಆ ಬಣ್ಣಗಳ ಅರ್ಥವೇನೆಂದು ತಿಳಿಯೋಣ ಬನ್ನಿ..

Advertisements

ಬಿಳಿ ಬಣ್ಣದ ಜೊತೆಗೆ ಹಳದಿ ಬಣ್ಣದ ಮೈಲಿಗಲ್ಲು : ನೀವು ರಸ್ತೆ ಮೇಲೆ ಸಂಚಾರ ಮಾಡುವಾಗ ಕಿಮೀ ಅಂತರವನ್ನ ತಿಳಿಸುವ ಮೈಲಿಗಲ್ಲು ಬಿಳಿ ಹಾಗೂ ಹಳದಿ ಬಣ್ಣದಲ್ಲಿ ಏನಾದರೂ ಇದ್ದಲ್ಲಿ ಆಗ ನೀವು ರಾಷ್ಟ್ರೀಯ ಹೆದ್ದಾರಿ(ನ್ಯಾಷನಲ್ ಹೈವೇ)ಯಲ್ಲಿ ಹೋಗುತ್ತಿದ್ದೀರಿ ಎಂದು ಅರ್ಥ. ಸ್ನೇಹಿತರೆ ಈ ಎರಡು ಬಣ್ಣಗಳಿರುವ ಮೈಲಿಗಲ್ಲನ್ನ ಕೇವಲ ರಾಷ್ತ್ರೀಯ ಹೆದ್ದಾರಿಯಲ್ಲಿ ಮಾತ್ರ ಬಳಸಲಾಗುತ್ತದೆ.

ಬಿಳಿ ಮತ್ತು ಹಸಿರು ಬಣ್ಣದ ಮೈಲಿಗಲ್ಲು : ನೀವು ರಸ್ತೆಯಲ್ಲಿ ಹೋಗುವಾಗ ಬಿಳಿ ಬಣ್ಣದ ಮೈಲಿಗಲ್ಲನ್ನ ಕಂಡರೆ ನೀವು ರಾಜ್ಯದ ಹೆದ್ದಾರಿಯಲ್ಲಿದ್ದೀರಿ..ಎಂಬುದನ್ನ ತಿಳಿಯಬೇಕು. ಇನ್ನು ಬಿಳಿ ಬಣ್ಣವು ಕಿಮೀ (ಅಂತರವನ್ನ) ಸೂಚಿಸುವ ಕಲ್ಲಾಗಿದ್ದು ಅದರ ಜೊತೆ ಹಸಿರು ಬಣ್ಣ ಇದ್ದರೆ ನೀವು ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿದ್ದೀರಿ ಎಂದು ತಿಳಿಯಬೇಕು.

ಬಿಳಿ ಬಣ್ಣದ ಜೊತೆಗೆ ನೀಲಿ ಮತ್ತು ಕಪ್ಪು ಬಣ್ಣ ಇದ್ದರೆ : ಸ್ನೇಹಿತರೆ ನಮ್ಮ ಅಕ್ಕಪಕ್ಕದಲ್ಲೇ ಇರುವ ಎಷ್ಟೋ ವಿಷಯಗಳಾ ಬಗ್ಗೆ ಸರಿಯಾಗಿ ತಿಳಿಯದೆ ನಾವು ಹಲವು ಬರಿ ಪೇಚಿಗೆ ಸಿಲುಕಿಹಾಕಿಕೊಳ್ಳುತ್ತೇವೆ. ಇದೆ ರೀತಿ ನಾವು ಗೊತ್ತಿಲ್ಲದ ಊರುಗಳ ಕಡೆಗೆ ಪ್ರಾಯ ಹೋದಾಗ ನಾವು ಎಲ್ಲಿದೀರಿ..ಎತ್ತ ಕಡೆಗೆ ಹೋಗುತ್ತಿದೀರಿ ಎಂಬುದನ್ನ ತಿಳಿಯದೆ ಹಲವು ಬಾರಿ ದೊಡ್ಡ ಪಜಿತಿಯೇ ಆಗಿಬಿಟ್ಟಿರುತ್ತದೆ..ಅಂತಹ ರಸ್ತೆಯಲ್ಲಿ ನೀವೇನಾದರೂ ಬಿಳಿ ಬಣ್ಣದ ಜೊತೆಗೆ ನೀಲಿ ಕಪ್ಪು ಬಣ್ಣ ಇರುವ ಮೈಲಿಗಲ್ಲನ್ನ ಕಂಡರೆ ನೀವು ನಗರ ಪ್ರದೇಶಕ್ಕೆ ತೀರಾ ಹತ್ತಿರದಲ್ಲಿದೀರಿ ಎಂದು ತಿಳಿಯಿರಿ..ಏಕೆಂದರೆ ಇತರಹದ ಮೈಲಿಗಲ್ಲು ರಸ್ತೆಯ ಪಕ್ಕದಲ್ಲಿ ಕಂಡುಬಂದರೆ ಅದು ಜಿಲ್ಲಾಡಳಿತದ ಅಧೀನದ ರಸ್ತೆಯಾಗಿರುತ್ತದೆ ಎಂಬುದನ್ನ ತಿಳಿಯಬೇಕಿದೆ.

ಬಿಳಿ ಬಣ್ಣದ ಜೊತೆಗೆ ಕಿತ್ತಳೆ ಬಣ್ಣದ ಮೈಲಿಗಲ್ಲು : ಕಿತ್ತಳೆ (ಆರೆಂಜ್) ಬಣ್ಣದ ಮೈಲಿಗಲ್ಲನ್ನ ನಾವು ರಸ್ತೆಯ ಪಕ್ಕದಲ್ಲಿ ಕಂಡರೆ ನಾವು ಗ್ರಾಮವೊಂದರ ಕಡೆ ಸಂಚಾರ ಮಾಡುತ್ತಿದ್ದೇವೆ ಎಂಬುದು ಅರ್ಥವಾಗಿದೆ. ನೀವು ಬಿಳಿ ಬಣ್ಣದ ಜೊತೆಗೆ ಕಿತ್ತಳೆ ಬಣ್ಣದ ಮೈಲಿಗಲ್ಲನ್ನ ಕಂಡರೆ ಯಾವುದೋ ಗ್ರಾಮದ ಕಡೆಗೆ ಹೋಗುತ್ತಿದ್ದೀರಿಎಂಬುದನ್ನ ತಿಳಿಯಿರಿ..ಸ್ನೇಹಿತರೆ ಈ ಮಾಹಿತಿ ಉಪಯುಕ್ತವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ,,ನಿಮ್ಮ ಅಭಿಪ್ರಾಯ ತಿಳಿಸಿ..ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244