ತನ್ನ 90ಭಾಗದಷ್ಟು ಆಸ್ತಿಯೆನ್ನೆಲ್ಲಾ ಬಡವರಿಗಾಗಿ ಮೀಸಲಿಟ್ಟ ಈ ನಟ ಈಗ ಮಾಡ್ತಾ ಇರೋದೇನು ಗೊತ್ತಾ ?

Cinema

ಸಿನಿಮಾದಲ್ಲಿ ಯಾವುದೇ ಪಾತ್ರವನ್ನು ಆದರೂ ಸರಿಯೇ ಲೀಲಾಜಾಲವಾಗಿ ಪಾತ್ರ ನಿಭಾಯಿಸುವ ನಟ ನಾನಾಪಾಟೀಕರ್ ಅವರು. ಭಾರತೀಯ ಸಿನಿಮಾ ರಂಗ ಕಂಡ ಅದ್ಭುತ ನಟ, ಕಲಾವಿದ. ವಿಶಿಷ್ಟ ರೀತಿಯ ಗಡಸು ವಾಯ್ಸ್ ಹೊಂದಿರುವ ನಟ ನಾನಾಪಾಟೀಕರ್ ಅವರು ವಿಲನ್ ಸೇರಿದಂತೆ ಹಲವಾರು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತಾವು ಕಷ್ಟಪಟ್ಟು ದುಡಿದ ಹಣವನ್ನ ಬಡವರಿಗೋಸ್ಕರ ದಾನ ಮಾಡುತ್ತಾ ಮಾನವೀಯತೆಯನ್ನ ಮೆರೆಯುತ್ತಿರುವ ನಟ ನಾನಾಪಾಟೀಕರ್ ಅವರು ಅಷ್ಟು ಸುಲಭವಾಗಿ ಇಷ್ಟು ಎತ್ತರದ ಸ್ಥಾನಕ್ಕೆ ಬಂದಿಲ್ಲ.

ಕಡುಬಡತನದ ಕುಟುಂಬದಲ್ಲಿ ಹುಟ್ಟಿದ ಈ ನಟ ಸಿನಿಮಾ ರಂಗಕ್ಕೆ ಬರುವುದಕ್ಕೂ ಮೊದಲು ಸಿನಿಮಾ ಪೋಸ್ಟರ್ ಗಳನ್ನ ಅಂಟಿಸುವುದು, ರಸ್ತೆಯ ಗೋಡೆಗಳ ಮೇಲೆ ಪೇಂಟಿಂಗ್ ಸೇರಿದಂತೆ ಚಿಕ್ಕ ಪುಟ್ಟ ಕೆಲಸಗಳನ್ನ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ದಿನಂಪ್ರತಿ ಕೇವಲ ೩೦ ರೂಪಾಯಿಗಳಿಗೆ ಕೆಲಸ ಮಾಡುತ್ತಿದ್ದ ನಾನಾಪಾಟೀಕರ್ ಅವರು ಇಷ್ಟೆಲ್ಲಾ ಕಷ್ಟಗಳ ಬಳಿಕ ಥಿಯೇಟರ್ ಕಲಾವಿದನಾಗಿ ಸಿನಿಮಾ ರಂಗ ಪ್ರವೇಶ ಮಾಡುತ್ತಾರೆ. ತಮ್ಮ ಅದ್ಭುತ ಅಭಿನಯದಿಂದ ಖ್ಯಾತ ನಟನಾಗಿ ಬೆಳೆದ ನಾನಾಪಾಟೀಕರ್ ಅವರು ತಾನು ತಂದೆ ವ್ಯವಸಾಯದ್ಅನುಭವಿಸಿದ್ದ ಕಷ್ಟ ನೋವುಗಳನ್ನ ಮರೆತಿರಲಿಲ್ಲ.

ಹೌದು, ಮೊದಲಿಗೆ ನಾನಾಪಾಟೀಕರ್ ಅವರು ಮಾಡುತ್ತಿದ್ದದ್ದು ವ್ಯವಸಾಯ. ಹಾಗಾಗಿ ಕೃಷಿಯಲ್ಲಿನ ಲಾಭ ನಷ್ಟಗಳ ಬಗ್ಗೆ ಚೆನ್ನಾಗಿಯೇ ಅರಿವಿದ್ದ ನಟ ನಾನಾಪಾಟೀಕರ್ ಅವರು ರೈತರಿಗೋಸ್ಕರ ಫೌಂಡೇಶನ್ ಒಂದನ್ನ ಸ್ಥಾಪನೆ ಮಾಡುತ್ತಾರೆ. ಕೃಷಿಯಲ್ಲಿನ ನಷ್ಟದಿಂದಾಗಿ ಸಾ’ವಿಗೀಡಾಗಿದ್ದ ಸುಮಾರು ೪೦೦ ಕುಟುಂಬದವರಿಗೆ ಆರ್ಥಿಕ ಸಹಾಯ ಸೇರಿದಂತೆ, ಸುಮಾರು ನಾಲ್ಕೈದು ಜಿಲ್ಲೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಿದ್ರು. ರೈತರಿಗೋಸ್ಕರ ಸುಮಾರು 22 ಕೋಟಿಗಿಂತ ಹೆಚ್ಚು ಹಣ ಸಂಗ್ರಹ ಮಾಡಿದ ನಾನಾಪಾಟೀಕರ್ ಅವರು ಅಷ್ಟೇ ಅಲ್ಲದೆ,ತಾವು ಸಿನಿಮಾದಿಂದ ಸಂಪಾದನೆ ಮಾಡಿದ ಶೇ ೯೦ರಷ್ಟು ಹಣವನ್ನ ಕೂಡ ರೈತರಿಗೋಸ್ಕರ ಮೀಸಲಿಟ್ಟರು.

ಇಷ್ಟೆಲ್ಲಾ ಕೋಟ್ಯಂತರ ರೂಪಾಯಿಗಳನ್ನ ರೈತರಿಗೆ ಮೀಸಲಿಟ್ಟ ನಟ ನಾನಾಪಾಟೀಕರ್ ಅವರು ತಾವು ವಾಸ ಮಾಡುತ್ತಿದ್ದದ್ದು ಮಾತ್ರ ಹಳೆಯ ಮನೆಯೊಂದ್ರಲ್ಲಿ. ಇನ್ನು ತಮ್ಮ ಸಿನಿಮಾ ಚಿತ್ರೀಕರಣ ಇಲ್ಲದ ಸಮಯದಲ್ಲಿ ಹಳ್ಳಿಗಳ ಕಡೆ ಸುತ್ತಾಡುತ್ತಿದ್ದ ನಾನಾಪಾಟೀಕರ್ ಅವರು ಅಲ್ಲಿನ ಜನರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಕೇವಲ ವಿಚಾರಿಸುತ್ತಿದ್ದದ್ದು ಮಾತ್ರವಲ್ಲದೆ, ತಮ್ಮಿಂದಾದಷ್ಟು ಸಹಾಯ ಕೂಡ ಮಾಡುತ್ತಿದ್ದರು. ಕೃಷಿಕರಿಗಾಗಿ ನೀರಿನ ವ್ಯವಸ್ಥೆ ಮಾಡುವುದು ನಾನಾಪಾಟೀಕರ್ ಉದ್ದೇಶವಾಗಿತ್ತು. ಹೀಗೆ ಸಾಮಾನ್ಯರಲ್ಲಿ ಅತೀ ಸಾಮಾನ್ಯರಾಗಿ ಬೆರೆಯುತಿದ್ದ ನಾನಾಪಾಟೀಕರ್ ಅವರು ತಮ್ಮಲ್ಲಿ ಕೋಟ್ಯಂತರ ಹಣ ಇದ್ದರೂ ಕೂಡ ಸಾಮಾನ್ಯರಂತಯೇ ಜೀವನ ನಡೆಸುತ್ತಿದ್ದರು. ರೈತರಿಗಾಗಿ ಸದಾ ಮಿಡಿಯುತ್ತಿದ್ದ ನಟ ನಾನಾಪಾಟೀಕರ್ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ತಿಳಿಸಿ..