ಮನುಷ್ಯ ಈ 4 ಜಾಗದಲ್ಲಿ ಎಂದಿಗೂ ನಿಲ್ಲಬಾರದಂತೆ ! ಇದರ ಬಗ್ಗೆ ಚಾಣಕ್ಯ ಹೇಳಿರುವುದೇನು ಗೊತ್ತಾ ?

Inspire Kannada News
Advertisements

ಸ್ನೇಹಿತರೆ ಆಚಾರ್ಯ ಚಾಣಕ್ಯರಂತಹ ಮೇಧಾವಿಗಳು ಹೇಳಿರುವ ಮಾತುಗಳು ನಮ್ಮ ಜೀವನಕ್ಕೆ ತುಂಬಾ ಉಪಯುಕ್ತವಾಗಿವೆ. ಅವರ ಪ್ರತಿಯೊಂದು ನೀತಿ ಪಾಠಗಳು ಮನುಷ್ಯ ಬಾಳಲ್ಲಿ ಬೆಳಕು ಮೂಡಿಸುವಂತುಹವೇ ಆಗಿವೆ. ಮನುಷ್ಯನು ಯಶಸ್ವಿಯಾಗಲು ನೆಮ್ಮದಿಯಿಂದ ಜೀವನ ನಡೆಸಲು ಚಾಣಕ್ಯರ ನೀತಿ ತತ್ವಗಳು ಉಪಯುಕ್ತವಾಗಿವೆ. ಇನ್ನು ಆಚಾರ್ಯರು ಮನುಷ್ಯರು ಯಾವುದೇ ಕಾರಣಕ್ಕೂ ಇಂದಿಗೂ ಈ ನಾಲ್ಕು ಜಾಗಗಳಲ್ಲಿ ನಿಲ್ಲಬಾರದು ಎಂದು ಚಾಣಕ್ಯರ ನೀತಿ ಪಾಠಗಳು ಹೇಳುತ್ತವೆ..

*ಚಾಣಕ್ಯರ ಪ್ರಕಾರ ನಮಗೆ ಎಲ್ಲಿ ಗೌರವ ಪ್ರೀತಿ ಸಿಗುವುದಿಲ್ಲವೋ ಆ ಸ್ಥಳದಲ್ಲಿ ಒಂದು ಕ್ಷಣ ಕೂಡ ನಿಲ್ಲಬಾರದಂತೆ. ಕಾರಣ ಮನುಷ್ಯನಿಗೆ ಗೌರವ ಪ್ರೀತಿ ತುಂಬಾ ಮುಖ್ಯವಾದದ್ದು. ನಮಗೆ ಯಶಸ್ಸು ಸಿಗಬೇಕೆಂದರೆ, ಸಮಾಜದಲ್ಲಿ ಎತ್ತರಕ್ಕೆ ಬೆಳೆಯಬೇಕೆಂದರೆ ನಮ್ಮ ಸ್ವಾಭಿಮಾನ ಕಾಪಾಡಿಕೊಳ್ಳುವುದು ಅತೀ ಮುಖ್ಯವಾದದ್ದು. ಹಾಗಾಗಿ ನಾವು ನಮಗೆ ಪ್ರೀತಿ ಗೌರವ ಸಿಗುವ ಸ್ಥಳದಲ್ಲೇ ನಿಲುಸುವುದು ಸೂಕ್ತವಾದದ್ದು ಎಂದು ಚಾಣಕ್ಯ ನೀತಿ ಹೇಳುತ್ತದೆ.

Advertisements

*ನಾವು ನಿಂತ ನೀರಾಗಬಾರದು. ಹರಿಯುವ ನೀರಾಗಬೇಕು. ಏಕೆಂದರೆ ನಿಂತ ನೀರಿನಲ್ಲಿ ಬರೀ ಕಸ ಕಡ್ಡಿಯೇ ತುಂಬಿರುತ್ತದೆ. ಹರಿಯುವ ನೀರು ಸ್ವಚ್ಛವಾಗಿ ಕನ್ನಡಿಯಂತೆ ಹೊಳೆಯುತ್ತಿರುತ್ತದೆ. ಹಾಗಾಗಿ ನಾವು ಪ್ರತೀ ದಿನ ಕಾಲಕ್ಕೆ ತಕ್ಕಂತೆ ಏನಾದರು ಹೊಸ ವಿಷಯವನ್ನ ಕಲಿಯಲು ಪ್ರಯತ್ನ ಮಾಡುತ್ತಿರಲೇಬೇಕು. ನಾವು ಕಲಿತು ಮತ್ತೊಬ್ಬರಿಗೆ ಕಲಿಸುವುದರಿಂದ ಹೊಸ ಪೀಳಿಗೆಯ ಭವಿಷ್ಯಕ್ಕೆ ಸಹಾಯವಾಗುತ್ತದೆ. ಎಲ್ಲಿ ನಿಮಗೆ ಹೊಸದನ್ನ ಕಲಿಯಲು ಅವಕಾಶ ಸಿಗುವುದಿಲ್ಲವೋ ಅಲ್ಲಿ ನಿಲ್ಲಬಾರದು. ಇದು ಕೇವಲ ಯಶಸ್ಸಿಗೆ ಮಾತ್ರವಲ್ಲದೆ ಜೀವನ ಸುಂದರವಾಗಿರಲು ಕಾರಣ ಎಂಬುದು ಚಾಣಕ್ಯರ ಅಭಿಪ್ರಾಯವಾಗಿದೆ.

*ನಾವು ಭಾವನಾ ಜೀವಿಗಳಾಗಿದ್ದೇವೆ. ನಾವು ಸುಖ ಶಾಂತಿಯಿಂದ ಜೀವನ ಮಾಡಬೇಕಾದರೆ ತಮಗೆ ಪ್ರಿಯರಾದವರೊಂದಿಗೆ ಕಷ್ಟ ಸುಖಗಳನ್ನ ಅಂಚಿಕೊಳ್ಳಬೇಕು. ಇನ್ನು ನಾವಿರುವ ಜಗದಲ್ಲಿ ನಮಗೆ ನಾವು ಹೇಳಿದ್ದನ್ನ ಮನಸಾರೆ ಕೇಳುವವರು, ನಮ್ಮನ್ನ ಅರ್ಥ ಮಾಡಿಕೊಳ್ಳುವವರು ಇಲವೇ ನಮಗೆ ಒಳಿತು ಬಯಸದೆ ಕೇಡು ಬಯಸುವವರು ಇದ್ದಲ್ಲಿ ಅಂತಹ ಜಾಗದಲ್ಲಿ ನಾವು ಇರಬಾರದು ಎಂದು ಚಾಣಕ್ಯರ ನೀತಿ ಪಾಠಗಳಲ್ಲಿ ಉಲ್ಲೇಖ ಮಾಡಲಾಗಿದೆ.

*ಗೆಳೆಯರೇ ನಾವು ಯಾವುದೇ ಕೆಲಸವನ್ನ ಮಾಡಲಿ ಪ್ರೀತಿಯಿಂದ ಮಾಡಿದಲ್ಲಿ ಮಾತ್ರ ಆ ಕೆಲಸದಲ್ಲಿ ಯಶಸ್ಸು ಸಿಗಲು ಸಾಧ್ಯ. ಹಾಗಾಗಿ ನಾವು ಮಾಡುವ ಕೆಲಸವನ್ನೇ ತೃಪ್ತಿಯಿಂದ ಮಾಡಬೇಕು. ಒಂದು ವೇಳೆ ಆ ಕೆಲಸದಲ್ಲಿ ನಿಮಗೆ ತೃಪ್ತಿ ಇಲ್ಲದಿದ್ದಲ್ಲಿ ಆ ಕೆಲಸ ಮಾಡುವ ಅವಶ್ಯಕತೆ ಇಲ್ಲ. ಇದರಿಂದ ನಿಮಗೆ ಆ ಕೆಲಸದಲ್ಲಿ ಯಶಸ್ಸು ಕೂಡ ಸಿಗುವುದಿಲ್ಲ. ಆದರೆ ಮುಂದುವರಿದ ಕಾಲಘಟ್ಟದಲ್ಲಿ ನಾವು ಬಯಸಿದ ಕೆಲಸಗಳು ಸಿಗುವುದು ಕಷ್ಟ. ಹಾಗಾಗಿ ನಾವು ಮಾಡುವ ಕೆಲಸವನ್ನೇ ಶ್ರದ್ದೆಯಿಂದ ಮಾಡಿ ನೇಮಂದಿಯಿಂದ ಇರುವುದು ಲೇಸು. ನಾವು ಮಾಡುವ ಕೆಲಸದಲ್ಲೇ ತೃಪ್ತಿಯನ್ನ ಕಾಣಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.