ಅರಿಶಿಣ ಮತ್ತು ಸಾಸಿವೆಯಲ್ಲಿದೆ ನೀವು ನಂಬಲಾರದಂತಹ ಅನೇಕ ಲಾಭಗಳು

Kannada News
Advertisements

ಅರಿಶಿಣವು ಕೇವಲ ಅಡುಗೆಗೆ ಮಾತ್ರ ಸೀಮಿತವಾಗಿಲ್ಲ. ಹಲವಾರು ಔಷಧಿ ಗುಣಗಳನ್ನ ಹೊಂದಿರುವ ಅರಿಶಿಣ ಜೀರ್ಣ ಶಕ್ತಿಯನ್ನ ಹೆಚ್ಚಿಸುವಲ್ಲಿ ಉಪಯುಕ್ತವಾಗಿದೆ. ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿಯುವುದರಿಂದ ಗಂಟಲು ನೋವು ಗುಣವಾಗುತ್ತದೆ. ಮೊಸರಿನಲ್ಲಿ ಅರಿಶಿಣ ಪುಡಿ ಹಾಕಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಅಧಿಕವಾಗುತ್ತದೆ. ಸಾಮಾನ್ಯವಾಗಿ ಆಯುರ್ವೇದದ ಔಷಧಿಗಳಲ್ಲಿ ಅರಿಶಿಣ ಬಳಕೆಯಾಗುತ್ತದೆ. ಇನ್ನು ಅರಿಶಿಣವನ್ನ ಮುಖಕ್ಕೆ ಹಚ್ಚಿ ಸ್ನಾನ ಮಾಡುವುದರಿಂದ ಸಹಜ ಬ್ಲೀಚಿಂಗ್ ಆಗುತ್ತದೆ.

ಅರಿಶಿಣವನ್ನ ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಮಕೈಗೆ ಹಚ್ಚುವುದರಿಂದ ದೇಹದ ಮೇಲಿನ ಅನವಶ್ಯಕ ಕೂದಲುಗಳು ಉದುರಿ ಹೋಗುತ್ತವೆ. ಅರಿಶಿಣ ಹಚ್ಚುವುದರಿಂದ ಸು’ಟ್ಟಗಾ’ಯಗಳು ವಾಸಿಯಾಗುತ್ತವೆ. ಇನ್ನು ಮೂಲವ್ಯಾಧಿ ಸೇರಿದಂತೆ ಸಂಧಿವಾತ ಮೊದಲಾದವುಗಳಿಗೆ ಅರಿಶಿಣ ಔಷಧಿಯಂತೆ ಉಪಯುಕ್ತವಾಗಿದೆ. ಕೆಂಡದ ಮೇಲೆ ಅರಿಶಿಣದ ಪುಡಿ ಹಾಕಿ ಹೊಗೆ ಪಡೆಯುವುದರಿಂದ ನೆಗಡಿ ಕೂಡ ವಾಸಿಯಾಗುತ್ತದೆ. ಅರಿಶಿಣ ಗಂಧವನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಗುಳ್ಳೆಗಳು ಹಾಗೂ ಮೊಡವೆಗಳು ಗುಣವಾಗುತ್ತವೆ.

ಒಗ್ಗರಣೆಗೆ ಹಾಕುವ ಸಾಸಿವೆಯಲ್ಲಿದೆ ಹಲವಾರು ಉಪಯೋಗಗಳು : ಸಾಸಿವೆ ಪುಡಿಯನ್ನ ಬಿಸಿ ನೀರಿಗೆ ಹಾಕಿ ಕುಡಿಯುವುದರಿಂದ ಗಂಟಲುನೋವು ಹಾಗೂ ಕೆರೆತ ವಾಸಿಯಾಗುತ್ತದೆ. ಕುತ್ತಿಗೆನೋವು ನಿವಾರಣೆಯಾಗುತ್ತದೆ. ಸಾಸಿವೆ ಎಣ್ಣೆಯನ್ನ ಸ್ವಲ್ಪ ಬಿಸಿ ಮಾಡಿ ಮೈಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಚರ್ಮಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಕಾಯಿಲೆಗಳು ಬರುವುದಿಲ್ಲ.

ಇನ್ನು ಸಾಸಿವೆ ಕಾಳುಗಳನ್ನ ಆಗಾಗ್ಗೆ ಅಗೆಯುವುದರಿಂದ ಹಲ್ಲು ನೋವು ಗುಣವಾಗುತ್ತದೆ. ಸಾಸಿವೆ ಅರೆದು ಮೈಗೆ ಹಚ್ಚುವುದರಿಂದ ಚಳಿಗಾಲದಲ್ಲಿ ಚರ್ಮ ಒಡೆಯುವುದಿಲ್ಲ. ಸಾಸಿವೆ ಪುಡಿಯನ್ನ ಬಿಸಿನೀರಿನಲ್ಲಿ ಕಲಸಿ ಮೈಕೈಗೆ ಹಚ್ಚುವುದರಿಂದ ಚರ್ಮದ ಹೊಟ್ಟಿನ ಸಮಸ್ಯೆ ನಿವಾರಣೆ ಆಗುತ್ತದೆ. ಹಸಿ ಸಾಸಿವೆಯನ್ನ ರಾಯತ ಮಾಡಿ ಸೇವಿಸುವುದರಿಂದ ಸಾಮಾನ್ಯ ಆರೋಗ್ಯ ಉತ್ತಮವಾಗಿರುತ್ತದೆ.