6 ತಿಂಗಳು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದರಂತೆ ಅನಿಕಾ !

Entertainment

ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಮೆಚ್ಚಿದ ಧಾರವಾಹಿ ಕಮಲಿ ವೀಕ್ಷಕರ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮುಗ್ದ ಹಳ್ಳಿ ಯುವತಿಯೊಬ್ಬಳು ಪೇಟೆಗೆ ಬಂದು ಕಾಲೇಜಿಗೆ ಸೇರಿ ಕಷ್ಟ ನಷ್ಟಗಳನ್ನ ಎದುರಿಸಿ ಬೆಳೆಯುವ ರೀತಿಯೇ ಈ ಸೀರಿಯಲ್ ಕತೆಯಾಗಿದೆ. ಇನ್ನು ಈ ಧಾರಾವಾಹಿಯಲ್ಲಿ ನೆಗಟೀವ್ ರೋಲ್ ನಲ್ಲಿ ಮಿಂಚುತ್ತಿರುವ ಅನಿಕಾ ಪಾತ್ರ ಅದ್ಭುತವಾಗಿ ಮೂಡಿಬಂದಿದೆ. ಇನ್ನು ಈ ಪಾತ್ರದಲ್ಲಿ ನಟಿಸಿರುವುದು ನಟಿ ರಚನಾ ಸ್ಮಿತ್.

ಹಳ್ಳಿಯಿಂದ ಬಂದ ಮುಗ್ದ ಹುಡುಗಿ ಕಮಲಿಗೆ ಸದಾ ಒಂದಿಲ್ಲೊಂದು ಪಿತೂರಿ ಮಾಡಿ ಕಷ್ಟ ಕೊಟ್ಟು ಮಜಾ ನೋಡುವ ಅನಿಕಾ ಪಾತ್ರದಾರಿ ರಚನಾ ಅವರ ಬಗ್ಗೆ ಜನರು ಕೂಡ ಕೋಪಗೊಂಡಿದ್ದಾರಂತೆ. ಹೌದು, ಈ ವಿಷಯದ ಬಗ್ಗೆ ಸ್ವಯಂ ಅನಿಕಾ ಅಲಿಯಾಸ್ ರಚನಾ ಸ್ಮಿತ್ ಅವರೇ ಹೇಳಿಕೊಂಡಿದ್ದಾರೆ. ನಿಜ ಜೀವನದಲ್ಲೂ ಕೂಡ ರಚನಾ ಹೀಗೆಯೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದಂತೆ ಬೈ’ಯುತ್ತಿದ್ದಂರಂತೆ.

ಇದೇ ಕಾರಣದಿಂದ ರಚನಾ ಸ್ಮಿತ್ ಬರೋಬ್ಬರಿ ಆರು ತಿಂಗಳ ಕಾಲ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ರಚನಾಗೆ ಕಮಲಿ ಧಾರಾವಾಹಿಯ ಅನಿಕಾ ಪಾತ್ರ ಬ್ರೇಕ್ ಕೊಟ್ಟಿದೆ. ಆದರೆ ಖಳ ನಟಿಯ ಪಾತ್ರದಲ್ಲಿ ನಟಿಸಿರುವುದರಿಂದ ಸಹಜವಾಗಿಯೇ ಜನರಿಂದ ತುಂಬಾ ಬೈ’ಗುಳ ಬರುತಿತ್ತು ಎಂದು ಅವರು ಹೇಳಿದ್ದಾರೆ. ಆದರೆ ತಾನು ನಟಿಸುತ್ತಿರುವ ಪಾತ್ರ ಜನರ ಮೇಲೆ ಈ ಪಾಟಿಗೆ ಪ್ರಭಾವ ಬೀರಿರುವುದು ಅನಿಕಾ ಪಾತ್ರದಾರಿ ರಚನಾಗೆ ಸಂತೋಷವಾಗಿದೆಯಂತೆ.