ಏಕಾಂಗಿಯಾಗಿ 30 ವರ್ಷದ ಶ್ರಮ ಬರೋಬ್ಬರಿ 3 ಕಿಮೀ ಕಾಲುವೆ ! ಆಧುನಿಕ ಭಗೀರಥನೇ ಈತ..

Advertisements

ನಮಸ್ತೇ ಸ್ನೇಹಿತರೇ, ತಾನು ತನ್ನ ಕುಟುಂಬ ಚೆನ್ನಾಗ್ಗಿದ್ದರೆ ಸಾಕು ಅಂತ ಯೋಚನೆ ಮಾಡುವವರೇ ನಮ್ಮಲ್ಲಿ ಹೆಚ್ಚು. ಆದರೆ ಇಂತಹ ಜನರ ನಡುವೆ ತಮ್ಮ ಇಡೀ ಜೀವನವನ್ನೆಲ್ಲಾ ಪರರಿಗೋಸ್ಕರವೇ ಮುಡುಪಾಗಿಟ್ಟ ಮಹಾನಾ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ಹೌದು, ತನ್ನ ಊರಿಗೆ ರಸ್ತೆ ಇಲ್ಲವೆಂದು ತಾನೊಬ್ಬನೇ ನಿಂತು ರಸ್ತೆ ನಿರ್ಮಿಸಿದ ಬಿಹಾರದ ಮಾಂಝಿ ಕತೆ ಬಗ್ಗೆ ನಿಮೆಗೆಲ್ಲಾ ಗೊತ್ತೇ ಇದೆ. ಈಗ ಅದೇ ರಾಜ್ಯ ಬಿಹಾರದ ಮತ್ತೊಬ್ಬ ವ್ಯಕ್ತಿ ಯಾರೂ ಮಾಡದ ಕೆಲಸವನ್ನ ತಾನೊಬ್ಬನೇ ಮಾಡಿ ಸುದ್ದಿಯಲ್ಲಿದ್ದಾನೆ.

ತನ್ನ ಹಳ್ಳಿಯಲ್ಲಿರುವ ಕೆರೆಯಲ್ಲಿ ನೀರಿಲ್ಲದ ಕಾರಣ ಆ ಕೆರೆಗೆ ನೀರು ಹರಿಸುವ ಸಲುವಾಗಿ ತಾನೊಬ್ಬನೇ ಬರೋಬ್ಬರಿ ಮೂರೂ ಕಿಮೀ ಕಾಲುವೆ ತೋಡಿ ಯಶಸ್ವಿಯಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಬಿಹಾರ ರಾಜ್ಯದ ಗಯಾ ಜಿಲ್ಲೆಗೆ ಸೇರಿದ ಕೋಠಿಲಾವಾ ಎಂಬ ಹಳ್ಳಿಯ ಲೌಂಗಿ ಬುಹಿಯಾನ್ ಎಂಬಾತನೇ ಈ ಮಹಾನ್ ಸಾಧನೆ ಮಾಡಿದ ವ್ಯಕ್ತಿ. ತನ್ನ ಹಳ್ಳಿಯ ಪಕ್ಕದಲ್ಲಿದ್ದ ಗುಡ್ಡವೊಂದರಿಂದ ತನ್ನೂರಿನ ಕೆರೆಗೆ ನೀರು ಹರಿಸುವ ಸಲುವಾಗಿ ಬರೋಬ್ಬರಿ ೩೦ ವರ್ಷ ಶ್ರಮಪಟ್ಟು ಕೆಲಸ ಮಾಡಿ ೩ ಕಿಮೀ ದೂರದ ಕಾಲುವೆ ತೋಡಿ ನೀರು ಹರಿಸಿದ್ದಾನೆ. ಜೀವನಕ್ಕಾಗಿ ಹೈನುಗಾರಿಕೆ ಮತ್ತು ವ್ಯವಸಾಯವನ್ನ ನಂಬಿದ್ದ ಈ ಊರಿನ ಜನರು ನೀರಿಲ್ಲದೆ ತುಂಬಾ ಕಷ್ಟ ಪಡುತ್ತಿದ್ದರು.

Advertisements

ಇನ್ನು ಆ ಹಳ್ಳಿಯ ಪಕ್ಕದಲ್ಲೇ ಇದ್ದ ಗುಡ್ಡದ ಮೇಲೆ ಬೀಳುತ್ತಿದ್ದ ಮಳೆಯ ನೀರು ಹರಿದು ನದಿಯನ್ನ ಸೇರುತಿತ್ತು. ಇನ್ನು ಈ ನೀರನ್ನ ಹೇಗಾದರೂ ಮಾಡಿ ಕಾಲುವೆಯ ಮೂಲಕ ತನ್ನ ಊರಿನ ಕೆರೆಗೆ ಹರಿಸಬೇಕು ಎಂದು ನಿರ್ಧಾರ ಮಾಡಿದ ಲೌಂಗಿ ಬುಹಿಯಾನ್ ಬೆಂಬಲಕ್ಕೆ ಆ ಊರಿನ ಜನ ಸಹಕಾರ ನೀಡಲಿಲ್ಲ. ಆದರೂ ಎದೆ ಗುಂದದೆ ತನ್ನ ಉದ್ದೇಶವನ್ನ ಸಾರ್ಥಕ ಮಾಡಲೇಬೇಕೆಂಬ ಛಲದಿಂದ ಏಕಾಂಗಿಯಾಗಿಯೇ ಕಾಲುವೆ ನಿರ್ಮಾಣ ಮಾಡಲು ನಿಂತು ಈಗ ಯಶಸ್ವಿ ಕೂಡ ಆಗಿದ್ದಾನೆ. ತನ್ನ ೩೦ ವರ್ಷದ ಶ್ರಮದ ಫಲವಾಗಿ ಇಂದು ತನ್ನೂರಿನ ಕೆರೆಗೆ ಗುಡ್ಡದಿಂದ ನೀರು ಹರಿಯುತ್ತಿದ್ದು ಊರಿನ ಕೃಷಿಗೆ ಹೈನಗಾರಿಕೆಗೆ ಸಹಾಯವಾಗಿದೆ. ಸ್ನೇಹಿತರೇ, ಸಿನಿಮಾದಲ್ಲಿ ನಟಿಸಿ ಡೈಲಾಗ್ ಗಳು ಹೇಳುವವರು ನಮ್ಮ ಹೀರೋಗಳಲ್ಲ..ವರ್ಷಗಳ ಕಾಲ ಮತ್ತೊಬ್ಬರಿಗಾಗಿ ಶ್ರಮಪಡುವವರೇ ನಮ್ಮ ನಿಜವಾದ ಹೀರೋಗಳು..