ದೇಶವೇ ಮೆಚ್ಚುವಂತಹ ಕೆಲಸ ಮಾಡಿದ ಬಾಹುಬಲಿ ಪ್ರಭಾಸ್ !

Cinema
Advertisements

ಬಾಹುಬಲಿ ಚಿತ್ರದ ಮೂಲಕ ದೇಶ ವಿದೇಶಗಳಲ್ಲಿ ಸೂಪರ್ ಸ್ಟಾರ್ ನಟನಾಗಿ ಹೆಸರು ಮಾಡಿರುವ ಟಾಲಿವುಡ್ ನ ರೆಬೆಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ತಾವು ಹಿಂದೆ ಕೊಟ್ಟಿದ್ದ ಮಾತಿನಂತೆ ಈಗ ನಡೆದುಕೊಂಡಿದ್ದಾರೆ. ಹೌದು ನಟ ಪ್ರಭಾಸ್ ಈ ಹಿಂದೆ ಅರಣ್ಯ ಪ್ರದೇಶವನ್ನ ದತ್ತು ಪಡೆಯುವುದಾಗಿ ಹೇಳಿದ್ದರು. ಈಗ ಅವರು ಕೊಟ್ಟ ಮಾತಿನಂತೆ ಬರೋಬ್ಬರಿ ೧೬೫೦ ಎಕರೆ ಅರಣ್ಯ ಪ್ರದೇಶವನ್ನ ದತ್ತು ಪಡೆದಿದ್ದಾರೆ.

ಇನ್ನು ಅರಣ್ಯ ಪ್ರದೇಶವು ಹೈದರಾಬಾದ್ ನಗರದಿಂದ ೨೦ ಕಿಮೀ ದೂರದಲ್ಲಿರುವ ದುಂಡಿಗಲ್ ಬಳಿ ಇದೆ. ಖಾಜಿಪಲ್ಲಿ ಮಿಡಲು ಅರಣ್ಯ ಪ್ರದೇಶ ಎಂದೇ ಕರೆಯಲಾಗುವ ಇದರ ಅಭಿವೃದ್ಧಿಗಾಗಿ ಈಗಾಗಲೇ ಪ್ರಭಾಸ್ ಎರಡು ರೂಪಾಯಿ ಕೋಟಿಗಳ ಹಣವನ್ನ ನೀಡಿದ್ದಾರೆ ಎನ್ನಲಾಗಿದೆ.

Advertisements

ಇನ್ನು ಅಲ್ಲಿನ ಅರಣ್ಯ ಸಚಿವರು ಹಾಜಿಗೂ ರಾಜ್ಯ ಸಭಾ ಸದಸ್ಯರೊಂದಿಗೆ ನಟ ಪ್ರಭಾಸ್ ಅದೇ ಜಗದಲ್ಲಿ ಈಕೋ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದಾರೆ. ಇನ್ನು ಇದರಲ್ಲಿನ ಒಂದು ಭಾಗವನ್ನ ಉದ್ಯಾನವವನ್ನಾಗಿ ಪರಿವರ್ತನೆ ಮಾಡಲಾಗುವುದು ಎಂದು ಹೇಳಲಾಗಿದೆ. ಇನ್ನು ಶಿಲಾನ್ಯಾಸ ನೆರವೇರಿಸಿರುವ ಈಕೋ ಪಾರ್ಕ್ ಗೆ ನಟ ಪ್ರಭಾಸ್ ಅವರ ತಂದೆಯ ಹೆಸರನ್ನ ಇಡಲಾಗುವುದು ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಅರಣ್ಯ ನಾಶವಾಗುತ್ತಿರುವ ಇಂತಹ ಸಮಯದಲ್ಲಿ ಅರಣ್ಯದ ಅಭಿವೃದ್ದಿಗಾಗಿ ನಟ ಪ್ರಭಾಸ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.