ಏನಾಗಿದೆ ನಟಿ ಖುಷ್ಬು ಅವರಿಗೆ ! ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದೇಕೆ ರಣಧೀರನ ರಾಣಿ ?

Cinema

ಕನ್ನಡ ಸೇರಿದಂತೆ ತೆಲುಗು ತಮಿಳು ಚಿತ್ರರಂಗದಲ್ಲಿ ಮಿಂಚಿದ ಸುಂದರ ಮುಖದ ಖ್ಯಾತ ನಟಿ ಖುಷ್ಬು. ರಣಧೀರನ ರಾಣಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಫೋಟೋವೊಂದನ್ನ ನೋಡಿ ಅಭಿಮಾನಿಗಳು ನಟಿ ಖುಷ್ಬುಗೆ ಏನಾಗಿದೆ ಎಂಬ ಆತಂಕದಲ್ಲಿದ್ದಾರೆ. ಇನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಹಾಕಿ ಟ್ವೀಟ್ ಮಾಡಿರುವ ಖುಷ್ಬು ನಾನು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

ಹೌದು, ಇಂದು ಬೆಳಿಗ್ಗೆ ಅಂದರೆ ಬುಧವಾರದಂದು ಖುಷ್ಬು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಬಗ್ಗೆ ಮಾಹಿತಿ ನೀಡಿದ್ದು ನಾನು ಕೆಲ ದಿನಗಳ ಕಾಲ ಸೋಷಿಯಲ್ ಮಿಡಿಯಾದಿಂದ ದೂರ ಇರಲಿದ್ದು ಆದಷ್ಟು ಬೇಗ ಸಾಮಾಜಿಕ ಜಾಲತಾಣಕ್ಕೆ ಮರಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ತಪ್ಪದೆ ಮಾಸ್ಕ್ ಧರಿಸಿಕೊಳ್ಳಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಇನ್ನು ಖುಷ್ಬು ಅವರು ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ರಾಜಕೀಯ ರಂಗದಲ್ಲೂ ತಮ್ಮನ್ನ ಗುರುತಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿರುವ ಇವರು ತಮ್ಮ ಪೋಸ್ಟ್ ಗಳಿಂದಾಗಿ ಹಲವಾರು ಬಾರಿ ವಿವಾದಗಳನ್ನ ಮೈಮೇಲೆ ಎಳೆದುಕೊಂಡಿರುವುದು ಉಂಟು. ಇನ್ನು ಅಭಿಮಾನಿಗಳು ಬೇಗೆ ಗುಣವಾಗಿ ಬನ್ನಿ ಎಂದು ಹಾರೈಸಿ ಟ್ವೀಟ್ ಗಳನ್ನ ಮಾಡಿದ್ದಾರೆ. ಚೌಡೇಶ್ವರಿ ಜ್ಯೋತಿಷ್ಯಾಲಯ ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್ ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಸಂಪರ್ಕಿಸಿ ದುರ್ಗಾ ಪ್ರಸಾದ್ ಗುರೂಜಿ 9663034244