7 ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದ ಮಹಾಭಾರತ ಸೀರಿಯಲ್ ನ ಬಜೆಟ್ ಎಷ್ಟು ಕೋಟಿ ಗೊತ್ತಾ ?

Kannada News

ನಮಸ್ತೇ ಸ್ನೇಹಿತರೆ, ಕನ್ನಡದ ಕಿರುತೆರೆ ವಾಹಿನಿಯಲ್ಲಿ ಹಿಂದಿಯಿಂದ ಡಬ್ ಆಗಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ಪ್ರೇಕ್ಷಕರು ಫಿದಾ ಆಗಿಬಿಟ್ಟಿದ್ದಾರೆ. ಕಣ್ಮನ ಸೆಳೆಯುವ ಅದ್ಭುತ ಸೆಟ್ ಗಳು,ಲೊಕೇಶನ್ ಗಳು, ಪಾತ್ರಗಳ ಅಮೋಘ ಅಭಿನಯ, ಅದ್ಭುತ ತಂತ್ರಜ್ನ್ಯಾನ, ಸಂಭಾಷಣೆ ಇದೆಲ್ಲವೂ ಸೇರಿ ಮಹಾ ದೃಶ್ಯಕಾವ್ಯ ಮಹಾಭಾರತ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆಯೇನೋ ಅನ್ನುವಷ್ಟರ ಮಟ್ಟಿಗೆ ಪ್ರಸಾರವಾಗುತ್ತಿದೆ. ಇನ್ನು ಏಳು ವರ್ಷಗಳ ಹಿಂದೆ ಅಂದರೆ 2013ನೇ ವರ್ಷದಲ್ಲೇ ಹಿಂದಿಯಲ್ಲಿ ನಿರ್ಮಾಣವಾಗಿದ್ದ ಈ ಮಹಾಭಾರತ ಧಾರಾವಾಹಿಯ ಬಜೆಟ್ ಎಷ್ಟು ಗೊತ್ತಾ ?

ಹೌದು, ಒಂದು ಸಿನಿಮಾವನ್ನ ನಿರ್ಮಾಣ ಮಾಡಬೇಕಾದರೆ ಕೋಟ್ಯಾಂತರ ರೂಪಾಯಿಗಳನ್ನ ಸುರಿಯುತ್ತಾರೆ. ಆದರೆ ಎಷ್ಟೋ ಸಿನಿಮಾಗಳನ್ನ ಕೇವಲ ೨೦ ರಿಂದ ೪೦ ಕೋಟಿಯಲ್ಲಿ ಮುಗಿಸಿಬಿಡುತ್ತಾರೆ. ಕೇವಲ ಕೆಲವು ಸಿನಿಮಾಗಳನ್ನ ಮಾತ್ರ 100ಕೋಟಿಗಿಂತ ಹೆಚ್ಚಿಗೆ ಬಂಡವಾಳ ಹಾಕಿ ನಿರ್ಮಾಣ ಮಾಡುತ್ತಾರೆ. ಆದರೆ ಯಾವುದೇ ಸೀರಿಯಲ್ ನ್ನ 100 ಕೋಟಿ ಬಜೆಟ್ ಹಾಕಿ ನಿರ್ಮಾಣ ಮಾಡುವುದನ್ನ ಕೇಳಿದ್ದೀರಾ..ಒಂದು ಧಾರಾವಾಹಿಗೋಸ್ಕರ ಯಾರೂ ಇಂತಹ ರಿಸ್ಕ್ ತೆಗೆದುಕೊಳ್ಳುವುದಿಲ್ಲ ಅಲ್ಲವಾ..ಹೌದು ಸ್ನೇಹಿತರೆ ಈಗ ಕನ್ನಡದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಸೀರಿಯಲ್ ಏಳು ವರ್ಷಗಲ್ ಹಿಂದೆಯೇ ನಿರ್ಮಾಣವಾಗಿದ್ದು ಆಗಲೇ ಇದರ ಬಜೆಟ್ ಬರೋಬ್ಬರಿ ೧೦೦ ಕೋಟಿಗಿಂತ ಹೆಚ್ಚು ಎಂದರೆ ನೀವು ಶಾಕ್ ಆಗ್ದೇ ಇರೋದಿಲ್ಲ..

ಏಳು ವರ್ಷಗಳ ಹಿಂದೆಯೇ 100 ಕೋಟಿಗಿಂತ ಹೆಚ್ಚಿನ ಬಜೆಟ್ ನಲ್ಲಿ ಮಹಾಭಾರತ ನಿರ್ಮಾಣವಾಗಿತ್ತು ಎಂದರೆ 2020ರ ಈ ವರ್ಷದಲ್ಲಿ ಎಷ್ಟಾಗಿರುತಿತ್ತು ಎಂದು ನೀವು ಒಮ್ಮೆ ಯೋಚಿಸಿ ನೋಡಿ..ಇನ್ನು ಇಲ್ಲಿಯವರೆಗೂ ಮಹಾಭಾರತ ಭಾರತದ ಅನೇಕ ಭಾಷೆಗಳಲ್ಲಿ ಸಿನಿಮಾ ಧಾರಾವಾಹಿಗಳಾಗಿ ಮತ್ತೆ ಮತ್ತೆ ಬಂದಿದ್ದರೂ ೧೦೦ ಕೋಟಿಗಿಂತ ಹೆಚ್ಚಿನ ಬಜೆಟ್ ನಲ್ಲಿ ಮತ್ತೆ ನಿರ್ಮಾಣ ಮಾಡುತ್ತಾರೆ ಎಂದರೆ..ಪೌರಾಣಿಕ ಕತೆಗಳನ್ನ ಜನ ಎಷ್ಟು ಇಷ್ಟಪಡುತ್ತಾರೆ ಎಂಬುದಕ್ಕೆ ಇದೆ ಸಾಕ್ಷಿ..

ಇನ್ನು ಮಹಾಭಾರತ ಧಾರಾವಾಹಿಯನ್ನ ದೇಶದ ವಿವಿಧ ಭಾಗಗಳಲ್ಲಿರುವ ಅದ್ಭುತ ಲೊಕೇಶನ್ ಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು ಪ್ರಚಾರ ಎಲ್ಲಾ ಸೇರಿದಂತೆ ೧೨೦ ಕೋಟಿಗಿಂತಲೂ ಹೆಚ್ಚು ಹಣವನ್ನಖರ್ಚು ಮಾಡಲಾಗಿದೆ ಎಂದು ಹೇಳಲಾಗಿದೆ.

ಇನ್ನು ಹಿಂದಿಯಲ್ಲಿ ನಿರ್ಮಾಣವಾದ ಮಹಾಭಾರತ ಆಗಲೇ ತುಂಬಾ ಹಿಟ್ ಆಗಿದ್ದು ಈಗ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಡಬ್ ಆಗಿ ಪ್ರಸಾರವಾಗುತ್ತಿದ್ದು ಯುವ ಸಮೂಹವನ್ನ ತನ್ನತ್ತ ಸೆಳೆಯುತ್ತಿದೆ.