ಯಾರಿಗೂ ತಿಳಿಯದಂತೆ ಬೆಂಗಳೂರಿನ ಏರಿಯಾಗಳಲ್ಲಿ ಸೈಕಲ್ ನಲ್ಲಿ ಸುತ್ತಾಡಿದ ಅಪ್ಪು

Cinema

ನಮಸ್ತೇ ಸ್ನೇಹಿತರೆ, ಸ್ಯಾಂಡಲ್ವುಡ್ ನಲ್ಲಿ ಪವರ್ ಸ್ಟಾರ್ ಎಂದೇ ಕರೆಸಿಕೊಂಡಿರುವ ನಟ ಪುನೀತ್ ರಾಜ್ ಕುಮಾರ್ ಅವರ ಫಿಟ್ನೆಸ್ ನ್ನ ಕಂಡು ಪರ ಭಾಷಾ ನಟರು ಕೂಡ ವ್ಹಾವ್ ಎನ್ನುತ್ತಿದ್ದಾರೆ. ಪುನೀತ್ ಅವರ ಹಲವಾರು ವರ್ಕ್ ಔಟ್ ವಿಡಿಯೋಗಳು ಸಾಮಾಜಿಕ ಜಾಲತಾಣಗಲ್ಲಿ ತುಂಬಾ ವೈರಲ್ ಆಗುತ್ತಿವೆ. ಇನ್ನು ಅಪ್ಪುಗೆ ೪೫ ವರ್ಷವಾಗಿದ್ದರೂ ಫಿಟ್ನೆಸ್ ಬಗೆಗಿನ ಕಾಳಜಿ ಕಂಡು ನವನಟರು ಅವರನ್ನ ಮಾದರಿಯನ್ನಾಗಿಸಿಕೊಂಡಿದ್ದಾರೆ.

ಇನ್ನು ಇಂದು ಬೆಳಿಗ್ಗೆ ಫಿಟ್ನೆಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಟಾಸ್ಕ್ ಒಂದನ್ನ ಮಾಡಿದ್ದಾರೆ ಪುನಿತ್. ಹೌದು ಯಾರಿಗೂ ತಿಳಿಯದಂತೆ ಇಡೀ ಬೆಂಗಳೂರಿನಲ್ಲೆಲ್ಲಾ ಸೈಕಲ್ ನಲ್ಲಿ ಸುತ್ತಾಡಿದ್ದಾರೆ. ಇನ್ನು ಇದರ ಬಗ್ಗೆ ವಿಡಿಯೋ ಪೋಸ್ಟ್ ಮಾಡಿರುವ ಅಪ್ಪು ಪೆಡಲ್ ಟುವರ್ಡ್ಸ್ ಫಿಟ್ ಮಾರ್ನಿಂಗ್ ಎಂದು ಬರೆದುಕೊಂಡಿದ್ದಾರೆ.

ಇನ್ನು ತಾವು ವಾಸವಾಗಿರುವ ಸದಾಶಿವ ನಗರದಿಂದ ಸೈಕಲ್ ಹತ್ತಿದ್ದ ಪವರ್ ಸ್ಟಾರ್ ಮೇಖ್ರಿ ವೃತ್ತ ಸೇರಿದಂತೆ ಚಾಲುಕ್ಯ ಸರ್ಕಲ್ ಹಾಗೂ ವಿಧಾನ ಸೌಧ, ಚಿನ್ನ ಸ್ವಾಮಿ ಕ್ರೀಡಾಂಗಣ ಹಾಗೂ ಮಹಾತ್ಮಾ ಗಾಂಧಿ ರಸ್ತೆ ಸೇರಿದಂತೆ ಗಾರ್ಡನ್ ಸಿಟಿಯ ಪ್ರಮುಖ ರಸ್ತೆಗಳಲ್ಲಿ ಅಪ್ಪು ಸೈಕಲ್ ಸವಾರಿ ಮಾಡಿದ್ದಾರೆ. ಇನ್ನು ಇಂದಿನ ಯುವನಟರು ಪುನೀತ್ ರವರ ಫಿಟ್ನೆಸ್, ಡ್ಯಾನ್ಸ್, ನಟನೆಯನ್ನ ನೋಡಿ ಕಲಿಯುವುದು ತುಂಬಾ ಇದೆ ಎಂದರೆ ತಪ್ಪಾಗೊದಿಲ್ಲ.