ಯಾವ ದಿಕ್ಕಿಗೆ ನಾವು ಮಲಗೋದ್ರಿಂದ ಒಳ್ಳೆಯದಾಗುತ್ತೆ ಗೊತ್ತಾ.? ಇದು ಮೂಢನಂಬಿಕೆಯಂತೂ ಅಲ್ಲ !

Kannada News

ನಾವು ದಿನನಿತ್ಯದ ಜೀವನದಲ್ಲಿ ಅನುಸರಿಸುವ ಕೆಲವೊಂದು ಕ್ರಮಗಳು ನಮ್ಮ ಜೀವನದ ಮೇಲೂ ಪ್ರಭಾವ ಬಿರುತ್ತವ ಎಂದು ಹೇಳಾಲಾಗಿದೆ. ನಮ್ಮ ಹಿರಿಯರು ಹೇಳುತ್ತಾರೆ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದೆಂದು. ಇನ್ನು ಹಿಂದೂ ಧರ್ಮದ ಪ್ರಕಾರ ಪೂರ್ವ ಇಲ್ಲವೇ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿಕೊಳ್ಳುವುದು ರೂಢಿಯಾಗಿದೆ. ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗುವುದರಿಂದ ಅಂತಹವರನ್ನ ಭೂತ ಪ್ರೇತಗಳು ಆವರಿಸುತ್ತವೆ ಎನ್ನಲಾಗುತ್ತದೆ. ಆದರೆ ಇದು ಮೂಢನಂಬಿಕೆ. ಇನ್ನು ಪುರಾಣಗಳಲ್ಲಿ ಉಲ್ಲೇಖ ಮಾಡಿರುವಂತೆ ಉತ್ತರಕ್ಕೆ ತಲೆ ಹಾಕಿ ಮಲಗಿರುವ ಆನೆಯ ತಲೆಯನ್ನೇ ತಂದು ವಿನಾಯಕನಿಗೆ ತೊಡಿಸಲಾಗಿರುತ್ತದೆ.

ಇದೆ ಕಾರಣಕ್ಕೆ ಉತ್ತರಕ್ಕೆ ತಲೆ ಹಾಕಿ ಮಲಗಿದ್ರೆ ಪ್ರಾಣಕ್ಕೆ ಸಂಚಕಾರ ಎಂದು ಕೂಡ ಹೇಳಲಾಗುತ್ತದೆ. ಆದರೆ ಇದೆಲ್ಲಾ ಕೇವಲ ಮೂಢನಂಬಿಕೆ ಅಷ್ಟೇ. ಇನ್ನು ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ನಮ್ಮ ಹಿರಿಯರು ಹೇಳಿರುವಂತೆ ಪಚ್ಛಿಮಕ್ಕೆ ಅಥ್ವಾ ಉತ್ತರಕ್ಕೆ ತಲೆ ಹಾಕಿ ಮಲಗುವುದು ಒಳ್ಳೆಯದಲ್ಲ. ಇನ್ನು ಆಸ್ಪತ್ರೆಗಳಲ್ಲೂ ಸಹ ರೋಗಿಗಳನ್ನ ಪೂರ್ವ ಅಥ್ವಾ ದಕ್ಷಿಣ ದಿಕ್ಕೆಗೆ ತಲೆ ಹಾಕಿ ಮಲಗುವ ವ್ಯವಸ್ಥೆ ಇರುತ್ತದೆ. ಇನ್ನು ವೈಜ್ನ್ಯಾನಿಕ ಕಾರಣವೇನೆಂದು ನೋಡಿದಾಗ..

ಈ ಭೂಮಿಗೆ ಶಕ್ತಿಶಾಲಿಯಾದ ಕಾಂತೀಯ ಕ್ಷೇತ್ರ ಇರುತ್ತದೆ. ಇನ್ನು ಮಾನವನ ದೇಹಕ್ಕೂ ಕೂಡ ಕಾಂತೀಯ ಕ್ಷೇತ್ರವಿದೆ. ನಾವು ಒಂದು ವೇಳೆ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿಕೊಂಡಾಗ ಮಾನವನ ದೇಹದ ಹಾಗೂ ಭೂಮಿಯ ವಿರುದ್ದದ ಧ್ರುವಗಳು ಆಕರ್ಷಣೆಗೆ ಒಳಪಟ್ಟು ಬೆಳಗಿನ ಮುಂಜಾನೆ ಎದ್ದಾಗ ನಮ್ಮ ದೇಹ ಆರೋಗ್ಯವಾಗಿ ನಿರಾಳವಾಗಿ ಮನುಷ್ಯನ ದೇಹವು ಹಗುರವಾಗಿರುತ್ತದೆ. ಒಂದು ವೇಳೆ ನಾವು ಪಚ್ಛಿಮಕ್ಕೆ ತಲೆ ಹಾಕಿ ಮಲಗಿಕೊಂಡಲ್ಲಿ ಸೂರ್ಯೋದಯವಾಗುವ ವೇಳೆ ಸೂರ್ಯ ದೇವನ ಬೆಳಕು ನಮ್ಮ ತಲೆಯ ಮೂಲಕ ದೇಹವನ್ನ ಪ್ರವೇಶ ಮಾಡಿ ಪಾದಗಳ ಮೂಲಕ ಹಾದುಹೋಗುತ್ತದೆ. ಇದರಿಂದ ನಾವು ಎದ್ದಾಗ ತಲೆಯವು ಬಿಸಿಯಾಗಿ ಪದಗಳು ತಣ್ಣಗೆ ಇರುತ್ತವೆ. ಇದರಿಂದ ತಲೆನೋವಿನಂತಹ ಸಮಸ್ಯೆಗಳು ಉಂಟಾಗುತ್ತವೆ.

ಇನ್ನು ನಾವು ಒಂದು ವೇಳೆ ಉತ್ತರಕ್ಕೆ ತಲೆ ಹಾಕಿ ಮಲಗಿದಲ್ಲಿ ಭೂಮಿ ಹಾಗೂ ನಮ್ಮ ದೇಹದ ಕಾಂತೀಯ ಧ್ರುವಗಳು ಘರ್ಷಣೆಗೆ ಒಳಗಾಗಿ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಹಾಗಾಗಿ ನಾವು ದಕ್ಷಿಣ ಇಲ್ಲ ಪೂರ್ವಕ್ಕೆ ತಲೆ ಹಾಕಿ ಮಲಗುವುದು ಉತ್ತಮ.