ಬೆಳ್ಳುಳ್ಳಿಯನ್ನ ಈ ರೀತಿಯಾಗಿ ದೇಹಕ್ಕೆ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡಿ..

Kannada News

ಸ್ನೇಹಿತರೇ, ಅಡುಗೆಗಾಗಿ ಬಳಸುವ ಬೆಳ್ಳುಳ್ಳಿಯ ಸೇವನೆ ಹಲವಾರು ಕಾಯಿಲೆಗಳಿಗೆ ರಾಮಬಾಣವಾಗಿದೆ. ನಾವು ಬೆಳ್ಳುಳ್ಳಿಯನ್ನ ಪ್ರತಿದಿನ ಊಟದ ಮೂಲಕ ಸೇವಿಸುತ್ತೇವೆ. ಆದರೆ ಬೆಳ್ಳುಳ್ಳಿಯನ್ನ ಜಜ್ಜಿ ಹಾಲಿನಲ್ಲಿ ಬೆರೆಸಿ ಸೇವಿಸಿದಲ್ಲಿ ದೇಹಕ್ಕೆ ಹಲವಾರು ಪ್ರಯೋಜನಗಳನ್ನ ಪಡೆದುಕೊಳ್ಳಬಹುದಾಗಿದೆ. ಬೆಳ್ಳುಳ್ಳಿಯ ಒಂದು ಪೀಸ್ ನ್ನ ಜಜ್ಜಿ ಹಾಲಿನಲ್ಲಿ ಹಾಕಿ ಮಿಕ್ಸ್ ಮಾಡಬೇಕು, ಬಳಿಕ ಹಾಲನ್ನ ಕುದಿಸಿ ಕುಡಿಯಬೇಕು. ಇದರಿಂದ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳು, ವಿಟಮಿನ್ ಗಳು ಜೊತೆಗೆ ಕ್ಯಾಲ್ಸಿಯಂ ಗಳು ಸಿಗುತ್ತವೆ.

ದೇಹದಲ್ಲಿ ಪ್ಲೇಟ್ ಲೇಟ್ ಗಳು ಕಡಿಮೆ ಇದ್ದಲ್ಲಿ ಹಾಲು ಹಾಗೂ ಬೆಳ್ಳುಳ್ಳಿ ಮಿಶ್ರಣ ಕುಡಿಯುವುದರಿಂದ ಪ್ಲೇಟ್ ಲೇಟ್ ಗಳು ಹೆಚ್ಚಾಗಲು ಇದು ಕಾರಣವಾಗುತ್ತದೆ. ಇನ್ನು ಕೊಲೆಸ್ಟರಾಲ್ ಕಡಿಮೆ ಮಾಡುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಇನ್ನು ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೆಚ್ಚಾಗಿರುವ ಕಾರಣ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ. ಹೃದಯಕ್ಕೆ ಸಂಬಂದಿಸಿದ ರೋಗಗಳನ್ನ ನಿಯಂತ್ರಣ ಮಾಡುವುದರ ಜೊತೆಗೆ ಹಲವು ರೀತಿಯ ಕ್ಯಾನ್ಸರ್ ಗಳನ್ನ ನಿವಾರಿಸುವ ಶಕ್ತಿ ಕೂಡ ಹೊಂದಿದೆ.

ಮಧುಮೇಹವನ್ನ ನಿಯಂತ್ರಣದಲ್ಲಿಡುವುದರ ಜೊತೆಗೆ ರ’ಕ್ತ ಸಂಚಾರವನ್ನ ಉತ್ತಮಗೊಳ್ಳುವನಂತೆ ಮಾಡುವ ಶಕ್ತಿ ಇದರಲ್ಲಿದೆ. ಇನ್ನು ಬೆಳ್ಳುಳ್ಳಿಯ ಈ ಮಿಶ್ರಣವನ್ನ ಕುಡಿಯುವುದರಿಂದ ಗಾಯಗಳು ಅತೀ ಶೀಘ್ರವಾಗಿ ಗುಣಮುಖವಾಗುತ್ತವೆ. ಚಯಾಪಚಯ ಕ್ರಿಯೆ ಚೆನ್ನಾಗಿ ನಡೆಯುವುದರಿಂದ ಹೆಚ್ಚು ತೂಕ ಹೊಂದಿರುವವರಿಗೆ ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ಈ ಮಿಶ್ರಣ ಬಹಳ ಉಪಯುಕ್ತವಾಗಿದೆ. ಇನ್ನು ಮುಖದಲ್ಲಿ ಬರುವ ಮೊಡವೆಗಳ ನಿಯಂತ್ರಣ ಮಾಡುವ ಈ ಮಿಶ್ರಣ ಚರ್ಮದ ಸೌಂದರ್ಯ ಹೆಚ್ಚಾಗುವಲ್ಲಿ ಉಪಯುಕ್ತವಾಗಿದೆ.