ಮಹಾಭಾರತದಲ್ಲಿ ಭೀಮನಾಗಿ ಅಬ್ಬರಿಸಿದ ಈ ನಟ ಮಾಡುತ್ತಿರುವ ಕೆಲಸ ಗೊತ್ತಾದ್ರೆ ನಿಮ್ಗೆ ಅಚ್ಚರಿ ಆಗದೇ ಇರೋಲ್ಲ !

Entertainment

ನಮಸ್ತೇ ಸ್ನೇಹಿತರೇ, ಕನ್ನಡದ ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿರುವ ಮಹಾನ್ ದೃಶ್ಯಕಾವ್ಯ ಮಹಾಭಾರತ ಪ್ರಸಾರವಾಗುತ್ತಿದ್ದು ಸೀರಿಯಲ್ ನಲ್ಲಿ ಮೂಡಿಬಂದಿರುವ ಪ್ರತಿಯೊಂದು ಪಾತ್ರಗಳು ಅದ್ಭುತವಾಗಿವೆ. ನಮ್ಮ ಕಣ್ಣ ಮುಂದೆಯೇ ಮಹಾಭಾರತ ನಡೆಯುತ್ತಿದೆಯೇ ಎಂಬಂತೆ ಪಾತ್ರಗಳಿಗೆ ಜೀವ ತುಂಬಿ ನಟಿಸಿದ್ದಾರೆ ನಟ ನಟಿಯರು. ಹಿಂದಿಯಿಂದ ಡಬ್ ಆಗಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಧಾರಾವಾಹಿಯನ್ನ ಯಾವ ರೀತಿಯಾಗಿ ಪ್ರೇಕ್ಷಕರು ಮೆಚ್ಚಿದ್ದಾರೆಂದರೆ ಮೊದಲಿನಂತೆ ಒಂದು ಗಂಟೆಗಳ ಪ್ರಸಾರ ಮಾಡುವಂತೆ ಸುವರ್ಣ ವಾಹಿನಿಯವರಲ್ಲಿ ಕೇಳಿಕೊಳ್ಳುತ್ತಿದ್ದಾರೆ.

ಇನ್ನು ಮಹಾಭಾರತದಲ್ಲಿ ಎಲ್ಲಾ ಪಾತ್ರಗಳಂತೆ ವಾಯುಪುತ್ರ ಹನುಮಂತನ ಸಹೋದರನಾದ ಭೀಮನದು ಕೂಡ ಪ್ರಮುಖ ಪಾತ್ರ. ವಾಯು ದೇವನ ಪ್ರಸಾದ. ಪಾಂಡುರಾಜ ಕುಂತಿಯ ಎರಡನೇ ಪುತ್ರ. ಇನ್ನು ಈ ಪಾತ್ರವನ್ನ ಮಾಡಿದವರು ಭೀಮನಂತೆಯೇ ದೇಹದಾರ್ಢ್ಯವನ್ನ ಹೊಂದಿರುವ ಸೌರವ್ ಗುರ್ಜಾರ್. ಇನ್ನು ಈ ನಟ ಸಂಕಟ ಮೋಚನ ಹನುಮಾನ್ ಧಾರಾವಾಹಿಯಲ್ಲೂ ಕೂಡ ದಶಕಂಠ ರಾವಣನಾಗಿ ಮಿಂಚಿದ್ದಾನೆ.

ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಹುಟ್ಟಿದ ಸೌರವ್ ಗೆ ಹೀಗಿನ್ನು ಕೇವಲ 36 ವರ್ಷ. ಸೌರವ್ ಫಾರ್ಮರ್ ಕಿಕ್ ಬಾಕ್ಸಿಂಗ್ ಗೋಲ್ಡ್ ಮೆಡಲಿಸ್ಟ್ ಕೂಡ ಆಗಿದ್ದಾರೆ. 2013ರಲ್ಲಿ ಹಿಂದಿಯಲ್ಲಿ ತೆರೆಗೆ ಬಂದ ಮಹಾಭಾರತ ಸೀರಿಯಲ್ ನಲ್ಲಿ ಭೀಮನ ಪಾತ್ರದ ಮೂಲಕ ಪ್ರಖ್ಯಾತರಾದವರು.

ಸ್ನೇಹಿತರೆ ಇಷ್ಟಕ್ಕೆ ನಿಂತಿಲ್ಲ ಇವರ ಸಾಧನೆ..ಇನ್ನು ಪ್ರೊಫೆಷನಲ್ ರೆಸೆಲರ್ ಕೂಡ ಆಗಿರುವ ಸೌರವ್ ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ (WWE) ಗೆ ಆಯ್ಕೆಯಾಗಿದ್ದು ರಿಂಗ್ ನಲ್ಲಿ ಎದುರಾಳಿಗಳನ್ನ ಪುಡಿಗಟ್ಟಲಿದ್ದಾರೆ. ಇನ್ನು ಈಗಾಗಲೇ WWEನ NXT ರಿಂಗ್ ನಲ್ಲಿ ಎ’ದುರಾಳಿಗಳ ಜೊತೆ ಗು’ದ್ದಾಡಿದ್ದಾರೆ ಕೂಡ. 14 ಜನವರಿ 2018 ರಂದು WWE ಕಾಂಟ್ರಾಕ್ಟ್ ಗೆ ಸೈನ್ ಮಾಡಿರುವ ಸೌರವ್ ಅಲ್ಲಿ ತರಭೇತಿ ಕೂಡ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಬ್ರಹ್ಮಾಸ್ತ್ರ ಎಂಬ ಹಿಂದಿ ಚಿತ್ರದಲ್ಲಿ ಸೌರವ್ ಗುರ್ಜಾರ್ ನಟಿಸಿದ್ದು ಅದು 2021ಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244