ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ವಿರಾಟ್ ಕೊಹ್ಲಿ ದಂಪತಿ

News
Advertisements

ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿರುವ ವಿರಾಟ್ ಕೊಹ್ಲಿ ದಂಪತಿ ತಮ್ಮ ಅಭಿಮಾನಿಗಳಿಗ್ಗೆ ಸಿಹಿಸುದ್ದಿಯೊಂದನ್ನ ಕೊಟ್ಟಿದ್ದಾರೆ. ಹೌದು ವಿರಾಟ್ ಕೊಹ್ಲಿ ಅನುಷ್ಕಾ ತಾಯಿಯಾಗುತ್ತಿರುವ ಸಂತೋಷದ ವಿಚಾರವನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 2017ರ ಡಿಸೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ವಿರಾಟ್ ಅನುಷ್ಕಾ ದಂಪತಿ ಮೂರು ವರ್ಷಗಳ ಬಳಿಕ ಸಿಹಿ ಸುದ್ದಿಯನ್ನ ಕೊಟ್ಟಿದ್ದು ತಾವು ತಂದೆ ತಾಯಿ ಆಗುತ್ತಿರುವ ವಿಚಾರವನ್ನ ಹಂಚಿಕೊಂಡಿದ್ದಾರೆ.

ಇನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೊಹ್ಲಿ ಅನುಷ್ಕಾ ಜೊತೆಗಿರುವ ಫೋಟೋವೊಂದನ್ನ ಪೋಸ್ಟ್ ಮಾಡಿದ್ದು ನಾವು ಈಗ ಮೂರು ಜನ ಎಂದು ಬರೆದುಕೊಂಡಿದ್ದಾರೆ. ೨೦೨೧ಕ್ಕೆ ನಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ ಎಂದು ಅವರು ಹೇಳಿದ್ದಾರೆ.

Advertisements

ಸದ್ಯ ಐಪಿಲ್ ಲೀಗ್ ಗಾಗಿ ಕೊಹ್ಲಿ ದುಬೈನಲ್ಲಿದ್ದು 2021ರ ಜನವರಿ ತಿಂಗಳಿನಲ್ಲಿ ಕೊಹ್ಲಿ ಮನೆಗೆ ಜೂನಿಯರ್ ವಿರಾಟ್ ಕೊಹ್ಲಿ ಇಲ್ಲವೇ ಜೂನಿಯರ್ ಅನುಷ್ಕಾ ಅವರ ಆಗಮನ ಆಗಲಿದೆ. ಇನ್ನು ತಮ್ಮ ಪ್ರೀತಿಯ ಆಟಗಾರ ತಂದೆಯಾಗುತ್ತಿರುವುದಕ್ಕೆ ಅಭಿಮಾನಿಗಳು ಶುಭಾಶಯಗಳನ್ನ ತಿಳಿಸುತ್ತಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋಗಳು ಸಖತ್ ವೈರಲ್ ಆಗಿವೆ.