ಖ್ಯಾತ ಕ್ರಿಕೆಟಿಗರನ್ನ ಮದುವೆಯಾಗಿರುವ ಬಾಲಿವುಡ್ ನಟಿಯರು

Cinema Sports
Advertisements

ನಮಸ್ತೇ ಸ್ನೇಹಿತರೇ, ಹಲವಾರು ವರ್ಶಗಳಿಂದ ಕ್ರಿಕೆಟ್ ರಂಗಕ್ಕೂ ಬಾಲಿವುಡ್ ಚಿತ್ರರಂಗಕು ಅವಿನಾಭಾವ ಸಂಭಂದವಿದೆ. ಇನ್ನು ಕ್ರಿಕೆಟಿಗರಿಗೆ ಮನಸೋತಿರುವ ಹಲವು ಬಾಲಿವುಡ್ ಸ್ಟಾರ್ ನಟಿಯರು ಅವರನ್ನ ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದಾರೆ. ಯಾವೆಲ್ಲಾ ಬಾಲಿವುಡ್ ನಟಿಯರು ಕ್ರಿಕೆಟಿಗರನ್ನ ಮದುವೆಯಾಗಿದ್ದಾರೆ ಎಂಬುದನ್ನ ನೋಡೋಣ ಬನ್ನಿ..

Advertisements

ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿ ತಂಡವನ್ನ ಮುನ್ನೆಡೆಸಿದ್ದ ಮೊಹಮದ್ ಅಜರುದ್ದೀನ್ ಹಾಗೂ ಬಾಲಿವುಡ್ ನ ಸುಂದರ ನಟಿ ಸಂಗೀತ ಬಿಜಲಾನಿ ಅವರ ನಡುವಿನ ಲವ್ ಸ್ಟೋರಿ ಬಗ್ಗೆ ೮೦ರ ದಶಕದಲ್ಲಿ ಸಖತ್ ಸುದ್ದಿಯಾಗಿತ್ತು. ಆಗ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು 1996ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರು ವಿವಾಹ ಸಂಭದ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಇನ್ನು ವೈಯುಕ್ತಿಕ್ ಕಾರಣಗಳಿಂದ ೨೦೧೦ರಲ್ಲಿ ಇವರಿಬ್ಬರು ಬೇರೆ ಬೇರೆಯಾದರು.

ಇನ್ನು ಬೌಲಿಂಗ್ ವಿಭಾಗದಲ್ಲಿ ಮಿಂಚಿದ್ದ ಜಹೀರ್ ಖಾನ್ ಅವರನ್ನ ಚಕ್ ದೇ ಇಂಡಿಯಾ ಚಿತ್ರದಲ್ಲಿ ನಟಿಸಿ ಖ್ಯಾತರಾಗಿದ್ದ ನಟಿ ಸಾಗರಿಕಾ ಘಾಟ್ಗೆ ಮದುವೆಯಾದರು. ಆದರೆ ಇವರ ನಿಚ್ಚಿತಾರ್ಥದ ವಿಷಯ ಬಹಿರಂಗ ಆಗುವವರೆಗೂ ಇವರ ಪ್ರೀತಿಯ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಇನ್ನು ಜಹೀರ್ ಖಾನ್ ಮತ್ತು ಸಾಗರಿಕಾ 23 ನವೆಂಬರ್ 2017 ರಂದು ಮದುವೆಯಾದರು. ಸ್ಪಿನ್ ಬೌಲರ್ ಆಗಿ ಮಿಂಚಿದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹರಭಜನ್ ಸಿಂಗ್ ಬಾಲಿವುಡ್ ನಟಿ ಗೀತಾ ಬಸ್ರು ಜೊತೆ ಮದುವೆಯಾಗಿದ್ದಾರೆ. ಮೊದಲಿಗೆ ಸ್ನೇಹಿತರಾಗಿದ್ದ ಇವರು ಬಳಿಕ ಇವರಿಬ್ಬರ ನಡುವೆ ಪ್ರೀತಿ ಏರ್ಪಟ್ಟಿದ್ದು 20 ಅಕ್ಟೋಬರ್ 2015ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

ಭಾರತ ಕ್ರಿಕೆಟ್ ತಂಡದಲ್ಲಿ ಸ್ಪೋಟಕ ಬ್ಯಾಟ್ಸ್ ಮೆನ್ ಆಗಿ ಮಿಂಚಿದ ಯುವರಾಜ್ ಸಿಂಗ್ ಬಾಡಿಗಾರ್ಡ್ ಸಿನಿಮಾದಲ್ಲಿ ಕೆಲಸ ಮಾಡಿದ್ದ ಹ್ಯಾಜೆಲ್ ಕೆಚ್ ಎನ್ನುವವರ ಜೊತೆ ಡೇಟಿಂಗ್ ಮಾಡಿದ್ದು 30 ನವಂಬರ್ 2016ರಂದು ಮದುವೆಯಾಗುತ್ತಾರೆ. ಇನ್ನು ಕನ್ನಡದ ದನಕಾಯೋನು ಚಿತ್ರ ಸೇರಿದಂತೆ ಬಾಲಿವುಡ್ ಚಿತ್ರಗಳಲ್ಲೂ ನಟಿಸಿರುವ ನಟಿ ಹಾಗೂ ಮಾಡೆಲ್ ಕೂಡ ಆಗಿರುವ ನತಾಶಾ ಸ್ಟಾಂಕೋವಿಕ್ ಅವರು ಖ್ಯಾತ ಕ್ರಿಕೆಟಿಗನಾಗಿರುವ ಹಾರ್ಧಿಕ್ ಪಾಂಡ್ಯ ಜೊತೆ ರ’ಹಸ್ಯವಾಗಿ ಮದುವೆಯಾದರು ಎಂದು ಹೇಳಲಾಗಿದ್ದು ಇತ್ತೀಚೆಗಷ್ಟೇ ತಂದೆ ತಾಯಿಯಾಗಿರುವ ಅವರಿಗೆ ಒಂದು ಗಂಡು ಮಗು ಇದೆ.

ಇನ್ನು ಭಾರತೀಯ ತಂಡದ ನಾಯಕ ಹಾಗೂ ಆರ್ಸಿಬಿ ತಂಡದ ಕ್ಯಾಪ್ಟನ್ ಕೂಡ ಆಗಿರುವ ವಿರಾಟ್ ಕೊಹ್ಲಿ ಖ್ಯಾತ ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ 11 ಡಿಸೆಂಬರ್ 2017ರಂದು ಇಟಲಿಯಲ್ಲಿ ಸಪ್ತಪದಿ ತುಳಿಯುತ್ತಾರೆ. ಇನ್ನು ಮೊನ್ನೆಯಷ್ಟೇ ಅನುಷ್ಕಾ ತಾಯಿಯಾಗುತ್ತಿರುವ ವಿಚಾರವನ್ನ ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.