ಕೇವಲ 18 ತಿಂಗಳಿನಲ್ಲಿ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆಯ ಕಾರಣ ಕೇಳಿ ನ್ಯಾಯಾಧೀಶರೇ ಶಾಕ್ ! ಇಂತಹವರೂ ಇರ್ತಾರಾ ?

News

ನಮಸ್ತೇ ಸ್ನೇಹಿತರೆ, ಗಂಡ ವರದಕ್ಷಿಣೆ ಪೀ’ಡಕನಾಗಿದ್ದಾನೆಂದು, ಕು’ಡಿದು ಬಂದು ಕಾಟ ಕೊಡುತ್ತಿದ್ದಾನೆಂದು, ಬೇರೆಯವರ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಹೀಗೆ ಹಲವಾರು ಕಾರಣಗಳಿಗೆ ನಮಗೆ ಡೈವರ್ಸ್ ಕೊಡಿಸಿ ಎಂದು ಬಹುತೇಕ ಮಹಿಳೆಯರು ಕೋರ್ಟ್ ಮೆಟ್ಟಿಲೇರುವುದನ್ನ ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ವಿಚಿತ್ರ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾಳೆ. ಹೌದು, ನನ್ನ ಗಂಡ ನನ್ನನ್ನ ಹೆಚ್ಚಾಗಿ ಪ್ರೀತಿ ಮಾಡುತ್ತಾನೆ, ನನ್ನ ಜೊತೆ ಜಗಳವೇ ಆ’ಡುವುದಿಲ್ಲ, ನಾನು ವಾದ ಮಾಡಿದರೂ ಸುಮ್ಮನಿರುತ್ತಾನೆ ಎಂಬುವುದೇ ಆಕೆಯ ಆರೋಪವಾಗಿದೆ. ಈ ಜಗತ್ತಿನಲ್ಲಿ ಇಂತಹವರು ಇರುತ್ತಾರಾ ಎಂಬುವುದೇ ಅಚ್ಚರಿಗೆ ಕಾರಣವಾಗಿದೆ.

ಪ್ರತಿಯೊಬ್ಬ ಮಹಿಳೆ ಕೂಡ ತನ್ನ ಪತಿ ತನ್ನನ್ನ ಅತಿಯಾಗಿ ಪ್ರೀತಿ ಮಾಡಬೇಕು. ನನ್ನ ಆಸೆಗಳನ್ನೆಲ್ಲಾ ಈಡೇರಿಸುವನಾಗಿರಬೇಕು ಎಂಬುದೇ ಪ್ರತಿ ಮಹಿಳೆಯ ಆಸೆಯಾಗಿರುತ್ತೆ. ಆದರೆ ಈ ಮಹಿಳೆ ಇದೆಲ್ಲದಕ್ಕೂ ವಿರುದ್ಧವಾಗಿದ್ದು ಸ್ವತಃ ನ್ಯಾಯಾಧೀಶರೇ ಕಕ್ಕಾಬಿಕ್ಕಿಯಾಗಿದ್ದಾರೆ. ಹೌದು ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬಳು ವಿಚ್ಛೇಧನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ಕಾರಣ ಕೇಳಿದ ಸ್ವತಃ ನ್ಯಾಯಮೂರ್ತಿಗಳೇ ಶಾಕ್ ಆಗಿದ್ದಾರೆ.

ಮದುವೆಯಾದ ಕೇವಲ ಒಂದುವರೆ ವರ್ಷದಲ್ಲೇ ವಿಚ್ಛೇಧನಕ್ಕೆ ಮೊರೆ ಹೋಗಿರುವ ಆ ಮಹಿಳೆ ಕೊಡುವ ಕಾರಣ ಹೀಗಿದೆ..ನನ್ನ ಪತಿ ಇದುವರೆಗೂ ಯಾವುದೇ ವಿಷಯದಲ್ಲಿ ನಿರಾಸೆ ಮೂಡಿಸಿಲ್ಲ. ಮದುವೆಯಾದಾಗಿನಿಂದ ಒಂದು ಬಾರಿಯೂ ನನ್ನ ಮೇಲೆ ಕೂಗಾಡದ ನನ್ನ ಪತಿ ಮನೆಕೆಲಸದಲ್ಲೂ ಕೂಡ ನನಗೆ ಸಹಾಯ ಮಾಡುತ್ತಾನೆ, ಅಡುಗೆ ಮಾಡಿ ಬಡಿಸುತ್ತಾನೆ. ನಾನು ಏನೇ ತಪ್ಪನ್ನ ಮಾಡಿದ್ರೂ ಕೂಡ ಅದರ ಬಗೆ ಏನನ್ನು ಕೇಳದೆ ಕ್ಷಮಿಸಿಬಿಡುತ್ತಾನೆ. ಎಲ್ಲದಕ್ಕೂ ಓಕೆ ಅನ್ನುವ ಎಲ್ಲವನ್ನೂ ಸಹಿಸಿಕೊಳ್ಳುವ ಪತಿಯ ಜೊತೆ ನಾನು ಸಂಸಾರ ಮಾಡುವುದಕ್ಕೆ ಆಗುವುದಿಲ್ಲ, ನನಗೆ ಉಸಿರು ಗಟ್ಟಿದಂತಾಗಿದೆ ಎನ್ನುವುದು ಆ ಮಹಿಳೆಯ ಆರೋಪವಾಗಿದೆ.

ಇನ್ನು ಇದನ್ನ ಕೇಳಿದ ನ್ಯಾಯಮೂರ್ತಿಗಳು ಇದು ವಿಚ್ಛೇಧನಕ್ಕೆ ಸಮರ್ಪಕ ಕಾರಣವಲ್ಲ ಎಂದು ಹೇಳಿ ಅರ್ಜಿಯನ್ನ ವಜಾ ಮಾಡಿದ್ದಾರೆ. ಇನ್ನು ಇದರ ಬಗ್ಗೆ ಮಾತನಾಡಿರುವ ಆಕೆಯ ಪತಿ ಹೆಂಡತಿಯನ್ನ ಸಂತೋಷದಿಂದ ನೋಡಿಕೊಳ್ಳುವುದು ನನ್ನ ಆಸೆಯಾಗಿದೆ. ಹೀಗಾಗಿ ಅರ್ಜಿಯನ್ನ ವಜಾ ಮಾಡಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದು ಗಂಡ ಹೆಂಡತಿ ಪರಸ್ಪರ ಕುಳಿತು ಮಾತನಾಡಿ ಸಮಸ್ಯೆಯನ್ನ ಪರಿಹರಿಸಿಕೊಳ್ಳಿ ಎಂದು ಮಾನ್ಯ ನ್ಯಾಯಾಲಯ ವಿಚ್ಚೇಧನ ಅರ್ಜಿಯನ್ನ ಕ್ಯಾನ್ಸಲ್ ಮಾಡಿದೆ.