ಚಾಣಕ್ಯನ ನೀತಿಯಲ್ಲಿದೆ ಮಹಿಳೆಯರ ಬಗೆಗಿನ ನೀವು ನಂಬಲಾರದ ಸತ್ಯಗಳು !

Kannada News
Advertisements

ನಮಸ್ತೇ ಸ್ನೇಹಿತರೇ, ಅಪಾರ ಬುದ್ದಿವಂತಿಕೆ ಹೊಂದಿದ್ದ, ಮಹಾನ್ ತತ್ವಜ್ನ್ಯಾನಿ, ರಾಜ ಗುರು ಎಂದೇ ಹೆಸರು ಪಡೆದಿದ್ದ ಚಾಣಕ್ಯನ ನೀತಿಗಳು ಇಂದಿನ ಕಾಲಕ್ಕೂ ಅನ್ವಯವಾಗುತ್ತವೆ. ನಾವು ಜೀವನದಲ್ಲಿ ಹೇಗೆಲ್ಲಾ ವ್ಯವಹರಿಸಬೇಕು, ಸಮಾಜದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಚಾಣಕ್ಯನ ನೀತಿಗಳು ಹೇಳುತ್ತವೆ. ಅವುಗಳನ್ನ ಪಾಲಿಸಿದರೆ ನಮ್ಮ ಜೀವನ ಸುಖಮಯವೂ ಆಗಿರುತ್ತದೆ. ಇನ್ನು ಚಾಣಕ್ಯನು ಮಹಿಳೆಯರ ಬಗ್ಗೆ ಹಲವಾರು ನೀತಿಕರವಾದ ವಿಷಯಗಳನ್ನ ತಿಳಿಸಿದ್ದಾನೆ.

*ವಿವಾಹವಾಗಿರುವ ಸ್ತ್ರೀ ಏನೇ ವಿಷಯ ಆಗಲಿ ತನ್ನ ಪತಿಯ ಅನುಮತಿ ಪಡೆದುಕೊಳ್ಳಬೇಕಾದದ್ದು ಅವಶ್ಯಕವಾಗಿದೆಯಂತೆ. ಒಂದು ವೇಳೆ ಹೀಗೆ ಮಾಡದೇ ತನ್ನಷ್ಟಕ್ಕೆ ತಾನೇ ಎಲ್ಲಾ ನಿರ್ಧಾರಗಳನ್ನ ತೆಗೆದುಕೊಳ್ಳುವ ಮಹಿಳೆಯ ಪತಿಯ ಆಯುಸ್ಸು ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.

Advertisements

*ಇನ್ನು ಪುರುಷರಿಗಿಂತ ಸ್ತ್ರೀಯರಲ್ಲಿ ಈ ಎಲ್ಲಾ ವಿಷಯಗಳು ಹೆಚ್ಚಿಗೆ ಇರುತ್ತವೆಯಂತೆ. ಅದೇನೆಂದರೆ ಹಸಿವು ಎರಡು ಪಟ್ಟು ಇದ್ದರೆ, ಜನ್ಮತಃ ನಾಚಿಕೆ ಸ್ವಭಾದವರಾಗಿರುವ ಕಾರಣ ಮಹಿಳೆಯರಲ್ಲಿ ನಾಚಿಕೆ ಎನ್ನುವುದು ಪುರುಷರಿಗಿಂತ ನಾಲ್ಕು ಪಟ್ಟು ಹೆಚ್ಚಾಗಿರುತ್ತದಂತೆ. ಇನ್ನು ಧೈರ್ಯದ ವಿಷಯಕ್ಕೆ ಬಂದಲ್ಲಿ ಸಾಮನ್ಯವಾಗಿ ಪುರುಷರಿಗೆ ಹೆಚ್ಚು ಧೈರ್ಯ ಎಂದು ಹೇಳಲಾಗುತ್ತದೆ. ಆದರೆ ಮಹಿಳೆಯರಿಗೆ ಪುರುಷರಿಗಿಂತ ಆರು ಪಟ್ಟು ಹೆಚ್ಚು ಧೈರ್ಯ ಇದೆಯಂತೆ. ಇನ್ನು ಮಹಿಳೆಯರಲ್ಲಿ ಆಸೆಯ ವಿಚಾರಕ್ಕೆ ಬಂದಲ್ಲಿ ಹೇಳುವುದೇ ಬೇಡ ಬಿಡಿ. ಕಂಡಿದ್ದೆಲ್ಲಾ ಬೇಕು ಎನ್ನುತ್ತೆ ಅವರ ಮನಸ್ಸು. ಹಾಗೆಯೆ ಪುರುಷರಿಗಿಂತ ಎಂಟು ಪಟ್ಟು ಹೆಚ್ಚಾಗಿ ಸ್ತ್ರೀಯರಲ್ಲಿ ಆಸೆ ಇದೆಯಂತೆ.

*ಒಬ್ಬ ಉತ್ತಮ ನಾಯಕನಿಲ್ಲದೆ ಆ ತಂಡ ಹೇಗೆ ಸೊಲುತ್ತೋ ಹಾಗೆಯೆ ಪತಿಯಿಲ್ಲದ ಕಾರಣ ಸ್ತ್ರೀ ನಾಶವಾಗುತ್ತಾಳೆ ಎಂದು ಹೇಳಲಾಗಿದೆ. ಆದರೆ ಇದು ಈಗಿನ ಕಾಲಕ್ಕೆ ಅನ್ವಯವಾಗುವುದಿಲ್ಲ ಎನ್ನುವುದು ನಮ್ಮ ಅಭಿಪ್ರಾಯ. ಏಕೆಂದರೆ ಗಂಡನನ್ನ ಕಳೆದುಕೊಂಡಿದ್ದರೂ ಎಷ್ಟೋ ಜನ ಮಹಿಳೆಯರು ಸಾಧನೆ ಮಾಡಿರುವ ನಿದರ್ಶನಗಳು ನಮ್ಮ ನಡುವೆ ಇವೆ.

*ಸಾಮಾನ್ಯವಾಗಿ ತಾವು ಮದುವೆಯಾಗುವ ಹುಡುಗಿ ತುಂಬಾ ಸುಂದರವಾಗಿರಬೇಕು ಎಂದು ಯುವಕರು ಬಯಸುತ್ತಾರೆ. ಆದರೆ ಚಾಣಕ್ಯ ಹೇಳುವುದೇ ಬೇರೆ..ಯುವತಿ ಕುರೂಪಿಯಾಗಿದ್ದರೂ ಪರವಾಗಿಲ್ಲ, ಆಕೆ ಒಳ್ಳೆಯ ಮನೆತನದಿಂದ ಬಂದಿದ್ದಾರೆ ಮದುವೆಯಾಗಬಹುದಂತೆ..ಆದರೆ ಹುಡುಗಿ ಎಷ್ಟೇ ಸುಂದರವಾಗಿದ್ದರೂ ಆಕೆ ಹುಟ್ಟಿ ಬೆಳೆದ ಮನೆತನ ಕೆಟ್ಟದಾಗಿದ್ದರೆ ಅಂತಹವರನ್ನ ಮದುವೆಯಾಗುವುದು ಜೀವನವೆಲ್ಲಾ ದುಃಖ ತುಂಬಿದಂತೆ ಎಂಬುದು ಮಹಾನ್ ಜ್ನ್ಯಾನಿ ಚಾಣಕ್ಯರ ಅಭಿಪ್ರಾಯವಾಗಿದೆ.

*ತಾಮ್ರದ ಪಾತ್ರೆಗಳನ್ನ ಹುಲಿ ಪದಾರ್ಥಗಳಿಂದ ಶುಭ್ರಮಾಡಬಹುದು..ಹಿತ್ತಾಳೆ ಪಾತ್ರೆಗಳನ್ನ ಬೂದಿಯಿಂದ ಶುಚಿ ಮಾಡಬಹುದು..ಹಾಗೆಯೆ ಸ್ತ್ರೀಯರ ಋತುಕ್ರಮ ಅವರನ್ನ ಶುಭ್ರಗೊಳಿಸುತ್ತದೆಯಂತೆ. ಮೀನಿನ ಹೆಜ್ಜೆಯನ್ನಾದರೂ ಕಂಡು ಹಿಡಿಯಬಹುದು ಆದರೆ ಸ್ತ್ರೀಯರ ಮನಸನ್ನ ತಿಳಿದುಕೊಳ್ಳುವುದು ಆಕೆಯನ್ನ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂಬ ಮಾತಿದೆ. ಹಾಗಾಗಿ ಮಹಿಳೆ ಹೆಚ್ಚಾಗಿ ಪ್ರೀತಿಸುತ್ತಾಳೆ ಎಂದು ತಿಲಿಯುವ ಪುರುಷ ಆಕೆಯ ಅಡಿಯಾಳಾಗುತ್ತಾನೆ ಎಂದು ಹೇಳಲಾಗಿದೆ.

*ಇನ್ನು ಮಹಿಳೆಯರಲ್ಲಿ ಅಸೂಯೆ, ಸ್ವಾರ್ಥ ಮನೋಭಾವನೆ, ಸುಳ್ಳನ್ನ ಹೇಳುವುದು, ಕೆಲವು ವಿಷಯಗಳಲ್ಲಿ ಕಠೋರವಾಗಿ ವರ್ತಿಸುವುದು ಇವೆಲ್ಲಾ ಗುಣಗಳು ಸ್ತ್ರೀಯರಲ್ಲಿ ಹೆಚ್ಚಾಗಿರುತ್ತವಂತೆ. ಆದರೆ ಇದೆ ಗುಣಗಳು ಅವರಿಗೆ ವೈರಿಯಾಗಿ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ ಎಂದು ಚಣ್ಯಾಕ್ಯ ನೀತಿಗಳಲ್ಲಿ ಹೇಳಲಾಗಿದೆ.