ಬಿಗ್ ಬಾಸ್ ಸಂಚಿಕೆ 8 ಈ ವರ್ಷ ಶುರುವಾಗುತ್ತೋ ಇಲ್ಲವೋ ?

Entertainment
Advertisements

ದೇಶದೆಲ್ಲೆಡೆ ಹರಡುತ್ತಿರುವ ಸೋಂಕಿನ ಕಾರಣದಿಂದಾಗಿ ಸ್ಯಾಂಡಲ್ವುಡ್ ಸೇರಿದಂತೆ ಭಾರತೀಯ ಚಿತ್ರೋದ್ಯಮದ ಮೇಲೆ ಬಾರೀ ಪೆಟ್ಟು ಬಿದ್ದಿದೆ. ಇನ್ನು ಈಗಾಗಲೇ ಸ್ಟಾಪ್ ಆಗಿದ್ದ ಚಿತ್ರೋದ್ಯಮ ಹಾಗೂ ಕಿರುತೆರೆಯ ಚಿತ್ರೀಕರಣಗಳು ಮತ್ತೆ ಒಂದೊಂದೇ ಪ್ರಾರಂಭವಾಗಿವೆ. ಇನ್ನು ಇದರ ನಡುವೆಯೇ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಇನ್ನು ಈಗಾಗಲೇ ಹಿಂದಿ ಬಿಗ್ ಬಾಸ್ ಶೋ ಗೆ ಎಲ್ಲಾ ರೀತಿಯ ಸಿದ್ದತೆಗಳು ನಡೆದಿದ್ದು ತೆಲುಗಿನ ಬಿಗ್ ಬಾಸ್ ಸಂಚಿಕೆ ಈಗಾಗಲೇ ಶುರುವಾಗಿದೆ. ಇನ್ನು ಪ್ರತೀ ವರ್ಷದಂತೆ ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಸಾರವಾಗುತ್ತಿತ್ತು. ಆದರೆ ಸೋಂಕಿನ ಕಾರಣದಿಂದಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಾರಂಭವಾಗಬೇಕಿದ್ದ ಬಿಗ್ ಬಾಸ್ ಸಂಚಿಕೆ ೮ ಕಾರ್ಯಕ್ರಮವನ್ನ ಪ್ರಸಾರ ಮಾಡಲು ಸಾಧ್ಯವಾಗಿಲ್ಲ.

Advertisements

ಇನ್ನು ಸರ್ಕಾರ ಕೂಡ ಸಿನಿಮಾ ಸೇರಿದಂತೆ ಕಿರುತೆರೆಯ ರಿಯಾಲಿಟಿ ಶೋಗಳನ್ನ ನಡೆಸಲು ಅನುಮತಿ ನೀಡಿದೆ. ಆದರೆ ಮಾಹಿತಿಗಳ ಪ್ರಕಾರ ಈ ವರ್ಷದ ಬಿಗ್ ಬಾಸ್ ಸಂಚಿಕೆ ಇನ್ನು ಆರು ತಿಂಗಳ ಬಳಿಕ ಶುರುವಾಗಲಿದೆ ಎಂದು ಹೇಳಲಾಗಿದೆ. ಅಂದರೆ ಮುಂದಿನ ವರ್ಷ ಬಿಗ್ ಬಾಸ್ ೮ ರ ಸಂಚಿಕೆ ಶುರುವಾಗಲಿದೆ. ಅಲ್ಲಿಗೆ ಈ ವರ್ಷ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗುವುದಿಲ್ಲ ಎಂದು ಹೇಳಲಾಗುತ್ತಿದೆ.