ರೈತ ಮಾಡಿದ ಈ ಐಡಿಯಾ ನೋಡಿ ಅಚ್ಚರಿಗೊಂಡ ಉದ್ಯಮಿ ಆನಂದ್ ಮಹೀಂದ್ರಾ !

Kannada News
Advertisements

ನಮಸ್ತೇ ಸ್ನೇಹಿತರೆ, ಇತ್ತೀಚಿಗೆ ರೈತರು ವ್ಯವಸಾಯದಲ್ಲಿ ಹೊಸ ಹೊಸ ಐಡಿಯಾಗಳಿಗೆ ಮುಂದಾಗುತ್ತಿದ್ದು ತಮ್ಮಲ್ಲಿರುವ ಟ್ರಾಕ್ಟರ್ ಬೈಕ್ ಗಳನ್ನೇ ಯಂತ್ರಗಳನ್ನಾಗಿ ಬಳಸಿಕೊಂಡು ಕಷ್ಟಕರವಾದ ಕೆಲಸಗಳನ್ನ ತುಂಬಾ ಸುಲಭವಾಗಿ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಮಹಿಂದ್ರಾ ಕಂಪನಿಯ ಚೇರ್ಮನ್ ಆಗಿರುವ ಆನಂದ್ ಮಹಿಂದ್ರಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಬಹಳ ಕುತೂಹಲದಾಯಕವಾಗಿರುವ ವಿಡಿಯೊಗಳನ್ನ ಪೋಸ್ಟ್ ಮಾಡುತ್ತಿರುತ್ತಾರೆ. ಇನ್ನು ಅವರು ಪೋಸ್ಟ್ ಮಾಡುವ ವಿಡಿಯೊಗಳನ್ನ ನೋಡಿದ್ರೆ ಅವರು ಜನ ಸಾಮಾನ್ಯರಿಗೆ ಎಷ್ಟು ಹತ್ತಿರವಾಗಿದ್ದಾರೆ ಎಂಬುದು ತಿಳಿಯುತ್ತದೆ.

ಹೌದು, ಆನಂದ್ ಮಹಿಂದ್ರಾ ಅವರು ಈಗ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನ ಶೇರ್ ಮಾಡಿಕೊಂಡಿದ್ದು ಅದು ತುಂಬಾ ವೈರಲ್ ಆಗಿದೆ. ಮೆಕ್ಕೆ ಜೋಳವನ್ನ ಬೆಳೆಯುವ ರೈತರು ಅದನ್ನ ಬಿಡಿಸಲು ತುಂಬಾ ಕಷ್ಟಪಡಬೇಕು. ಆದರೆ ಇಲ್ಲೊಂದು ರೈತ ಕುಟುಂಬ ಜೋಳವನ್ನ ಬಿಡಿಸುವ ಸಲುವಾಗಿ ಉಪಯೋಗಿಸಿರುವ ಐಡಿಯಾವಂತೂ ಸೂಪರ್ ಆಗಿ ವರ್ಕ್ ಔಟ್ ಆಗಿದೆ.

ಹೌದು, ಅವರು ತಮ್ಮಲ್ಲಿರುವ ಬೈಕ್ ನ ಹಿಂಬದಿ ಚಕ್ರದಿಂದ ಮೆಕ್ಕೇಜೋಳದ ಕಾಳುಗಳನ್ನ ತುಂಬಾ ಸಲೀಸಾಗಿ ಬಿಡಿಸುತ್ತಿದ್ದು ಅದನ್ನ ನೀವು ವಿಡಿಯೋದಲ್ಲಿ ನೋಡಬಹುದಾಗಿದೆ. ಇನ್ನು ಈ ವಿಡಿಯೋ ಶೇರ್ ಮಾಡಿಕೊಂಡಿರುವ ಆನಂದ್ ಮಹಿಂದ್ರಾ ಅವರು ಬೈಕ್ ನ್ನ ಹೀಗೂ ಉಪಯೋಗಿಸಿಕೊಳ್ಳಬಹುದಾ ಎಂಬುದರ ಬಗ್ಗೆ ನಾನು ಕನಸಿನಲ್ಲೂ ಯೋಚನೆ ಮಾಡಿರಲಿಲ್ಲ. ಹೀಗೇ ರೈತರು ತಮ್ಮಲ್ಲಿರುವ ವಾಹನಗಳನ್ನೇ ಉಪಯೋಗಿ ಯಂತ್ರಗಳ ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಕಾಂಟಿನೆಂಟಲ್ ಟೈರ್ ಗಳನ್ನ ಕಾರ್ನ್ ಟಿನೆಂಟಲ್ ಎಂದು ಹೆಸರು ಬದಲಾಯಿಸಬೇಕಿತ್ತು ಎಂದು ಅವರು ಟ್ವೀಟ್ ಮಾಡಿದ್ದಾರೆ.